2024 ವೇಳೆಗೆ ಚಂದ್ರನ ಮೇಲೆ ಮೊದಲ ಮಹಿಳೆಯನ್ನಿಳಿಸಲು ನಾಸಾದಿಂದ ಆರ್ಟೆಮಿಸ್ ಯೋಜನೆ

2024 ರ ವೇಳೆಗೆ ಚಂದ್ರನ ಮೇಲೆ ಮೊದಲ ಮಹಿಳೆ ಹಾಗೂ ಮತ್ತೋರ್ವ ಪುರುಷನನ್ನು ಕಳುಹಿಸುವುದಕ್ಕೆ ನಾಸಾ ಆರ್ಟೆಮಿಸ್ ಯೋಜನೆಯನ್ನು ಘೋಷಿಸಿದೆ. 
2024 ವೇಳೆಗೆ ಚಂದ್ರನ ಮೇಲೆ ಮೊದಲ ಮಹಿಳೆಯನ್ನಿಳಿಸಲು ನಾಸಾದಿಂದ ಆರ್ಟೆಮಿಸ್ ಯೋಜನೆ
2024 ವೇಳೆಗೆ ಚಂದ್ರನ ಮೇಲೆ ಮೊದಲ ಮಹಿಳೆಯನ್ನಿಳಿಸಲು ನಾಸಾದಿಂದ ಆರ್ಟೆಮಿಸ್ ಯೋಜನೆ

ವಾಷಿಂಗ್ ಟನ್: 2024 ರ ವೇಳೆಗೆ ಚಂದ್ರನ ಮೇಲೆ ಮೊದಲ ಮಹಿಳೆ ಹಾಗೂ ಮತ್ತೋರ್ವ ಪುರುಷನನ್ನು ಕಳುಹಿಸುವುದಕ್ಕೆ ನಾಸಾ ಆರ್ಟೆಮಿಸ್ ಯೋಜನೆಯನ್ನು ಘೋಷಿಸಿದೆ. 

ಚಂದ್ರನ ಮೇಲ್ಮೈ ನ ಕುರಿತು ಹೆಚ್ಚು ಸಂಶೋಧನೆ ನಡೆಸುವ ಉದ್ದೇಶದಿಂದ ನಾಸಾ ಈ ಯೋಜನೆಯನ್ನು ಘೋಷಿಸಿದ್ದು,  1972 ರ ಅಪೋಲೋ ಲೂನಾರ್ ಮಿಷನ್ ಬಳಿಕ ಮೊದಲ ಚಂದ್ರನಿಗೆ ಸಂಬಂಧಿಸಿದ ಮೊದಲ ಮಿಷನ್ ಇದಾಗಿದ್ದು,  ಸುಮಾರು $28 ಬಿಲಿಯನ್ ವೆಚ್ಚವಾಗಲಿದೆ. 

ಲೂನಾರ್ ಲ್ಯಾಂಡರ್ ನ್ನು ನಿರ್ಮಾಣ ಮಾಡುವುದಕ್ಕೆ ಮೂರು ಯೋಜನೆಗಳು ಪೈಪೋಟಿಯಲ್ಲಿವೆ. ಮೊದಲನೆಯದ್ದು ಅಮೇಜಾನ್ ಸಿಇಒ ಜೆಫ್ ಬೆಜೋಸ್ ಅವರ ಬ್ಲೂ ಒರೀಜಿನ್ ಲಾಕ್ಹೀಡ್ ಮಾರ್ಟಿನ್, ನಾರ್ಥ್ರಾಪ್ ಗ್ರಮ್ಮನ್ ಮತ್ತು ಡ್ರೇಪರ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ್ದಾಗಿದ್ದರೆ ಉಳಿದ ಎರಡು ಯೋಜನೆಗಳು ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಮತ್ತು ಡೈನೆಟಿಕ್ಸ್ ಕಂಪನಿಯದ್ದಾಗಿದೆ ಎಂದು ನಾಸಾ ತಿಳಿಸಿದೆ. 

ಮೊದಲ ನೌಕೆ ಆರ್ಟೆಮಿಸ್-1 ನವೆಂಬರ್ 2021 ರ ವೇಳೆಗೆ ಮಾನವ ರಹಿತವಾಗಿ ಉಡಾವಣೆಯಾಗಲಿದೆ. 2023 ರ ವೇಳೆಗೆ ಆರ್ಟೆಮಿಸ್-2 ಗಗನಯಾತ್ರಿಗಳನ್ನು ಹೊತ್ತೊಯ್ಯಲಿದ್ದು, ಚಂದ್ರನ ಸುತ್ತ ಸುತ್ತಲಿದೆ, ಆದರೆ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡ್ ಆಗುವುದಿಲ್ಲ.

ಆರ್ಟೆಮಿಸ್-3 1969 ರ ಅಪೋಲೋ 11 ಮಾದರಿಯಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ ಆದರೆ ಅಲ್ಲೇ ಒಂದು ವಾರಗಳ ಕಾಲ ಇರಲಿದೆ 2-5 ಬಾಹ್ಯ ಚಟುವಟಿಕೆಗಳನ್ನೂ ನಡೆಸಲಿದೆ, ಹಿಂದೆಂದಿಗಿಂತಲೂ ಭಿನ್ನವಾಗಿ ಚಂದ್ರನ ಮೇಲ್ಮೈ ಸಂಶೋಧನೆ ನಡೆಯಲಿದೆ ಎಂದು ನಾಸಾದ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com