ಹೊಸ ಪ್ರೈವೆಸಿ ಪಾಲಿಸಿ ಜಾರಿ ಮೂರು ತಿಂಗಳು ಮುಂದಕ್ಕೆ; ಅಕೌಂಟ್ ಡಿಲೀಟ್ ಮಾಡುವುದಿಲ್ಲ ಎಂದ ವಾಟ್ಸಾಪ್

ನೂತನ ಗೌಪ್ಯ ನೀತಿ ಜಾರಿಗೆ ಬರಲು 3 ತಿಂಗಳು ವಿಳಂಬವಾಗಲಿದೆ ಎಂದು ವಾಟ್ಸಾಪ್ ಸಂಸ್ಥೆ ಘೋಷಿಸಿದೆ. ಇತ್ತೀಚೆಗೆ ಗೌಪ್ಯತೆ ಕೊರತೆ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರಿಂದ ಭಾರೀ ಹಿನ್ನಡೆಯನ್ನು ವಾಟ್ಸಾಪ್ ಅನುಭವಿಸಿದ್ದು, ಗ್ರಾಹಕರು ಸಿಗ್ನಲ್, ಟೆಲಿಗ್ರಾಂ ಮೊರೆ ಹೋಗುತ್ತಿದ್ದಾರೆ.

Published: 16th January 2021 12:58 PM  |   Last Updated: 16th January 2021 01:09 PM   |  A+A-


Whatsapp

ವಾಟ್ಸಾಪ್

Posted By : Sumana Upadhyaya
Source : PTI

ಹ್ಯೂಸ್ಟನ್: ನೂತನ ಗೌಪ್ಯ ನೀತಿ ಜಾರಿಗೆ ಬರಲು 3 ತಿಂಗಳು ವಿಳಂಬವಾಗಲಿದೆ ಎಂದು ವಾಟ್ಸಾಪ್ ಸಂಸ್ಥೆ ಘೋಷಿಸಿದೆ. ಇತ್ತೀಚೆಗೆ ಗೌಪ್ಯತೆ ಕೊರತೆ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರಿಂದ ಭಾರೀ ಹಿನ್ನಡೆಯನ್ನು ವಾಟ್ಸಾಪ್ ಅನುಭವಿಸಿದ್ದು, ಗ್ರಾಹಕರು ಸಿಗ್ನಲ್, ಟೆಲಿಗ್ರಾಂ ಮೊರೆ ಹೋಗುತ್ತಿದ್ದಾರೆ.

ನೂತನ ಗೌಪ್ಯನೀತಿ ಆರಂಭದಲ್ಲಿ ಫೆಬ್ರವರಿ 8ರಂದು ಜಾರಿಗೆ ಬರಲಿದೆ ಎಂದು ವಾಟ್ಸಾಪ್ ಹೇಳಿತ್ತು. ವೈಯಕ್ತಿಕ ಸಂಭಾಷಣೆ ಅಥವಾ ಇತರ ಪ್ರೊಫೈಲ್ ಮಾಹಿತಿಗಳು, ಬ್ಯುಸಿನೆಸ್ ಮಾತುಕತೆಗಳಿಗೆ ವಾಟ್ಸಾಪ್ ಅಪ್ ಡೇಟ್ ಫೇಸ್ ಬುಕ್ ನೊಂದಿಗೆ ಡಾಟಾ ಹಂಚಿಕೊಳ್ಳಲು ಯಾವುದೇ ಪರಿಣಾಮ ಬೀರುವುದಿಲ್ಲ.

ಇತ್ತೀಚಿನ ಅಪ್ ಡೇಟ್ ಗಳಿಂದ ಗ್ರಾಹಕರ ಮನಸ್ಸಿನಲ್ಲಿ ಹತ್ತಾರು ಗೊಂದಲಗಳು, ಪ್ರಶ್ನೆಗಳು ಉದ್ಭವವಾಗಿದೆ. ಗೌಪ್ಯತೆ ವಿಷಯದಲ್ಲಿ ಸಾಕಷ್ಟು ತಪ್ಪು ಮಾಹಿತಿ ಹುಟ್ಟಿಕೊಂಡಿದೆ. ನಮ್ಮ ತತ್ವಗಳು ಮತ್ತು ವಿಷಯಗಳ ಬಗ್ಗೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ವಾಟ್ಸಾಪ್ ಕಂಪೆನಿಯ ಬ್ಲಾಗ್ ನಲ್ಲಿ ತಿಳಿಸಿದೆ.

ವಾಟ್ಸಾಪ್ ಅನ್ನು ಸರಳ ಕಲ್ಪನೆಯ ಮೇಲೆ ಆರಂಭಿಸಲಾಗಿದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು ಹಂಚಿಕೊಳ್ಳುವುದು ನಿಮ್ಮ ನಡುವೆ ಇರುತ್ತದೆ. ಇದರರ್ಥ ಗ್ರಾಹಕರ ವೈಯಕ್ತಿಕ ಸಂಭಾಷಣೆಗಳನ್ನು ನಾವು ರಕ್ಷಿಸುತ್ತೇವೆ, ಇದರಿಂದಾಗಿ ವಾಟ್ಸಾಪ್ ಅಥವಾ ಫೇಸ್‌ಬುಕ್ ಈ ಖಾಸಗಿ ಸಂದೇಶಗಳನ್ನು ನೋಡುವುದಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬರ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ನಾವು ಇಡುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ.

ಹೊಸ ಉದ್ಯಮ ಕಾರ್ಯಚಟುವಟಿಕೆ ಮೇ 15ರಂದು ಆರಂಭವಾಗಲಿದ್ದು, ಅದಕ್ಕೂ ಮುನ್ನ ಜನರ ವಿಶ್ವಾಸ ಗಳಿಸಲು ಕಂಪೆನಿಯ ನೀತಿ ನಿಯಮಗಳ ಪರಾಮರ್ಶೆಗೆ ಜನರ ಬಳಿಗೆ ಕೊಂಡೊಯ್ಯಲಾಗುವುದು, ಗೌಪ್ಯತೆ ಸುತ್ತ ಹಬ್ಬಿರುವ ತಪ್ಪುಮಾಹಿತಿ ಮತ್ತು ಸುರಕ್ಷತೆ ಕುರಿತು ಸಹ ಜನರಲ್ಲಿ ಉಂಟಾಗಿರುವ ಸಂದೇಹಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp