ಸಿಗ್ನಲ್ ಗೆ ಮಿಲಿಯನ್ ಗಟ್ಟಲೆ ಬಳಕೆದಾರರು: ದಿಢೀರ್ ತಾಂತ್ರಿಕ ದೋಷದಿಂದ ಗ್ರಾಹಕರಿಗೆ ತಾತ್ಕಾಲಿಕ ಅನನುಕೂಲ

ಕ್ರಾಸ್ ಪ್ಲಾಟ್ ಫಾರ್ಮ್ ಮೆಸೇಜಿಂಗ್ ಆಪ್ ಸಿಗ್ನಲ್ ನ್ನು ಕೆಲವೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು ಡೌನ್ ಲೋಡ್ ಮಾಡಿದ ಬೆನ್ನಲ್ಲೇ ದಿಢೀರ್ ತಾಂತ್ರಿಕ ದೋಷ ಉಂಟಾಗಿದ್ದು, ಗ್ರಾಹಕರು ಮೆಸೇಜ್ ಕಳಿಸಲು ಸಾಧ್ಯವಾಗದೇ ಅನನುಕೂಲ ಎದುರಿಸಿದ್ದಾರೆ.

Published: 16th January 2021 01:00 PM  |   Last Updated: 16th January 2021 01:11 PM   |  A+A-


Messaging app Signal faces global outage days after adding millions of users

ಸಿಗ್ನಲ್ ಗೆ ಮಿಲಿಯನ್ ಗಟ್ಟಲೆ ಬಳಕೆದಾರರು: ದಿಢೀರ್ ತಾಂತ್ರಿಕ ದೋಷದಿಂದ ಗ್ರಾಹಕರಿಗೆ ತಾತ್ಕಾಲಿಕ ಅನನುಕೂಲ

Posted By : Srinivas Rao BV
Source : The New Indian Express

ಕ್ಯಾಲಿಫೋರ್ನಿಯಾ: ಕ್ರಾಸ್ ಪ್ಲಾಟ್ ಫಾರ್ಮ್ ಮೆಸೇಜಿಂಗ್ ಆಪ್ ಸಿಗ್ನಲ್ ನ್ನು ಕೆಲವೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು ಡೌನ್ ಲೋಡ್ ಮಾಡಿದ ಬೆನ್ನಲ್ಲೇ ದಿಢೀರ್ ತಾಂತ್ರಿಕ ದೋಷ ಉಂಟಾಗಿದ್ದು, ಗ್ರಾಹಕರು ಮೆಸೇಜ್ ಕಳಿಸಲು ಸಾಧ್ಯವಾಗದೇ ಅನನುಕೂಲ ಎದುರಿಸಿದ್ದಾರೆ. 

ಜಾಗತಿಕ ಮಟ್ಟದಲ್ಲಿ ಮೊಬೈಲ್ ಆಪ್ ಗಳು ಹಾಗೂ ಡೆಸ್ಕ್ ಟಾಪ್ ಅಪ್ಲಿಕೇಷನ್ ಗಳಲ್ಲಿ ಸಿಗ್ನಲ್ ಮೂಲಕ ಮೆಸೇಜ್ ಕಳಿಸಲು ಸಾಧ್ಯವಾಗದೇ ಪರದಾಡಿದ್ದಾರೆ. 

ಈ ಬಗ್ಗೆ ಟ್ವಿಟರ್ ನಲ್ಲಿ ಸಿಗ್ನಲ್ ಸಂಸ್ಥೆ ಹೇಳಿಕೆ ನೀಡಿದ್ದು, ತಾಂತ್ರಿಕ ದೋಷ ಎದುರಾಗಿದೆ, ಶೀಘ್ರವೇ ಸಮಸ್ಯೆ ಬಗೆಹರಿಸುವುದಕ್ಕಾಗಿ ಯತ್ನಿಸುತ್ತಿದ್ದೇವೆ ಎಂದು ಸಿಗ್ನಲ್ ತಂಡ ತಿಳಿಸಿದೆ

ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ಹೊಸ ಪ್ರೈವೆಸಿ ಟರ್ಮ್ಸ್ ಬದಲಾವಣೆ ಮಾಡಿದಾಗಿನಿಂದಲೂ ಸಿಗ್ನಲ್ ಸೇರಿದಂತೆ ಪರ್ಯಾಯ ಮೆಸೇಜಿಂಗ್ ಆಪ್ ಗೆ ಬೇಡಿಕೆ ಹೆಚ್ಚಾಗಿತ್ತು.

ಹೆಚ್ಚುತ್ತಿರುವ ಗ್ರಾಹಕರನ್ನು ನಿಭಾಯಿಸುವುದಕ್ಕಾಗಿ ಹೆಚ್ಚು ಸರ್ವರ್ ಗಳು ಹಾಗೂ ಹೆಚ್ಚುವರಿ ಸಾಮರ್ಥ್ಯವನ್ನು ಅಳವಡಿಸಿಕೊಳ್ಳುತ್ತಿದ್ದೆವೆ ಎಂದು ಸಿಗ್ನಲ್ ತಂಡ ಹೇಳಿದೆ
 

Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp