ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಆ್ಯಸಿಡ್ ನೊಳಗೆ ಕೈ ಬೆರಳು ಇಟ್ಟ ಭೂಪ; ಮುಂದೇನಾಯ್ತು,..? ರೋಚಕ ವೈರಲ್ ವಿಡಿಯೋ
ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಕಠಿಣ ಆ್ಯಸಿಡ್ ನಲ್ಲಿ ಇಲ್ಲೊಬ್ಬ ವ್ಯಕ್ತಿ ಕೈ ಬೆರಳುಗಳನ್ನು ಹಾಕಿ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.
Published: 21st March 2021 10:32 PM | Last Updated: 21st March 2021 10:32 PM | A+A A-

ಸ್ಪೂನ್ ತಿಂದ ಆ್ಯಸಿಡ್
ನವದೆಹಲಿ: ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಕಠಿಣ ಆ್ಯಸಿಡ್ ನಲ್ಲಿ ಇಲ್ಲೊಬ್ಬ ವ್ಯಕ್ತಿ ಕೈ ಬೆರಳುಗಳನ್ನು ಹಾಕಿ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.
ದೇಶದಲ್ಲಿ ಆ್ಯಸಿಡ್ ದಾಳಿ ಸಂತ್ರಸ್ಥರ ಸಂಖ್ಯೆ ದೊಡ್ಡ ಮಟ್ಟದಲ್ಲೇ ಇದೆ. ಒಂದೇ ಒಂದು ಹನಿ ಆ್ಯಸಿಡ್ ಕೈ ಮೇಲೆ ಬಿದ್ದರೂ ವಿಲ ವಿಲ ಒದ್ದಾಡುತ್ತೇವೆ. ಅಂತಹುದರಲ್ಲಿ ಇಲ್ಲೋರ್ವ ಭೂಪ ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಕಠಿಣ ಆ್ಯಸಿಡ್ ನಲ್ಲಿ ಕೈ ಬೆರಳುಗಳನ್ನು ಮುಳುಗಿಸಿ ವಿಡಿಯೋ ಮಾಡಿದ್ದಾನೆ.
Metal spoon eaten by strong acid! wait for it pic.twitter.com/f672VI1FhB
— Chemistry (@ScienceVideos_) March 20, 2021
ಅಚ್ಚರಿ ಎಂದರೆ ಕಠಿಣ ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಆ್ಯಸಿಡ್ ನಲ್ಲಿ ಕೈ ಬೆರಳುಗಳನ್ನು ಮುಳುಗಿಸಿದ ವ್ಯಕ್ತಿಯ ಕೈಗೆ ಏನೂ ಆಗಿಲ್ಲ.. ಸಾಮಾನ್ಯ ನೀರನ್ನು ಮುಚ್ಚುವಂತೆ ಆತ ಆ್ಯಸಿಡ್ ಅನ್ನು ಮುಟ್ಟುತ್ತಿದ್ದಾನೆ. ಇದು ಹೇಗೆ ಸಾಧ್ಯ ಎಂಬುದು ಹಲವರ ಪ್ರಶ್ನೆ.. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಹಲವರು ಹಲವು ರೀತಿ ಪ್ರಶ್ನೆಗಳನ್ನು ಮತ್ತು ಉತ್ತರ ನೀಡಿದ್ದಾರೆ. ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಆಸ್ಯಿಡ್ ತಾನಿದ್ದ ಗಾಜಿನ ಲೋಟವನ್ನು ಏಕೆ ಕರಗಿಸಲಿಲ್ಲ.... ಅಂತೆಯೇ ವ್ಯಕ್ತಿ ತನ್ನ ಕೈ ಬೆರಳುಗಳನ್ನು ಮುಳುಗಿಸಿದರೂ ಆತನ ಕೈಗೆ ಏನೂ ಆಗಿಲ್ಲ.. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗಳಿಗೂ ನೆಟ್ಟಿಗರು ಉತ್ತರ ನೀಡುವ ಪ್ರಯತ್ನ ಮಾಡಿದ್ದು, ಈ ವಿಡಿಯೋದಲ್ಲಿ ಬಳಕೆ ಮಾಡಿರುವ ಕಠಿಣ ಆ್ಯಸಿಡ್ ಸ್ಪೂನ್ ನಲ್ಲಿರುವ ಗ್ಯಾಲಿಯಮ್ ಅಲ್ಯೂಮಿನಿಯಂ ಮಿಶ್ರಲೋಹದೊಂದಿಗೆ ಸಂಪರ್ಕ ಸಾಧಿಸಿದಾಗ ಸ್ಪೂನ್ ಅದಕ್ಕೆ ಪ್ರತಿಕ್ರಯಿಸಿ ಅದು ಕರಗುತ್ತದೆ. ಕೆಲ ಆ್ಯಸಿಡ್ ಗಳು ಪ್ರತಿಯೊಂದು ವಸ್ತುವಿನೊಂದಿಗೂ ಪ್ರತಿಕ್ರಿಯಿಸುವುದಿಲ್ಲ. ಅದು ಕೇವಲ ಸ್ಟೀಲ್ ನೊಂದಿಗೆ ಬೆರೆತಾಗ ಮಾತ್ರ ಪ್ರತಿಕ್ರಿಯೆ ತೋರುತ್ತದೆ..ಇದೂ ಕೂಡ ಅಂತಹ ಆ್ಯಸಿಡ್ ಆಗಿರಬಹುದು. ಇದೇ ಕಾರಣಕ್ಕೆ ವಿಡಿಯೋ ಮಾಡಿದ್ದ ವ್ಯಕ್ತಿಯ ಕೈ ಬೆರಳುಗಳಿಗೆ ಏನೂ ಆಗಿಲ್ಲ.. ಅಂತೆಯೇ ಗಾಜಿನ ಲೋಟ ಟೆಫ್ಲಾನ್ ಎಂಬ ರಾಸಾಯನಿಕ ಹೊಂದಿರುತ್ತದೆ. ಹೀಗಾಗಿ ಆ ಕಠಿಣ ಆ್ಯಸಿಡ್ ಗಾಜಿನ್ ಲೋಟದ ಮೇಲೂ ಪ್ರಭಾವ ಬೀರಿಲ್ಲ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೆ ಕೆಲವರು ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದೇ ತಪ್ಪು.. ಪುಟ್ಟ ಪುಟ್ಟ ಮಕ್ಕಳು ಇಂತಹ ವಿಡಿಯೋ ಗಳಿಂದ ಪ್ರೇರಿತರಾಗಿ ನಿಜವಾದ ಆ್ಯಸಿಡ್ ಮೇಲೆ ಪ್ರಯೋಗಕ್ಕೆ ಮುಂದಾದರೆ ಏನು ಗತಿ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ ಕ್ಷಣ ಮಾತ್ರಕ್ಕೆ ಮೈ ಜುಮ್ಮೆನಿಸುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.