ವಾಟ್ಸಾಪ್ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳಲ್ಲು ಇಂದೇ ಕೊನೆ ದಿನ: ಹೊಸ ನೀತಿಗೆ ಸಮ್ಮತಿಸದಿದ್ದವರ ಖಾತೆ ಏನಾಗಲಿದೆ? ಇಲ್ಲಿದೆ ವಿವರ

ವಾಟ್ಸಾಪ್ ತನ್ನ ಬಳಕೆದಾರರಿಗೆ ಮೇ 15 ರೊಳಗೆ ಅದರ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದೆ,  ಹಾಗೊಮ್ಮೆ ಒಪ್ಪಿಕೊಳ್ಳದೆ ಹೋದಲ್ಲಿ ನಿಮ್ಮಖಾತೆ ರದ್ದಾಗಲಿದೆಯೆ? ತಿಳಿಯಲು ಮುಂದೆ ಓದಿ.
ವಾಟ್ಸಾಪ್
ವಾಟ್ಸಾಪ್

ವಾಟ್ಸಾಪ್ ತನ್ನ ಬಳಕೆದಾರರಿಗೆ ಮೇ 15 ರೊಳಗೆ ಅದರ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದೆ,  ಹಾಗೊಮ್ಮೆ ಒಪ್ಪಿಕೊಳ್ಳದೆ ಹೋದಲ್ಲಿ ನಿಮ್ಮಖಾತೆ ರದ್ದಾಗಲಿದೆಯೆ? ತಿಳಿಯಲು ಮುಂದೆ ಓದಿ

ಬಳಕೆದಾರರರು ಮೇ 15 ರೊಳಗೆ ಅದರ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳದೆ ಹೋದರೆ ವಾಟ್ಸಾಪ್ ಖಾತೆ ರದ್ದಾಗುವುದಿಲ್ಲ ಆದರೆ ವಾಟ್ಸಾಪ್ ಖಾತೆಯ ಸಂಪೂರ್ಣ ಫೀಚರ್ ಸಿಕ್ಕುವುದಿಲ್ಲ.

"ಈ ಅಪ್‌ಡೇಟ್‌ನಿಂದಾಗಿ ಮೇ 15 ರಂದು ಯಾರೂ ತಮ್ಮ ಖಾತೆಗಳನ್ನುಕಳೆದುಕೊಳ್ಳುವುದಿಲ್ಲ" ಎಂದು ಕಂಪನಿ  ಹೇಳಿದೆ ಆದರೆ ಹೊಸ ನಿಯಮಗಳನ್ನು ಸ್ವೀಕರಿಸಿರೆಂದು ಆಗಾಗ ನೆನಪಿಸಲು ಪ್ರಾರಂಭಿಸಲಿದೆ. "ಅಲ್ಲಿಯವರೆಗೆ ನೀವು ವಾಟ್ಸಾಪ್ ನಲ್ಲಿ ಸೀಮಿತ ಫೀಚರ್ ಗಳನ್ನೇ ಪಡೆಯಲಿದ್ದೀರಿ.ಎಂದು ಕಂಪನಿ ಹೇಳಿದೆ. ಕಂಪನಿಯ ಪ್ರಕಾರ "ಎಲ್ಲಾ ಬಳಕೆದಾರರಿಗೆ ಒಂದೇ ಸಮಯದಲ್ಲಿ ಹೀಗೆ ಆಗುವುದಿಲ್ಲ."

ಒಂದೊಮ್ಮೆ ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸಲು ಒಪ್ಪಿಕೊಳ್ಳದೆ ಹೋದರೆ  ಬಳಕೆದಾರರು ತಮ್ಮ ಚಾಟ್ ಲಿಸ್ಟ್ ಅನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ, ಆದರೆ ಅವರು ಇನ್ನೂ ಒಳಬರುವ ಫೋನ್ ಮತ್ತು ವೀಡಿಯೊ ಕರೆಗಳಿಗೆ ಉತ್ತರಿಸಬಹುದು.

ನೋಟಿಫಿಕೇಷನ್ ಗಳನ್ನು ಸಕ್ರಿಯಗೊಳಿಸಿದ ಬಳಕೆದಾರರು, ಸಂದೇಶವನ್ನು ಓದಲು ಅಥವಾ ಪ್ರತಿಕ್ರಿಯಿಸಲು ಅದರ ಮೇಲೆ  ಟ್ಯಾಪ್ ಮಾಡಬಹುದು ಅಥವಾ ಮಿಸ್ ಆದ ಫೋನ್ ಅಥವಾ ವೀಡಿಯೊ ಕರೆಯನ್ನು ಮರಳಿ ಪಡೆಯಬಹುದು.

"ಕೆಲವು ವಾರಗಳ ಸೀಮಿತ ಫೀಚರ್ ನಂತರ, ನಿಮಗೆ ಒಳಬರುವ ಕರೆಗಳು ಅಥವಾ ನೋಟಿಫಿಕೇಷನ್ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಫೋನ್‌ಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದನ್ನು ವಾಟ್ಸಾಪ್ ನಿಲ್ಲಿಸುತ್ತದೆ" ಎಂದು ಕಂಪನಿಯ FAQ ಪೇಜ್ ಹೇಳುವುದು.

ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸಲು ಇಚ್ಚಿಸದ  ಬಳಕೆದಾರರು ತಮ್ಮ ಚಾಟ್ ಹಿಸ್ಟರಿಯನ್ನು ಆಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿ ಎಕ್ಸ್ ಪೋರ್ಟ್ ಮಾಡುವ  ಆಯ್ಕೆಯನ್ನು ಹೊಂದಿರುತ್ತಾರೆ ಮತ್ತು ಅವರ ಖಾತೆಯ ರಿಪೋರ್ಟ್ ಅನ್ನು ಡೌನ್‌ಲೋಡ್ ಮಾಡಿ.
ಅಂತಿಮವಾಗಿ ಪುನರಾವರ್ತಿತ ನೆನಪಿಸುವಿಕೆ ನಂತರ  ಬಳಕೆದಾರರು ಗೌಪ್ಯತೆ ನೀತಿಯನ್ನು ಸ್ವೀಕರಿಸದಿದ್ದರೆ ಇನ್ ಆಕ್ಟಿವ್ ಬಳಕೆದಾರರಿಗೆ ಸಂಬಂಧಿಸಿದ ವಾಟ್ಸಾಪ್ ನ ನೀತಿ ಇವರಿಗೆ ಅನ್ವಯವಾಗಲಿದೆ.  ಆಗ ಬಳಕೆದಾರರು ವಾಟ್ಸಾಪ್ ಬಳಕೆಯನ್ನು ನಿಲ್ಲಿಸಬೇಕ ಅಥವಾ ಮುಂದುವರಿಸಬೇಕಾ ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com