ಇಂಟರ್ ನೆಟ್ ಎಕ್ಸ್ಲೋರರ್
ಇಂಟರ್ ನೆಟ್ ಎಕ್ಸ್ಲೋರರ್

27 ವರ್ಷಗಳ ಇಂಟರ್ ನೆಟ್ ಎಕ್ಸ್ಪ್ಲೋರರ್ ಜೂನ್ 15 ಕ್ಕೆ ನಿವೃತ್ತಿ

ಮೈಕ್ರೋಸಾಫ್ಟ್ ನ ಅತ್ಯಂತ ಹಳೆಯ ಬ್ರೌಸರ್ ಐ.ಇ 27 ವರ್ಷಗಳ ಬಳಿಕ ಜೂ.15 ರಂದು ನಿವೃತ್ತಿ ಹೊಂದುತ್ತಿದೆ. 

ವಾಷಿಂಗ್ ಟನ್: ಮೈಕ್ರೋಸಾಫ್ಟ್ ನ ಅತ್ಯಂತ ಹಳೆಯ ಬ್ರೌಸರ್ ಐ.ಇ 27 ವರ್ಷಗಳ ಬಳಿಕ ಜೂ.15 ರಂದು ನಿವೃತ್ತಿ ಹೊಂದುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಮೈಕ್ರೋಸಾಫ್ಟ್ ವೆಬ್ ಸೈಟ್ ನ ಮೂಲಕ ಐ.ಇ ನಿವೃತ್ತಿಯನ್ನು ಘೋಷಿಸಲಾಗಿತ್ತು. 

ವಿಂಡೋಸ್ 10 ನ ಕೆಲವು ನಿರ್ದಿಷ್ಟ ಆವೃತ್ತಿಗಳಲ್ಲಿ ಐ.ಇ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದ್ದು, ಇದನ್ನು ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಮೈಕ್ರೀಸಾಫ್ಟ್ ಎಡ್ಜ್ ಗೆ ವರ್ಗಾವಣೆಯಾಗುವಂತೆ ಸೂಚಿಸಿದೆ. 

ಐ.ಇ ಬಳಕೆ ಮಾಡುವವರನ್ನು ಜು.15 ರಿಂದ ಮೈಕ್ರೋಸಾಫ್ಟ್ ಎಡ್ಜ್ ಗೆ ರೀಡೈರೆಕ್ಟ್ ಮಾಡಲಾಗುತ್ತದೆ. ಮಾರ್ಗದರ್ಶನದಿಂದ ಹಿಡಿದು, ವಿಡಿಯೋ ಟುಟೋರಿಯಲ್ ವರೆಗೂ ಎಲ್ಲಾ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಲಾಗುತ್ತದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. 

ಐ.ಇಯನ್ನು 1995 ರಲ್ಲಿ ವಿಂಡೋಸ್ 95 ರ ಆಡ್ ಆನ್ ಪ್ಯಾಕೇಜ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ಯಾಕೇಜ್ ನ ಭಾಗವಾಗಿ ಕಂಪನಿ ಉಚಿತವಾಗಿ ಬ್ರೌಸರ್ ನ್ನು ನೀಡುವುದನ್ನು ಪ್ರಾರಂಭಿಸಿತ್ತು. 

2003 ರಲ್ಲಿ ಬ್ರೌಸರ್ ಶೇ.95 ರಷ್ಟು ಬಳಕೆದಾರರೊಂದಿಗೆ ಉತ್ತುಂಗದಲ್ಲಿತ್ತು. ಆದರೆ ಹೊಸ ಬ್ರೌಸರ್ ಗಳ ಪರಿಚಯವಾದ ಪರಿಣಾಮ, ಏಕಾ ಏಕಿ ಬಳಕೆದಾರರ ಸಂಖ್ಯೆ ತೀವ್ರ ಕುಸಿತ ಕಂಡಿತ್ತು.

Related Stories

No stories found.

Advertisement

X
Kannada Prabha
www.kannadaprabha.com