ಆಪಲ್ ನಿಂದ ಐಫೋನ್ ಎಕ್ಸ್ ಎಸ್, ಐಫೋನ್‌ ಎಕ್ಸ್ ಎಸ್‌ ಮ್ಯಾಕ್ಸ್‌ ಬಿಡುಗಡೆ

Published: 13 Sep 2018 12:43 AM IST
ಐಫೋನ್ ಎಕ್ಸ್ ಎಸ್
ಕುಪರ್ಟಿನೋ: ಆಪಲ್ ಸಂಸ್ಥೆ ಐಫೋನ್ ಎಕ್ಸ್ ಎಸ್ ಮತ್ತು ಐಫೋನ್‌ ಎಕ್ಸ್ ಎಸ್‌ ಮ್ಯಾಕ್ಸ್‌ ಎಂಬ ಎರಡು ಅಪ್ ಡೇಟ್‌ ಮಾದರಿಗಳನ್ನು ಬುಧವಾರ ಬಿಡುಗಡೆ ಮಾಡಿದೆ.

ಇಂದು ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿ ಐಫೋನ್‌ ಸೀರೀಸ್ ನ ಎರಡು ವಿಭಿನ್ನ ಸೈಜ್ ಫೋನ್ ಗಳನ್ನು ಅನಾವರಣಗೊಳಿಸಲಾಗಿದ್ದು, ಐಫೋನ್‌ ಎಕ್ಸ್‌ಎಸ್‌ 5.8 ಇಂಚಿನ ಸ್ಕ್ರೀನ್‌ ಹಾಗೂ ಐಫೋನ್‌ ಎಕ್ಸ್‌ ಎಸ್ ಮ್ಯಾಕ್ಸ್ 6.5 ಇಂಚ್ ಸ್ಕ್ರೀನ್ ಹೊಂದಿದೆ.

ಇದೇ ವೇಳೆ ಆ್ಯಪಲ್‌ ಕಂಪನಿ ಮುಂದಿನ- ಪೀಳಿಗೆಯ ಆಪಲ್ ವಾಚ್ ಗಳನ್ನು ಅನಾವರಣಗೊಳಿಸಿದ್ದು, ಅದರಲ್ಲಿ ಬಳಕೆದಾರರು ತಮ್ಮ ಸ್ವಂತ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಅನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ವ್ಯಕ್ತಿ ಕುಸಿದು ಬೀಳುವುದನ್ನು ಪತ್ತೆಹಚ್ಚುತ್ತದೆ.

ಆಪ್ ಕಂಪನಿ ಬಿಡುಗಡೆ ಮಾಡಿರುವ ಹೊಸ ಐಫೋನ್ ಗಳು ಸೆಪ್ಟೆಂಬರ್‌ ಮೂರನೇ ವಾರದಲ್ಲೇ ಭಾರತದ ಮಾರುಕಟ್ಟೆಗೂ ಲಗ್ಗೆ ಇಡಲಿವೆ.
Posted by: LSB | Source: AFP

ಈ ವಿಭಾಗದ ಇತರ ಸುದ್ದಿ