ರಷ್ಯಾದ ಈ ಒಂದು ಕ್ಷಿಪಣಿ ಇಡೀ ಫ್ರಾನ್ಸ್ ದೇಶವನ್ನೇ ಇಲ್ಲವಾಗಿಸಿ ಬಿಡಬಹುದು!

ಮೂರನೇ ಮಹಾಯುದ್ಧಕ್ಕೆ ರಷ್ಯಾ ಸಿದ್ಧತೆ ನಡೆಸಿದೆ ಎಂಬ ವಾದದ ನಡುವೆಯೇ ರಷ್ಯನ್ ಆರ್ಮಿ ಇತ್ತೀಚೆಗೆ ಅತ್ಯಾಧುನಿಕ ಕ್ಷಿಪಣಿಯೊಂದರ ಪರೀಕ್ಷೆ ಮಾಡಿದ್ದು, ಈ ಕ್ಷಿಪಣಿ ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕದ ನಿದ್ದೆಗೆಡಿಸಿದೆ.
ರಷ್ಯಾದ ಪ್ರಬಲ ಸ್ಯಾಟನ್-2 ಕ್ಷಿಪಣಿ (ಸಂಗ್ರಹ ಚಿತ್ರ)
ರಷ್ಯಾದ ಪ್ರಬಲ ಸ್ಯಾಟನ್-2 ಕ್ಷಿಪಣಿ (ಸಂಗ್ರಹ ಚಿತ್ರ)

ಮಾಸ್ಕೋ: ಮೂರನೇ ಮಹಾಯುದ್ಧಕ್ಕೆ ರಷ್ಯಾ ಸಿದ್ಧತೆ ನಡೆಸಿದೆ ಎಂಬ ವಾದದ ನಡುವೆಯೇ ರಷ್ಯನ್ ಆರ್ಮಿ ಇತ್ತೀಚೆಗೆ ಅತ್ಯಾಧುನಿಕ ಕ್ಷಿಪಣಿಯೊಂದರ ಪರೀಕ್ಷೆ ಮಾಡಿದ್ದು, ಈ ಕ್ಷಿಪಣಿ ಇದೀಗ  ವಿಶ್ವದ ದೊಡ್ಡಣ್ಣ ಅಮೆರಿಕದ ನಿದ್ದೆಗೆಡಿಸಿದೆ.

ರಷ್ಯಾ ಬಳಿಯ ಇರುವ ಈ ಒಂದು ಕ್ಷಿಪಣಿ ಇಡೀ ಫ್ರಾನ್ಸ್ ದೇಶವನ್ನೇ ನಾಮಾವಶೇಷ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಥರ್ಮೋನ್ಯೂಕ್ಲಿಯರ್ ಖಂಡಾಂತರ  ಕ್ಷಿಪಣಿಯನ್ನು ರಷ್ಯಾ ಅಭಿವೃದ್ಧಿ ಪಡಿಸಿದ್ದು, ಈ ನೂತನ ಕ್ಷಿಪಣಿಗೆ ರಷ್ಯಾ ಸೇನೆ ಆರ್‍ಎಸ್-28 ಅಥವಾ ಸತಾನ್-2 ಎಂದು ನಾಮಕರಾಣ ಮಾಡಿದ್ದು, ಅಮೆರಿಕ ಸೇರಿದಂತೆ ಪ್ರಪಂಚದ  ಯಾವುದೇ ದೇಶದ ಪ್ರಬಲ ಕ್ಷಿಪಣಿಗಳಿಗಿಂತಲೂ ಇದು ಪ್ರಬಲ ಕ್ಷಿಪಣಿ ಎಂದು ಹೇಳಲಾಗುತ್ತಿದೆ. ಈ ಬೃಹತ್ ಹಾಗೂ ಪ್ರಬಲ ಕ್ಷಿಪಣಿ ಒಂದೇ ಬಾರಿಗೆ 10 ಪರಮಾಣು ಬಾಂಬ್ ಗಳನ್ನು  ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಪ್ರತೀ ಸೆಕೆಂಡ್‍ಗೆ 7 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರು ಈ ಸ್ಯಾಟನ್-2 ಕ್ಷಿಪಣಿ, 10 ಸಾವಿರ ಕಿ.ಮೀ ದೂರದವರೆಗಿನ ಶತ್ರುಗಳ ನೆಲೆಯನ್ನು ಧ್ವಂಸಗೊಳಿಸಬಲ್ಲದು ಎಂದು  ತಿಳಿದುಬಂದಿದೆ. ತಾಂತ್ರಿಕವಾಗಿ ಸಾಕಷ್ಟು ಅತ್ಯಾಧುನಿಕವಾಗಿರುವ ಈ ಪ್ರಬಲ ಕ್ಷಿಪಣಿ ಶತ್ರುಪಾಳಯದ ಯಾವುದೇ ರೀತಿ ರಾಡಾರ್ ಗಳಿಗೆ ಸಿಗದೇ ತನ್ನ ಗುರಿಯನ್ನು ಕ್ಷಣ ಮಾತ್ರದಲ್ಲಿ  ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿಯಲ್ಲಿರುವ ಸ್ಟೀಲ್ತ್ ಟೆಕ್ನಾಲಜಿ (ರಹಸ್ಯ ತಂತ್ರಜ್ಞಾನ) ಬಳಸಿಕೊಂಡು ಈ ಕ್ಷಿಪಣಿ ಈ ಕಾರ್ಯಾಚರಣೆ ನಡೆಸಲಿದೆ.

ಒಂದು ವೇಳೆ ಈ ಕ್ಷಿಪಣಿ ಸ್ಟೋಟಗೊಂಡರೆ ಊಹೆಗೂ ನಿಲುಕದ ಭಾರಿ ಪ್ರಮಾಣದ ವಿಧ್ವಂಸವಾಗುತ್ತದೆ. ಈ ಹಿಂದೆ ಅಮೆರಿಕ ಲಿಟಲ್ ಬಾಯ್ ಎಂಬ ಪರಮಾಣು ಬಾಂಬ್ ಜಪಾನ್ ನ  ಹಿರೋಷಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ಪ್ರಯೋಗಿಸಿತ್ತು. ಈ ಪ್ರಬಲ ಅಣುಬಾಂಬ್ ದಾಳಿಯಿಂದಾಗಿ ಈ ಎರಡೂ ನಗರಗಳು ಛಿದ್ರಗೊಂಡಿದ್ದವು. ಪ್ರಸ್ತುತ ರಷ್ಯಾ ಬಳಿ ಇರುವ ಈ  ಒಂದು ಕ್ಷಿಪಣಿ ಲಿಟಲ್ ಬಾಯ್ ಗಿಂತ 200 ಪಟ್ಟು ಸಾಮರ್ಥ್ಯವನ್ನು ಹೊಂದಿದೆ. ಈ ವೊಂದು ಕ್ಷಿಪಣಿ ಸ್ಫೋಟಗೊಂಡರೆ ಅಮೆರಿಕ ಎರಡನೇ ದೊಡ್ಡ ರಾಜ್ಯವಾಗಿರುವ 268,581 ಚದರ ಮೈಲಿ  ವಿಸ್ತೀರ್ಣ(6,96,241 ಕಿ.ಮೀ) ಹೊಂದಿರುವ ಟೆಕ್ಸಾಸ್ ರಾಜ್ಯ ಅಥವಾ ಇಡೀ ಫ್ರಾನ್ಸ್ ದೇಶವೇ ಸಂಪೂರ್ಣ ನಾಶವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಮಾಣು ಪೈಪೋಟಿಯಿಂದಾಗಿ ಅಮೆರಿಕ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಸೇರಿದಂತೆ ವಿಶ್ವದ ನಾನಾ ದೇಶಗಳು ಪರಮಾಣು ಬಾಂಬ್ ಗಳನ್ನು ತಯಾರಿಸಿ ಇಟ್ಟುಕೊಂಡಿವೆ. ಆದರೆ  ರಷ್ಯಾದ ಬಳಿ ಇರುವ ಈ ಒಂದು ಕ್ಷಿಪಣಿ ಮಾತ್ರ ಈ ಎಲ್ಲ ಬಾಂಬ್ ಗಳಿಗಿಂತಲೂ ಅತ್ಯಂತ ಪ್ರಬಲ ಹಾಗೂ ಭಾರಿ ವಿನಾಶಕಾರಿಯಾಗಿದ್ದು, ಕೇವಲ ಒಂದು ಕ್ಷಿಪಣಿ ಇಡೀ ಒಂದು ದೇಶವನ್ನೇ  ನಾಮಾವಶೇಷ ಮಾಡಬಲ್ಲದು ಎಂದರೆ ಇದರ ಸಾಮರ್ಥ್ಯವನ್ನು ನಾವು ಅರ್ಥೈಸಿಕೊಳ್ಳಬಹುದಾಗಿದೆ. ಅಮೆರಿಕ ಮತ್ತು ಯುರೋಪ್ ಖಂಡದ ದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಈ  ಪ್ರಭಾವಿ ಕ್ಷಿಪಣಿ ನಿರ್ಮಾಣ ಯೋಜನೆಗೆ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.

ರಷ್ಯಾದ ಸ್ಯಾಟನ್ -2 ಕ್ಷಿಪಣಿಯ ಚಿತ್ರವನ್ನು ರಷ್ಯಾದ Makeyev Rocket Design Bureau ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಮೊದಲ ಸತಾನ್ ಕ್ಷಿಪಣಿ 1970ರಲ್ಲಿ  ನಿರ್ಮಾಣವಾಗಿತ್ತು. 2020ಕ್ಕೆ ಸ್ಯಾಟನ್-2  ಕ್ಷಿಪಣಿ ರಷ್ಯಾ ಸೇನೆಗೆ ಸೇರ್ಪಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com