15 ವರ್ಷದ ಭಾರತೀಯ ಬಾಲಕ ಬ್ರಿಟನ್ ನ ಅತಿ ಕಿರಿಯ ಅಕೌಂಟೆಂಟ್!

15 ವರ್ಷದ ಭಾರತೀಯ ಬಾಲಕ ಬ್ರಿಟನ್ ನಲ್ಲಿ ಅತಿ ಕಿರಿಯ ಅಕೌಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
15 ವರ್ಷದ ಭಾರತೀಯ ಬಾಲಕ ಬ್ರಿಟನ್ ನ ಅತಿ ಕಿರಿಯ ಅಕೌಂಟೆಂಟ್!
15 ವರ್ಷದ ಭಾರತೀಯ ಬಾಲಕ ಬ್ರಿಟನ್ ನ ಅತಿ ಕಿರಿಯ ಅಕೌಂಟೆಂಟ್!
ಲಂಡನ್: 15 ವರ್ಷದ ಭಾರತೀಯ ಬಾಲಕ ಬ್ರಿಟನ್ ನಲ್ಲಿ ಅತಿ ಕಿರಿಯ ಅಕೌಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. 
ಶಾಲಾ ವಿದ್ಯಾರ್ಥಿಯಾಗಿರುವ ರಣ್ ವೀರ್ ಸಿಂಗ್ ಸಾಧು, ಅಕೌಂಟೆನ್ಸಿ ಸಂಸ್ಥೆಯೊಂದನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸುತ್ತಿರುವ ಅತಿ ಕಿರಿಯ ಅಕೌಂಟೆಂಟ್. 12 ವರ್ಷದವನಿದ್ದಾಗಲೇ ಸಂಸ್ಥೆಯನ್ನು ಸ್ಥಾಪಿಸಿದ್ದ ರಣ್ ವೀರ್ ಸಿಂಗ್ ಸಾಧು, ಈಗ ಮತ್ತೊಂದು ಸಂಸ್ಥೆಯನ್ನು ಹುಟ್ಟಿಹಾಕಿದ್ದು ಪ್ರಗತಿಯ ಹಾದಿಯಲ್ಲಿದೆ. 
ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಕೌಂಟ್ಸ್ ವಿಷಯದಲ್ಲಿ ಆಸಕ್ತಿ ತೋರಿರುವ ಈ ಬಾಲಕ ತನಗೆ 25 ವರ್ಷವಾಗುವ ವೇಳೆಗೆ ಮಿಲಿಯನೇರ್ ಆಗಿರಬೇಕೆಂಬ ಕನಸು ಹೊತ್ತಿದ್ದಾನೆ. "ಯುವ ಉದ್ಯಮಿಗಳಿಗೆ ಅವರ ಕನಸಿನ ಉದ್ಯಮವನ್ನು ಸ್ಥಾಪಿಸುವುದಕ್ಕೆ ಅಕೌಂಟ್ಸ್ ಹಾಗೂ ಆರ್ಥಿಕ ಸಲಹೆಗಾರನಾಗಿ ಸಹಾಯ ಮಾಡಬೇಂಬುದು ನನ್ನ ಉದ್ದೇಶ.  ನನ್ನ ಬಳಿ ಉದ್ಯಮ ಸ್ಥಾಪನೆಗೆ ಸಲಹೆ ಕೇಳಲು ಬರುವ ವ್ಯಕ್ತಿಗಳಿಗೆ ಪ್ರತಿ ಗಂಟೆಗೆ 12-15 ಪೌಂಡ್ ಶುಲ್ಕ ವಿಧಿಸುವ ಈ ಬಾಲಕನಿಗೆ ಈಗಾಗಲೇ 10 ಜನ ಗ್ರಾಹಕರಿದ್ದಾರೆ. ಶಾಲೆ ಮತ್ತು ನನ್ನ ಕನಸಿನ ಉದ್ಯಮ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕಷ್ಟದ ಕೆಲಸವೇನಲ್ಲ, ಮುಂದಿನ ದಿನಗಳಲ್ಲಿ ನಾನು ಮಿಲಿಯನೇರ್ ಆಗಿ ನನ್ನ ಉದ್ಯಮವನ್ನು ವಿಸ್ತರಿಸಬೇಕೆಂಬ ಕನಸು ಹೊಂದಿದ್ದೇನೆ ಎನ್ನುತ್ತಾನೆ ಬ್ರಿಟನ್ ನ ಅತಿ ಕಿರಿಯ ಅಕೌಂಟೆಂಟ್ ರಣ್ ವೀರ್ ಸಿಂಗ್ ಸಾಧು. 
12 ವರ್ಷದವನಿದ್ದಾಗ ಸಿಪಿಡಿ ಬೇಸಿಕ್ ಅಕೌಂಟಿಂಗ್ ಸರ್ಟಿಫಿಕೇಟ್ (ಆನ್ ಲೈನ್ ಅಕೌಂಟಿಂಗ್ ಕೋರ್ಸ್) ಪೂರ್ಣಗೊಳಿಸಿರುವ ರಣ್ ವೀರ್ ಸಿಂಗ್ ಸಾಧು,  2016 ರ ಜೂನ್ ನಲ್ಲಿ ತನ್ನ ಮೊದಲ ಸಂಸ್ಥೆಯನ್ನು ಪ್ರಾರಾಂಭಿಸಿದ ಎರಡೇ ವರ್ಷಕ್ಕೆ ಎರಡನೇ ಸಂಸ್ಥೆಯನ್ನು ಪ್ರಾರಂಭಿಸಿದ್ದಾನೆ. 
ರಣ್ ವೀರ್ ಸಿಂಗ್ ಸಾಧು ತಂದೆ ಅಮಾನ್ ಸಿಂಗ್ ಸಾಧು (50) ಬಿಲ್ಡರ್ ಆಗಿದ್ದರೆ, ತಾಯಿ ದಲ್ವೀಂದರ್ ಕೌರ್ ಸಾಧು (45) ಎಸ್ಟೇಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಅಕೌಂಟೆನ್ಸಿ ಸಂಸ್ಥೆಯನ್ನು ಪ್ರಾರಂಭಿಸುವುದಕ್ಕೆ ತಂದೆ-ತಾಯಿಗಳು ಎಂದಿಗೂ ಪ್ರೋತ್ಸಾಹ ನೀಡಿದ್ದರು ಎನ್ನುವ ರಣ್ ವೀರ್ ಸಿಂಗ್ ಸಾಧು, ತನ್ನ ಗ್ರಾಹಕರ ಖಾತೆಯ ವಿವರಗಳ ಮೇಲೆ ನಿಗಾ ವಹಿಸುವುದಕ್ಕಾಗಿಯೇ ಸಾಫ್ಟ್ ವೇರ್ ಒಂದನ್ನು ಹೊಂದಿದ್ದಾನೆ.  ಮಿಲಿಯನೇರ್ ಆಗಬೇಕೆಂದು ಕನಸು ಹೊತ್ತಿರುವ ರಣ್ ವೀರ್ ಸಿಂಗ್ ಸಾಧು ಕೆಲವೇ ವರ್ಷಗಳ ಹಿಂದೆ ಅಲ್ಟ್ರಾ ಎಜುಕೇಶನ್ ಕಿಡ್ಸ್  ಬ್ಯುಸಿನೆಸ್ ಅವಾರ್ಡ್ಸ್ ನಲ್ಲಿ ವರ್ಷದ ಟೆಕ್ ಬ್ಯುಸಿನೆಸ್ ಪ್ರಶಸ್ತಿಗೆ ಭಾಜನನಾಗಿದ್ದ. ತನ್ನ ಈ ಆಸಕ್ತಿಗೆ ಭಾರತೀಯ ಮೂಲದ ಕುಟುಂಬ ಆರ್ಥಿಕ ಕ್ಷೇತ್ರದಲ್ಲಿ ಹೊಂದಿರುವ ಆಸಕ್ತಿಯೇ ಕಾರಣ ಎಂದು ರಣ್ವೀರ್ ಸಿಂಗ್ ಸಾಧು ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com