ಈ ವೆಡ್ಡಿಂಗ್ ಕಾರ್ಡನ್ನು ನೀವು ತಿನ್ನಬಹುದು! ಬಳ್ಳಾರಿ ಯುವಕನ ಪ್ರಯೋಗಕ್ಕೆ ತಲೆದೂಗಿದ ಜನ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ, ಈ ವಿವಾಹವನ್ನು ಎಂದಿಗೂ ಮರೆಯದಂತೆ ನೆನಪಿಸಿಕೊಳ್ಳುವಂತಿರಬೇಕೆಂದು ಎಲ್ಲರೂ ಬಯಸುತ್ತಾರೆ.
ಕಲ್ಲಂಗಡಿ ಹಣ್ಣು ಬಳಸಿ ಂಆಡಿದ ಆಹ್ವಾನ ಪತ್ರಿಕೆ
ಕಲ್ಲಂಗಡಿ ಹಣ್ಣು ಬಳಸಿ ಂಆಡಿದ ಆಹ್ವಾನ ಪತ್ರಿಕೆ
ಬಳ್ಳಾರಿ: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ, ಈ ವಿವಾಹವನ್ನು ಎಂದಿಗೂ ಮರೆಯದಂತೆ ನೆನಪಿಸಿಕೊಳ್ಳುವಂತಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇಂತಹಾ ವಿವಾಹ ಆಮಂತ್ರಣ ಪತ್ರಿಕೆ ಸಹ ವಿಶೇಷವಾಗಿದ್ದು ಬೇರೆಲ್ಲರಿಗಿಂತ ಭಿನ್ನವಾಗಿರಬೇಕು ಎಂದು ಬಯಸುವವರೂ ಉಂಟು. ಅಂತಹವರಲ್ಲಿ ಬಳ್ಳಾರಿಯ ಸಸ್ಯವಿಜ್ಞಾನಿ  ಸಾಯಿ ಸಂದೀಪ್ ಸಹ ಒಬ್ಬರು. ಬಳ್ಲಾರಿಯ ತಿಪ್ಪೇರುದ್ರಸ್ವಾಮಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸಾಯಿ ಸಂದೀಪ್ ತಮ್ಮ ವಿವಾಹ ಆಮಂತ್ರಣ ಪತ್ರಿಕೆಗಾಗಿ ಕಲ್ಲಂಗಡಿ ಹಣ್ಣುಗಳನ್ನು ಬಳಸಿಕೊಂಡಿದ್ದಾರೆ. ಆಮೂಲಕ ಮದುವೆ ಆಮಂತ್ರಣ ಪತ್ರಿಕೆಯನ್ನು ಎಸೆಯದೆ ಬೇರೆಯವರ ದಾಹ ತಣಿಸುವಕ್ಕೆ ಬಳಸಬಹುದಾದಂತಹಾ ವಿನೂತನ ಪ್ರಯೋಗ ಅವರು ನಡೆಸಿದ್ದಾರೆ. ಸಂದೀಪ್ ಅವರ ಆಮಂತ್ರಣ ಪತ್ರಿಕೆ ನೋಡಿದ ಅವರ ಬಂಧು, ಮಿತ್ರರಿಗೆ ಅಚ್ಚರಿಯಾಗಿತ್ತು.
"ಅನೇಕ ಜನರು ಮದುವೆಯ ಕಾರ್ಡುಗಳಿಗೆ ಸಾವಿರಾರು ರು. ಖರ್ಚು ಮಾಡುತ್ತಾರೆ. ಆದರೆ ಹೆಚ್ಚಿನ ಬಂಧು, ಮಿತ್ರರು ತಮಗೆ ಸಿಕ್ಕಿದ ಈ ಆಮಂತ್ರಣ ಪತ್ರವನ್ನು ಹೆಚ್ಚು ಮುತುವರ್ಜಿವಹಿಸಿ ಕಾಪಾಡಿಕೊಳ್ಲದೆ ಕಸದೊಡನೆ ಎಸೆದು ಬಿಡುತ್ತಾರೆ. ಆದರೆ ಈ ಕಲ್ಲಂಗಡಿ ಹಣ್ಣಿನಿಂದಾದ ಆಹ್ವಾನ ಪತ್ರಿಕೆ ಎಂದಿಗೂ ವ್ಯರ್ಥವಾಗುವುದಿಲ್ಲ, ಜನರು ಇದನ್ನು ತಿನ್ನಬಹುದಾಗಿದೆ" ಸಂದೀಪ್  ವಿವರಿಸಿದರು.
"ನಾನು ನನ್ನ ಸಹೋದ್ಯೋಗಿ ತಿಪ್ಪೇಶನ ವಿವಾಹದ ಆಮಂತ್ರಣ ಪತ್ರವನ್ನು ನೋಡಿದ್ದೆ,  ಅದು ಬಹಳ ಅಂದವಾಗಿತ್ತು. ಆದರೆ ಹಿಂದೂ ವಿವಾಹಗಳಲ್ಲಿ, ಆಹ್ವಾನ ಪತ್ರಿಕೆಗಳಿಗೆ ಅದರದೇ ಆಗಿರುವ ಮಹತ್ವವಿದೆ. ಮದುವೆಯ ಕಾರ್ಡುಗಳಲ್ಲಿ ದೇವರು, ದೇವತೆಗಳ ಚಿತ್ರ ಹಾಕಲಾಗಿರುತ್ತದೆ. ಇಂತಹಾ ಪತ್ರಿಕೆ ಮಾಡಿಸುವಾಗಲೂ ದುಡ್ಡಿನ ಮುಖ ಯಾರೂ ನೋಡಲಾರರು. ಜನರು ಅವುಗಳನ್ನು ನಿಧಿ ಎಂದು ಭಾವಿಸುತ್ತಾರೆ. ಆದರೆ ಇಂತಹಾ ಆಹ್ವಾನ ಪಡೆದವರು ಮಾತ್ರ ಅದನ್ನು ಎಂದಿಗೂ ಗಮನಿಸದೆ ಕಸವೆಂದು ಬಿಸಾಡುತ್ತಾರೆ."
ಮಾಜಿ ರೈಲ್ವೆ ಉದ್ಯೋಗಿಯ ಮಗನಾಗಿರುವ ಸಂದೀಪ್ ಮೊದಲಿಗೆ ಸೇಬು, ಮಾವಿನ ಹಣ್ಣುಗಳ ಬಳಸಿ ಆಹ್ವಾನ ಪತ್ರಿಕೆ ತಯಾರಿಸಲು ಯೋಜಿಸಿದ್ದಾರೆ. ಆದರೆ ಅವು ಗಾತ್ರದಲ್ಲಿ ಚಿಕ್ಕದಾಗಿದೆ ಎಂದು ಪರಿಗಣಿಸಿ ಅವರು ಕಲ್ಲಂಗಡಿ ಹಣ್ಣನ್ನು ಆಯ್ದುಕೊಂಡರು. "ನಾನು ಬಟ್ಟೆ, ಕರವಸ್ತ್ರದಲ್ಲಿ ಮದುವೆಯ ಕರೆಯೋಲೆ ಮಾಡುವುದಕ್ಕೆ ಯೋಜಿಸಿದ್ದೆ, ಆದರೆ ಈ ಬೇಸಿಗೆಯ ದಿನದಲ್ಲಿ ಕಲ್ಲಂಗಡಿ ಹಣ್ಣು ಉಚಿತವಾಗಿ ಕಂಡಿತು"ಅವರು ವಿವರಿಸಿದರು.
"ನಾವು ಸ್ಥಳೀಯವಾಗಿ ಬೆಳೆದ ಸಣ್ಣ ಹಸಿರು ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದು ಪ್ರತಿ ದಿನವೂ ಬಳ್ಲಾರಿ ಎಪಿಎಂಸಿಯಿಂದ 50 ಕಲ್ಲಂಗಡಿಗಳನ್ನು  ನಾವು ವಿವಾಹ ಆಮಂತ್ರಣ ಮುದ್ರಣಕ್ಕೆ ಖರೀದಿಸಿದ್ದೆವು. ಇದರಿಂದ ಆಯಾ ದಿನದ ಹಣ್ಣು ತಾಜಾವಾಗಿಯೇ ನಮಗೆ ಸಿಗುತ್ತಿತ್ತು."ಸಂದೀಪ್ ಅವರ ಆತ್ಮೀಯ ಸ್ನೇಹಿತ ಪವನ್ ಕುಮಾರ್ ಹೇಳಿದ್ದಾರೆ.
ಸಂದೀಪ್ ಅವರ ಆಲೋಚನೆಯು ಅವರ ಹೆತ್ತವರಿ ಅಚ್ಚರಿ ತಂದಿದೆ,  "ಆರಂಭದಲ್ಲಿ, ನನ್ನ ಮಗ ಹಾಸ್ಯ ಮಾಡುತ್ತಿದ್ದಾನೆ ಎಂದು ಭಾವಿಸಿದ್ದೆವು. ಆದರೆ ಆ ಬಗ್ಗೆ ಅವನ ನಿಲುವು ಗಂಭೀರವಾಗಿತ್ತು. ಮೊದಲಿಗೆ ನಾವು ಆಕ್ಷೇಪಿಸಿದೆವು.  ಆದರೆ ಅವರ ಉದ್ದೇಶವನ್ನು ಕೇಳಿದ ನಂತರ ಒಪ್ಪಿಕೊಳ್ಳುವುದು ಉಚಿತ ಎನಿಸಿತು.ಸಂದೀಪ್ ಪೋಷಕರಾದ  ಪೋಷಕರು ಸಾಯಿ ಗೋಪಾಲ್ ಮತ್ತು ವಾಣಿ ಕುಮಾರ್ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com