ಹುಬ್ಬಳ್ಳಿ: ನಿರ್ಗತಿಕರಿಗೆ ರೊಟ್ಟಿ, ಬಟ್ಟೆ ನೀಡಿ ಆದರ್ಶ ಜೀವನ ನಡೆಸುವ ದಂಪತಿ!

ಹಸಿವು, ಬಡತನದ ಬೇಗೆಯಲ್ಲಿ ಬೆಂದವರಿಗಾಗಿ ಮಿಡಿಯುವ ಜೀವಗಳು ಇತ್ತೀಓಚಿನ ದಿನಗಳಲ್ಲಿ ಕಾಣುವುದು ಅಪರೂಪ ಅಂತಹವರ ನಡುವೆ ಅಂತಹಾ ಕಷ್ಟಪಡುವ ಬಡಜನರಿಗಾಗಿ ಊಟ, ಬಟ್ಟೆಗಳನ್ನು ನೀಡಿ ಸಲಹುವ ಕುಟುಂಬವೊಂದು ಕರ್ನಾಟಕದ ಹುಬ್ಬಳ್ಳಿಯಲ್ಲಿದೆ. ಕರಿಯಪ್ಪ ಶಿರಹಟ್ಟಿ ಹಾಗೂ ಅವರ ಕುಟುಂಬದ ಸದಸ್ಯರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ,  ನಗರದ ಇತರ ಸ್ಥಳಗಳಲ್ಲಿ ಸುತ್ತಿ ಅಗತ್ಯವಿರುವವ
ಕರಿಯಪ್ಪ ಶಿರಹಟ್ಟಿ ದಂಪತಿ
ಕರಿಯಪ್ಪ ಶಿರಹಟ್ಟಿ ದಂಪತಿ

ಹುಬ್ಬಳ್ಳಿ: ಹಸಿವು, ಬಡತನದ ಬೇಗೆಯಲ್ಲಿ ಬೆಂದವರಿಗಾಗಿ ಮಿಡಿಯುವ ಜೀವಗಳು ಇತ್ತೀಓಚಿನ ದಿನಗಳಲ್ಲಿ ಕಾಣುವುದು ಅಪರೂಪ ಅಂತಹವರ ನಡುವೆ ಅಂತಹಾ ಕಷ್ಟಪಡುವ ಬಡಜನರಿಗಾಗಿ ಊಟ, ಬಟ್ಟೆಗಳನ್ನು ನೀಡಿ ಸಲಹುವ ಕುಟುಂಬವೊಂದು ಕರ್ನಾಟಕದ ಹುಬ್ಬಳ್ಳಿಯಲ್ಲಿದೆ. ಕರಿಯಪ್ಪ ಶಿರಹಟ್ಟಿ ಹಾಗೂ ಅವರ ಕುಟುಂಬದ ಸದಸ್ಯರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ,  ನಗರದ ಇತರ ಸ್ಥಳಗಳಲ್ಲಿ ಸುತ್ತಿ ಅಗತ್ಯವಿರುವವರಿಗೆ ಆಹಾರ ಮತ್ತು ಬಟ್ಟೆಗಳನ್ನು ವಿತರಿಸುವ ಮೂಲಕ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.

ಹುಬ್ಬಳ್ಳಿಯ ಆನಂದನಗರದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಆಹಾರವನ್ನು ತಯಾರಿಸುವ ಇವರು ಹೊತ್ತಿಗೆ ತುತ್ತು ಹುಡುಕುವ ಕಷ್ಟದ ಬದುಕು ನಡೆಸುವವರಿಗೆ ಈ ಆಹಾರಗಳನ್ನು ಹಂಚುತ್ತಾರೆ.

ಇಷ್ಟಕ್ಕೂ ಕರಿಯಪ್ಪನವರದು ದೊಡ್ಡ ಶ್ರೀಮಂತ ಕುಟುಂಬವೇನೂ ಅಲ್ಲ, ಆತನೊಬ್ಬ ತೆಂಗಿನಕಾಯಿ ವ್ಯಾಪಾರ ನಡೆಸುವ ಸಣ್ಣ ವ್ಯಾಪಾರಿ. ಅವರ ಪತ್ನುಇ ಸುನಂದಾ ತಮ್ಮ ತಾಯಿಯೊಡನೆ ಮನೆಯಲ್ಲಿ ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಾರೆ.ಇವರು ಗದಗ ಮೂಲದವರಾಗಿದ್ದು ಇದೀಗ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.

ಕರಿಯಪ್ಪ ಈ ಮುನ್ನ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ನಂತರ ತೆಂಗಿನಕಾಯಿ ವ್ಯವಹಾರದಲ್ಲಿ ತೊಡಗಿದರು. ಅವರು ಎನ್‌ಜಿಒವೊಂದನ್ನು ಪ್ರಾರಂಭಿಸಿ ಆ ಮೂಲಕ ಕಳೆದ ಹಲವಾರು ವರ್ಷಗಳಿಂದ ನಿರ್ಗತಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ.: “ಜನರು ಆಹಾರ ಮತ್ತು ಆಶ್ರಯದಿಂದ ವಂಚಿತರಾಗಿರುವುದನ್ನು ನೋಡಲು ಕಷ್ಟವಾಗುತ್ತದೆ. ನಮ್ಮ ವ್ಯವಹಾರದಿಂದ ನಾವು ಪಡೆಯುವ ಲಾಭವನ್ನು ಆಶ್ರಯವಿಲ್ಲದ ಜನರಿಗೆ ಆಹಾರಕ್ಕಾಗಿ ಬಳಕೆ ಮಾಡುತ್ತೇನೆ" ಕರಿಯಪ್ಪ ಹೇಳಿದ್ದಾರೆ.

“ ನಾವು ಇತರರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಭಿಕ್ಷುಕರಿಗೆ ಹಣವನ್ನು ನೀಡುವ ಬದಲು, ಜನರು ಅವರಿಗೆ ಆಹಾರ ಮತ್ತು ನೀರನ್ನುಕೊಡಲಿ ಕರಿಯಪ್ಪನವರ ಪತ್ನಿ ಸುನಂದಾ ಹೇಳುತ್ತಾರೆ.

ಆಟೋರಿಕ್ಷಾ ಚಾಲಕ ಅಶ್ಫಾಕ್ ಮುಲ್ಲಾ ಮಾತನಾಡಿ "ನಾವು ಕರಿಯಪ್ಪನವರಿಗೆ ಹಣ ನೀಡಿದಾಗ ಅದನ್ನವರು ಸ್ವೀಕರಿಸಲಿಲ್ಲ. ಬದಲಿಗೆ ಅದೇ ಮೊತ್ತದಲ್ಲಿ ಆಹಾರದ ಪ್ಯಾಕೆಟ್ ಖರೀದಿಸಿ ನಿರ್ಗತಿಕರಿಗೆ ನೀಡಿರೆಂದು ಸಲಹೆ ಕೊಟ್ಟರು" ಎಂದಿದ್ದರೆ.a

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com