ಮೌಂಟ್ ವಿನ್ಸನ್ ಏರಿದ ಮೊದಲ ಅಂಗವಿಕಲ ಮಹಿಳಾ ಪರ್ವತಾರೋಹಿ ಅರುಣಿಮಾ ಸಿನ್ಹಾ!

ಭೂಮಿಯ ದಕ್ಷಿಣದ ಖಂಡ ಅಂಟಾರ್ಕಟಿಕದ ಅತ್ಯಂತ ಎತ್ತರದ ಮೌಂಟ್ ವಿನ್ಸನ್ ಶಿಖರವನ್ನು ಏರುವ ಮೂಲಕ...

Published: 05th January 2019 12:00 PM  |   Last Updated: 07th March 2020 03:00 PM   |  A+A-


Indian mountaineer Arunima Sinha prepares her equipment at her residence in Lucknow.

ತನ್ನ ಮನೆಯಲ್ಲಿ ಅರುಣಿಮಾ ಸಿನ್ಹಾ

Posted By : SUD
Source : The New Indian Express

ಭೂಮಿಯ ದಕ್ಷಿಣದ ಖಂಡ ಅಂಟಾರ್ಕಟಿಕದ ಅತ್ಯಂತ ಎತ್ತರದ ಮೌಂಟ್ ವಿನ್ಸನ್ ಶಿಖರವನ್ನು ಏರುವ ಮೂಲಕ ಅರುಣಿಮಾ ಸಿನ್ಹಾ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಶಿಖರವನ್ನೇರಿದ ಮೊದಲ ಮಹಿಳಾ ವಿಶೇಷಚೇತನ ಎಂಬ ಹೆಗ್ಗಳಿಕೆಗೆ ಅರುಣಿಮಾ ಸಿನ್ಹಾ ಪಾತ್ರರಾಗಿದ್ದಾರೆ. ದೇಶದ ಲಕ್ಷಾಂತರ ಯುವಕ, ಯುವತಿಯರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ.

ಕೃತಕ ಕಾಲನ್ನು ಹೊಂದಿರುವ 30 ವರ್ಷದ ಅರುಣಿಮಾ ಸಿನ್ಹಾ ಈ ಹಿಂದೆ 2013ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನೇರಿದ್ದರು. ಇವರಿಗೆ 2015ರಲ್ಲಿ ಪದ್ಮಶ್ರೀ ಮತ್ತು ಟೆನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ಬಂದಿತ್ತು. ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿರುವ ಅರುಣಿಮಾ ಏಳೂ ಖಂಡಗಳ ಅತ್ಯಂತ ಎತ್ತರದ ಶಿಖರಗಳನ್ನೆಲ್ಲಾ ಹತ್ತುವ ಗುರಿ ಇಟ್ಟುಕೊಂಡಿದ್ದರು, ಅದೀಗ ಪೂರ್ಣವಾಗಿದೆ.

ಉತ್ತರ ಪ್ರದೇಶ ಮೂಲದ ಅರುಣಿಮಾ 2011ರಲ್ಲಿ, ಡಕಾಯಿತರಿಂದ ಚಲಿಸುತ್ತಿರುವ ರೈಲಿನಿಂದ ತಳ್ಳಲ್ಪಟ್ಟು ಅಪಘಾತಕ್ಕೀಡಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೆ ಅವರ ಛಲ, ಸಾಧನೆ, ಹಠಕ್ಕೆ ನ್ಯೂನತೆ ಎಂದೂ ಅಡ್ಡಿಯಾಗಲಿಲ್ಲ. ತಮ್ಮ ಸಾಧನೆ ಕುರಿತು ಸ್ವತಃ ಅರುಣಿಮಾರೇ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
 

The wait is over
we are glad to share with you

The World record
World's 1st woman amputee who climbed Mount Vinson (highest peak of Antarctica) has become to the name of our country India

Stay up to date on all the latest ವಿಶೇಷ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp