ವೋಟರ್ ಐಡಿ ಇಲ್ಲವೇ? ಚಿಂತೆ ಬೇಡ,ಆನ್ ಲೈನ್ ನಲ್ಲಿ ಇಂದೇ ಅರ್ಜಿ ಸಲ್ಲಿಸಿ!

18 ವರ್ಷ ತುಂಬಿದ್ದರೂ ವೋಟರ್ ಐಡಿ ಪಡೆಯದಿದ್ದರೆ ಚುನಾವಣಾ ಕಚೇರಿ ಮುಂಭಾಗ ಉದ್ದನೇಯ ಸಾಲಿನಲ್ಲಿ ನಿಲ್ಲಬೇಕೆಂಬ ಆತಂಕಪಡಬೇಕಾಗಿಲ್ಲ. ಆನ್ ಲೈನ್ ಮೂಲಕ ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವಂತೆ  ಇದೇ ಮೊದಲ ಬಾರಿಗೆ ಮತದಾನ ಮಾಡಲು ಹಲವು ಮಂದಿ ಕುತೂಹಲದಿಂದ ಕಾಯುತ್ತಿದ್ದಾರೆ.
ಒಂದು ವೇಳೆ  18 ವರ್ಷ ತುಂಬಿ, ವೋಟರ್  ಐಡಿಯನ್ನು  ಪಡೆಯದಿದ್ದರೆ ಚುನಾವಣಾ ಕಚೇರಿ ಮುಂಭಾಗ ಉದ್ದನೇಯ ಸಾಲಿನಲ್ಲಿ ನಿಲ್ಲಬೇಕೆಂಬ  ಆತಂಕಪಡಬೇಕಾಗಿಲ್ಲ. ಆನ್ ಲೈನ್ ಮೂಲಕ ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ಇಟ್ಟುಕೊಳ್ಳಬೇಕಾದ ಅಗತ್ಯವಾದ ದಾಖಲೆಗಳು
ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ
1. ರಾಷ್ಟ್ರೀಯ ವೋಟರ್ ಸರ್ವೀಸಸ್ ಪೋರ್ಟಲ್ ಪೇಜ್  (ಎನ್ ವಿಎಸ್ ಪಿ)  ಭೇಟಿ ನೀಡಿ
2. ಹೊಸ ವೋಟರ್ ಕಾರ್ಡ್ ನೋಂದಾಣಿಗಾಗಿ  ಇರುವ ( Apply online for
Registration ) ಕ್ಲಿಕ್ ಮಾಡಿ  ನಂತರ  ಹಿಂದಿ ಭಾಷೆಯಲ್ಲಿರುವ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.ನೀವು ಭಾಷೆಯನ್ನು ಬದಲಾಯಿಸಲು ಬಯಸಿದರೆ  ಪುಟದ ಮೇಲಿನ ಬಲ ಭಾಗದಲ್ಲಿರುವ ಡ್ರಾಪ್ ಡೌನ್  ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
4. ಒಮ್ಮೆ ನೀವು  ಅರ್ಜಿಯನ್ನು ಸಲ್ಲಿಸಿದ ನಂತರ   ಇ-ಮೇಲ್ ವೊಂದನ್ನು  ಸ್ವೀಕರಿಸುತ್ತೀರಿ.  ನಂತರ Track application status'  ಮೂಲಕ ನಿಮ್ಮ ಅರ್ಜಿಯನ್ನು ಗಮನಿಸಬಹುದು. ಎಲ್ಲಾ ಪ್ರಕ್ರಿಯೆ ಮುಗಿಯಲು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಪರ್ಯಾಯವಾಗಿ NVSP website ಗೆ ಹೋಗಿ  'Track application status ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
 ಎನ್ ಆರ್ ಐ- ಅನಿವಾಸಿ ಭಾರತೀಯರು ಹೇಗೆ ಅರ್ಜಿ ಸಲ್ಲಿಸಬಹುದು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com