ಛತ್ತೀಸ್ ಗಢ ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಯಲ್ಲಿ ಫಸ್ಟ್ ಮತ್ತು ಸೆಕೆಂಡ್ ರ್ಯಾಂಕ್ ನಲ್ಲಿ ತೇರ್ಗಡೆ ಹೊಂದಿದ ದಂಪತಿ!

ನಿರಂತರ ಕಠಿಣ ಸಾಧನೆ ಮತ್ತು ನಂಬಿಕೆಯಿಂದ ಛತ್ತೀಸ್ ಗಢ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ...
ಅನುಭವ್ ಸಿಂಗ್ ಮತ್ತು ಅವರ ಪತ್ನಿ ವಿಭಾ ಸಿಂಗ್
ಅನುಭವ್ ಸಿಂಗ್ ಮತ್ತು ಅವರ ಪತ್ನಿ ವಿಭಾ ಸಿಂಗ್
ಬಿಲಾಸ್ಪುರ್(ಛತ್ತೀಸ್ ಗಢ):ನಿರಂತರ ಕಠಿಣ ಸಾಧನೆ ಮತ್ತು ನಂಬಿಕೆಯಿಂದ ಛತ್ತೀಸ್ ಗಢ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದಂಪತಿ ಮೊದಲ ಮತ್ತು ದ್ವಿತೀಯ ದರ್ಜೆಯಲ್ಲಿ ಒಟ್ಟಿಗೆ ತೇರ್ಗಡೆ ಹೊಂದಿದ್ದಾರೆ.
ಅನುಭವ್ ಸಿಂಗ್ ಮತ್ತು ಅವರ ಪತ್ನಿ ವಿಭಾ ಸಿಂಗ್ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಮೊದಲ ಮತ್ತು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ತಮ್ಮ ಸಂತಸವನ್ನು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡ ಅನುಭವ್, ತಮ್ಮ ಜೀವನದಲ್ಲಿ ಹಿಂದಿನ ಸೋಲು ಯಾವತ್ತೂ ಕುಗ್ಗುವಂತೆ ಮಾಡಿಲ್ಲ, ಅದರ ಬದಲು ಇನ್ನಷ್ಟು ಹೆಚ್ಚು ಕೆಲಸ ಮಾಡುವಂತೆ, ಶ್ರಮ ಹಾಕುವಂತೆ ಉತ್ತೇಜಿಸಿತು ಎನ್ನುತ್ತಾರೆ.
ದಂಪತಿ ಕಳೆದ 11 ವರ್ಷಗಳಿಂದ ಸಾರ್ವಜನಿಕ ಆಯೋಗ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. 2008ರಲ್ಲಿ ಪರಸ್ಪರ ಭೇಟಿಯಾದ ಈ ಜೋಡಿ ನಂತರ ಸ್ನೇಹಿತರಾಗಿ 2014ರಲ್ಲಿ ಮದುವೆಯಾದರು. 
ನಾವು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದೆವು. ಹರಟೆ ಹೊಡೆಯಲೆಂದು ಒಟ್ಟಿಗೆ ಕುಳಿತರೆ ಕೆಲ ಹೊತ್ತಿನ ನಂತರ ಅದು ಅಧ್ಯಯನ ನಡೆಸುವ ಗುಂಪು ಆಗುತ್ತಿತ್ತು. 
ಪತಿಯ ಮಾತಿಗೆ ದನಿಗೂಡಿಸಿದ ವಿಭಾ, ನಾವಿಬ್ಬರೂ ಪರೀಕ್ಷೆಯಲ್ಲಿ ಆಯ್ಕೆಯಾಗುತ್ತೇವೆ ಎಂದು ಅಂದುಕೊಂಡಿದ್ದೆವು, ಆದರೆ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತೇವೆ ಎಂದು ಭಾವಿಸಿರಲಿಲ್ಲ ಎಂದರು. 
ವಿಭಾ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಳೆದ 7 ವರ್ಷಗಳಿಂದ ಸಹಾಯಕ ಅಭಿವೃದ್ಧಿ ಅಧಿಕಾರಿಯಾಗಿದ್ದರೆ, ಓದು ಮತ್ತು ಕೆಲಸ ಒಟ್ಟೊಟ್ಟಿಗೆ ಮಾಡಿಕೊಂಡು ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com