ಐವತ್ತನೇ ವರ್ಷದ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ದೇಶದ ಏಕೈಕ ಸಂಸ್ಕೃತ ದಿನಪತ್ರಿಕೆ

ದೇಶಾದ್ಯಂತ ಹಿಂದಿ ಭಾಷೆ ಕಲಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು ದಕ್ಷಿಣದ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಕೂಗೆದ್ದಿರುವ ಸಮಯದಲ್ಲೇ ಹಿಂದಿಗೂ ಮೂಲ ಭಾಷೆಯಾಗಿರುವ ಸಂಸ್ಕೃತ ಭಾಷೆಯ ಪತ್ರಿಕೆಯೊಂದು....
ಐವತ್ತನೇ ವರ್ಷದ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ದೇಶದ ಏಕೈಕ ಸಂಸ್ಕೃತ ದಿನಪತ್ರಿಕೆ
ಐವತ್ತನೇ ವರ್ಷದ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ದೇಶದ ಏಕೈಕ ಸಂಸ್ಕೃತ ದಿನಪತ್ರಿಕೆ
ಬೆಂಗಳೂರು: ದೇಶಾದ್ಯಂತ ಹಿಂದಿ ಭಾಷೆ ಕಲಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು ದಕ್ಷಿಣದ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ  ಕೂಗೆದ್ದಿರುವ ಸಮಯದಲ್ಲೇ ಹಿಂದಿಗೂ ಮೂಲ ಭಾಷೆಯಾಗಿರುವ ಸಂಸ್ಕೃತ ಭಾಷೆಯ ಪತ್ರಿಕೆಯೊಂದು ರಾಜ್ಯದಲ್ಲಿ ಸದ್ದಿಲ್ಲದೆ ಐವತ್ತನೇ ವರ್ಷದ ಸುವರ್ಣ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಮೈಸೂರಿನಿಂದ ಪ್ರಕಟಗೊಳ್ಳುವ ಏಕೈಕ ಸಂಸ್ಕೃತ ದಿನಪತ್ರಿಕೆ "ಸುಧರ್ಮ" ಮುಂದಿನ ವರ್ಷ ಐವತ್ತನೇ ವರ್ಷ ಪೂರೈಸುತ್ತಿದೆ.
ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು.ಸಂಸ್ಕೃತ ವಿದ್ವಾಂಸರೂ ಆಗಿರುವ ಇವರು 1945ರಲ್ಲಿ ಈ ಮುದ್ರಣಾಲಯ ಪ್ರಾರಂಭಿಸಿದ್ದು ಇಲ್ಲಿ ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳು ಸಹ ಮುದ್ರಿತವಾಗಿದ್ದವು. 1963 ರಲ್ಲಿ ಅವರು ಬಾಲಕಿಯರ ಶಾಲೆ ಪ್ರಾರಂಭಿಸಿದರು ಮತ್ತು ಬಾಲಕಿಯರ ಶಿಕ್ಷಣದ ಬಗ್ಗೆ ಒತ್ತು ನೀಡಿದರು. ಅಲ್ಲಿ ಅವರು ಸಂಸ್ಕೃತ ಕಾರ್ಯಾಗಾರಗಳನ್ನು ಆಯೋಜಿಸಿದರು. 1970 ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಪ್ರತಿನಿತ್ಯ ಸಂಸ್ಕೃತ ಜನರಿಗೆ ತಲುಪುವಂತೆ ಮಾಡುವುದಕ್ಕಾಗಿ "ಸುಧರ್ಮ" ಪತ್ರಿಕೆ ಪ್ರಾರಂಭಿಸಿದರು.ಪ್ರಾರಂಭದಲ್ಲಿ ದಿನಕ್ಕೆ 1,000 ಪ್ರತಿಗಳು ಮುದ್ರಣವಾಗುತ್ತಿತ್ತು. ಈಗ  3,500 ಕ್ಕೂ ಮೀರಿ ಮುದ್ರಣ ಕಾಣುತ್ತಿದೆ.
"ಸುಧರ್ಮ" ಎ3 ಗಾತ್ರದಎರಡು-ಪುಟ, ಐದು-ಕಾಲಮ್ ಪತ್ರಿಕೆಯಾಗಿದೆ.2009 ರಲ್ಲಿ, "ಸುಧರ್ಮ" ಇ-ಪೇಪರ್ ಆವೃತ್ತಿ ಪ್ರಾರಂಭವಾಗಿದ್ದು ಜಗತ್ತಿನಾದ್ಯಂತ ಹಲವಾರು ಜನರು ಇದನ್ನು ಓದುತ್ತಿದ್ದಾರೆ.ಅಯ್ಯಂಗಾರ್ ಅವರ ಪುತ್ರ  ಕೆ.ವಿ. ಸಂಪತ್ ಕುಮಾರ್ ಪ್ರಸ್ತುತ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ.ಅವರ ತಂದೆ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವ  ಏಕೈಕ ಉದ್ದೇಶದಿಂದ ಈ ದಿನಪತ್ರಿಕೆ ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ.ಈಗ ನಾವು ಚಂದಾದಾರರು ಹಾಗೂ ಸರ್ಕಾರದ ನೆರವಿಗೆ ಕಾಯುತ್ತಿದ್ದೇವೆ.ಸರ್ಕಾರದ ಹಣಕಾಸು ಸಹಾಯಕ್ಕಾಗಿಎದುರು ನೋಡುತ್ತಿದ್ದೇವೆ.ಎ<ದು ಅವರು ಹೇಳಿದ್ದಾರೆ. ಇದೇ ವೇಳೆ "ಪತ್ರಿಕಾ ಸಂಪಾದಕರು ತಮಗೆ ಪತ್ರ ಬರೆದು ವಿವರಿಸಿದ್ದಾದರೆ ನಾವು ಅವರಿಗೆ ಸಹಾಯ ಂಆಡಲಿಕ್ಕೆ ಪ್ರಯತ್ನಿಸುತ್ತೇವೆ" ಮಾಹಿತಿ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಹೇಳಿದರು: 
'ನಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚಂದಾದಾರರನ್ನು ಹೊಂದಿದ್ದು ನಾವು ಅಂಚೆ ಮೂಲಕ ಪತ್ರಿಕೆ ಕಳಿಸುತ್ತೇವೆ.
"ಹಿಂದೆ ಈ ಭಾಷೆ ಸಮಾಜದಲ್ಲಿ ಕೇವಲ ಒಂದು ವರ್ಗಕ್ಕಷ್ಟೇ ಸೀಮಿತವಾಗಿತ್ತು.ಆದರೆ ಈಗ ಹಾಗಿಲ್ಲ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಈ ಭಾಷೆಯನ್ನು ಯಾರಾದರೂ ಕಲಿಯಬಹುದು. ಇದಕ್ಕಾಗಿ ಆಗ ನಾವು ತಿಂಗಳಿಗೆ ಒಂದು ರು. ಚಂದಾ ನಿಗದಿ ಪಡಿಸಿದ್ದೆವು.ಈಗ ವಾರ್ಷಿಕ ರೂ 500 ಚಂದಾ ಹಣ ನಿಗದಿಪಡಿಸಿದ್ದೇವೆ. ಅಲ್ಲದೆ ನಾವು ಈ ಪತ್ರಿಕೆಯನ್ನು  ಜಿಲ್ಲಾ ಗ್ರಂಥಾಲಯಗಳಿಗೆ ಮತ್ತು ಕೆಲವು ಶೈಕ್ಷಣಿಕ ಸಂಸ್ಥೆಗಳಿಗೆ ಕಳುಹಿಸುತ್ತೇವೆ. ನಮ್ಮ ಮನೆಯವರು, ಆರು ಮಂದಿ ವಿದ್ವಾಂಸರು ಮತ್ತು ಮುದ್ರಣ ಮಾಧ್ಯಮದ ಒಂದೆರಡು ಸಿಬ್ಬಂದಿಗಳು ಸೇರಿ ಪತ್ರಿಕೆ ನಡೆಸುತ್ತಿದ್ದೇವೆ" ಸಂಪತ್ ಕುಮಾರ್ ಅವರ ಪತ್ನಿ ಜಯಲಕ್ಷ್ಮಿ ಹೇಳಿದ್ದಾರೆ.
ಆರು ಮಂದಿ ವಿದ್ವಾಂಸರು ಪತ್ರಿಕೆಗಾಗಿ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಒಂದು ಆವೃತ್ತಿಗಾಗಿ ಒಂದರಿಂದ  ಒಂದೂವರೆ ಕಾಗದದ ರಿಮ್ ಅಗತ್ಯವಿದೆ, ಇದಕ್ಕೆ ರೂ. 1,000 ಗಿಂತ ಹೆಚ್ಚು ವೆಚ್ಚವಾಗುತ್ತದೆ, ನಾವು ಮುದ್ರಣ ಸಿಬ್ಬಂದಿಗೆ ಹಣ ಪಾವತಿಸುತ್ತಿದ್ದಾರೆ.  ಅಲ್ಲದೆ ಮುದ್ರಣ ಯಂತ್ರಗಳು ಸುಗಮವಾಗಿ ಕಾರ್ಯನಿರ್ವಹಿಸಲು ಸಹ ಹಣ ವ್ಯವಯವಾಗುತ್ತದೆ. ಕಾಗದ, ಶಾಯಿ ಮತ್ತು ಮುದ್ರಣಕ್ಕೆ ಸರಾಸರಿ ಅವರು 4,000 ರೂ. ವೆಚ್ಚ ಮಾಡುತ್ತಿದ್ದಾರೆ.
"ನಾವು ಸುದ್ದಿಯನ್ನು ರಚಿಸಲು ಶ್ರೀಲಿಪಿಯನ್ನು ಬಳಸುತ್ತೇವೆ. ನಾವು ವಿವಿಧ ಏಜೆನ್ಸಿಗಳಿಂದ ಸುದ್ದಿ ಪಡೆಯುವ ಸುದ್ದಿ ಸಂಸ್ಥೆಗಳೊಂದಿಗೆ ನೊಂದಾಯಿಸಿಕೊಂಡಿದ್ದೇವೆ.  ಬೇರೆ ಭಾಷೆಗಳ ಸುದ್ದಿಗಳನ್ನು  ಸಂಸ್ಕೃತಕ್ಕೆ ಅನುವಾದಿಸಲಾಗುತ್ತದೆ. ಒಂದು ಪತ್ರಿಕೆಯನ್ನು ಹೊರತರಲು ನಮಗೆ ಆರರಿಂದ ಏಳು ಗಂಟೆಗಳ ಅಗತ್ಯವಿದೆಜಯಲಕ್ಷ್ಮಿ ಹೇಳಿದರು. ಅವರು ವಿವಾಹವಾದ ನಂತರ, ಅವರು ಭಾಷೆಯ ಬಗ್ಗೆ ಉತ್ತಮ ಪರಿಣತಿ ಹೊಂದಲು ಸಂಸ್ಕೃತ ಪರೀಕ್ಷೆಗಳನ್ನು ತೆಗೆದುಕೊಂಡರು. ಅಂದಿನಿಂದ, ಅವರು ವ್ಯವಸ್ಥಾಪಕ ತಂಡದ ಅಂಗವಾಗಿದ್ದಾರೆ. ಇದೀಗ ಪತ್ರಿಕೆಯ ಸುವರ್ಣ ಸಂಭ್ರಮವನ್ನು ಆಚರಿಸುವ ಸಲುವಾಗಿ 200-ಪುಟಗಳ ವಿಶೇಷ ಸಂಚಿಕೆ ತಯಾರಿಸುತ್ತಿದ್ದಾರೆ.ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವುದಕ್ಕೆ ಸಂಬಂಧಿಸಿದ ಒಂದು ವರ್ಷದ ಅವಧಿಯ ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com