ಮದ್ಯ ಸೇವಿಸಿ ಮದುವೆ ಆಗಲು ಬಂದ ವರನನ್ನು ನಿರಾಕರಿಸಿ ಮಾದರಿಯಾದ ಯುವತಿ!

ತಾನು ಮದ್ಯವ್ಯಸನಿ ಯುವಕನನ್ನು ವಿವಾಹವಾಗುವುದಕ್ಕೆ ತಿರಸ್ಕರಿಸುವ ಮೂಲಕ ಮಾದರಿಯಾದ ಒಡಿಶಾ ಯುವತಿಯನ್ನು ಅಲ್ಲಿನ ಜಿಲ್ಲಾಡಳಿತ ಸನ್ಮಾನಿಸಿದೆ.

Published: 27th June 2019 12:00 PM  |   Last Updated: 27th June 2019 10:14 AM   |  A+A-


Odisha girl lauded for refusing to marry drunk groom

ಮಮತಾ ಭೋಯಿ

Posted By : RHN RHN
Source : The New Indian Express
ಸಂಭಾಲ್ಪುರ್: ತಾನು ಮದ್ಯವ್ಯಸನಿ ಯುವಕನನ್ನು ವಿವಾಹವಾಗುವುದಕ್ಕೆ ತಿರಸ್ಕರಿಸುವ ಮೂಲಕ ಮಾದರಿಯಾದ ಒಡಿಶಾ ಯುವತಿಯನ್ನು ಅಲ್ಲಿನ ಜಿಲ್ಲಾಡಳಿತ ಸನ್ಮಾನಿಸಿದೆ.

ಮೇ 12 ರಂದು ಒಡಿಶಾದ  ಜುಜುಮುರಾ ಬ್ಲಾಕ್‌ನ ಗೋಬರ್ಧನ್ ಬದ್ಮಲ್ ಗ್ರಾಮದ 20 ವರ್ಷದ ಬುಡಕಟ್ಟು ಸಮುದಾಯದ ಯುವತಿ  ಮಮತಾ ಭೋಯಿ ತಾನು ಕುಡಿತದ ಅಭ್ಯಾಸ ಹೊಂದಿದ್ದ ಯುವಕನನ್ನು ವಿವಾಹವಾಗುವುದಿಲ್ಲ ಎಂದು ಹೇಳುವ ಮೂಲಕ ಮದುವೆಯನ್ನು ತಿರಸ್ಕರಿಸಿದ್ದಳು.

ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನಾಚರಣೆ ಸಮಯದಲ್ಲಿ  ಎಸ್‌ಪಿ ಸಂಜೀವ್ ಅರೋರಾ ಅವರ ಸಮ್ಮುಖದಲ್ಲಿ ಸಂಬಲ್‌ಪುರ ಕಲೆಕ್ಟರ್ ಸುಭಮ್ ಸಕ್ಸೇನಾ ಅವರು ಮಮತಾ ಅವರನ್ನು ಸನ್ಮಾನಿಸಿದರು. ಮಮತಾ ಅವರಿಗೆ ಶಾಲು, ಸ್ಮರಣಿಕೆ ಹಾಗೂ 10,000 ರೂ. ನಗದು ನೀಡಿ ಪುರಸ್ಕರಿಸಲಾಗಿದೆ.

ಮದುವೆಯಾಗುವ ವರ ಹಸೆಮಣೆ ಏರುವಾಗಲೇ ಮದ್ಯಪಾನ ಮಾಡಿ ಬಂದಿದ್ದಾನೆಂದು ತಿಳಿದ ನಂತರ ಮಮತಾ ತಾನು ವಿವಾಹ ಬಂಧನಕ್ಕೆ ಒಳಗಾಗಲು ನಿರಾಕರಿಸಿದ್ದಾಳೆ.ಅವಳ ಕಾರ್ಯವನ್ನು ಜಿಲ್ಲೆಯ ಜನತೆ ಸ್ವಾಗತಿಸಿದ್ದಾರೆ. 

ಆ ವ್ಯಕ್ತಿ ತುಂಬಾ ಕುಡಿದಿದ್ದರಿಂದ ಅವನಿಗೆ ನೆಟ್ಟಗೆ ನಿಲ್ಲಲು ಸಹ ಸಾಧ್ಯವಾಗುತ್ತಿರಲಿಲ್ಲ. ಆ ಸ್ಥಿತಿಯಲ್ಲಿ ವರನನ್ನು ನೋಡಿದ ನಂತರವನೊಂದಿಗೆ ಸಂತೋಷದ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು  ನಾನು ಅರಿತೆನು ಎಂದು ಯುವತಿ ಮಮತಾ ಹೇಳಿದ್ದಾಳೆ. "ನಾನು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ" 

ಮಮತಾ ಅವರ ಚಿಕ್ಕಮ್ಮ ಸುಭಾಸಿನಿ ಧಾರೂವಾ ಅವರ ಸೋದರ ಸೊಸೆ ಬಡ ಕುಟುಂಬಕ್ಕೆ ಸೇರಿದವಳಾಗಿದ್ದು ಮದುವೆ ಮಂಟಪದಿಂದ ವರನನ್ನು ಹಿಂದೆ ಕಳಿಸುವದು ಕಠಿಣ ನಿರ್ಧಾರವಾಗಿತ್ತು ಎಂದಿದ್ದಾರೆ.ಆಕೆಯ ನಿರ್ಧಾರವು ಅವರ ಕುಟುಂಬದ ಎಲ್ಲ ಸದಸ್ಯರು ಮತ್ತು ಸಂಬಂಧಿಕರನ್ನು ಅಚ್ಚರಿಗೊಳಿಸಿದರೂ ಎಲ್ಲರೂ ಅವಳ ಪರವಾಗಿ ನಿಂತರು ಎಂದು ಅವರು ಹೇಳಿದರು.ಜುಲೈ 8ಕ್ಕೆ ಮಮತಾ ಜರ್ಸೋಗುಡಾ ಜಿಲ್ಲೆಯ  ಬ್ರಜರಾಜ್‌ನಗರದ ವ್ಯಕ್ತಿಯನ್ನು ವಿವಾಹವಾಗಲಿದ್ದಾಳೆ ಎಂದು ಸುಭಾಸಿನಿ ಹೇಳಿದ್ದಾರೆ. ಅಲ್ಲದೆ ಆ ವ್ಯಕ್ತಿ ಮದ್ಯ ಅಥವಾ ಇನ್ನಾವುದೇ ಮಾದಕ ದ್ರವ್ಯವನ್ನು ಸೇವಿಸುವುದಿಲ್ಲ. 

ತನ್ನ ಸ್ಪೂರ್ತಿದಾಯಕ ಕಾರ್ಯಕ್ಕಾಗಿ ಮಮತಾ ಅವರನ್ನು ಶ್ಲಾಘಿಸಿದ ಅರೋರಾ "ಯುವತಿಯರಿಗೆ ಉತ್ತಮ ವರನನ್ನು ಆಯ್ಕೆ ಮಾಡಬೇಕು. ಹಾಗೆ ಆಯ್ಕೆ ಮಾಡುವ ವೇಳೆ  ಜಾಗರೂಕರಾಗಿರಬೇಕು ಎಂದು ಸಂದೇಶ ಕೊಟ್ಟರು.
Stay up to date on all the latest ವಿಶೇಷ news with The Kannadaprabha App. Download now
facebook twitter whatsapp