ಇದೇ ಮೊದಲು! ಲಿಂಗಪರಿವರ್ತಿತ ವ್ಯಕ್ತಿಗೆ ವಿಧಾನಸೌಧದಲ್ಲಿ ಉದ್ಯೋಗ ಭಾಗ್ಯ

ಕೆಲ ತಿಂಗಳುಗಳ ಹಿಂದೆ ಪರಿಚಯ ತಾನು ವಿಧಾನಸೌಧದ ಮುಂದೆ ತಿರುಗಾಡುತ್ತಲೋ, ಅದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಲೋ ಇರುವಾಗ ಅವರು ಸಹ ಈ ಭವ್ಯ ಕಟ್ಟಡದಲ್ಲಿ ಕೆಲಸ ಮಾಡಲಿದ್ದಾರೆ....
ಪರಿಚಯ
ಪರಿಚಯ
ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಪರಿಚಯ ತಾನು ವಿಧಾನಸೌಧದ ಮುಂದೆ ತಿರುಗಾಡುತ್ತಲೋ, ಅದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಲೋ ಇರುವಾಗ ಅವರು ಸಹ  ಈ ಭವ್ಯ ಕಟ್ಟಡದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಒಮ್ಮೆಯೂ ಯೋಚಿಸಿರಲಿಲ್ಲ. "ಒಂದು ದಿನ ನಾನು ಸಹ ಇಲ್ಲಿ ಕೆಲಸ ಮಾಡಲಿದೇನೆನ್ನುವ ಕಲ್ಪನೆ ನನಗಿರಲಿಲ್ಲ"28  ವರ್ಷದ ಲಿಂಗಪರಿವರ್ತಿತ ವ್ಯಕ್ತಿ ಪರಿಚಯ ಹೇಳಿದ್ದಾರೆ. ಪರಿಚಯ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿಯಾಗಿ ವಿಧಾನಸೌಧದಲ್ಲಿ ಶುಕ್ರವಾರದಿಂದ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಹೊಸ ಇತಿಹಾಸವೊಂದಕ್ಕೆ ನಾಂದಿ ಹಾಡಿದ್ದಾರೆ.
ಮೈಸೂರಿನವರಾದ ಪರಿಚಯ ಅವರ ತಂದೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ಮಹದೇವ್ ಹಾಗೂ ತಾಯಿ ತರಕಾರಿ ವ್ಯಾಪಾರಿ ಅಲಮೇಲಮ್ಮ ಅವರುಗಳಾಗಿದ್ದರು."ನಾನು 13 ವರ್ಷ ವಯಸ್ಸಿನವನಾಗಿದ್ದಾಗ ನನಗೇನೋ ಸರಿಯಿಲ್ಲ ಎಂದು ಬಾಸವಾಗಿತ್ತು, ಆದರೆ ಆಗೇನೂ ಮಾಡಲಾಗಲಿಲ್ಲ. ನಾನು 17 ವರ್ಷದವನಾಗಿದ್ದಾಗ, ನನ್ನ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಅದೊಂದು ದಿನ ಪಾಕೆಟ್ ನಲ್ಲೆ ಕೆಲವು ರು. ಹಣವಿಟ್ಟುಕೊಂಡು ಮೈಸೂರಿನಿಂದ ಬೆಂಗಳೂರಿಗೆ ಬಂದೆನು. ಆಗ ಬೆಂಗಳೂರು ಪ್ಯಾಸೆಂಜರ್ ರೈಲಿಗೆ 21 ರು. ದರವಿತ್ತು. ನಾನು ಬೆಂಗಳೂರಿಗೆ ಬಂದು ಮೆಜೆಸ್ಟಿಕ್ ಸುತ್ತ ಮುತ್ತ ಗೋಡೆ, ಮರಗಳಿಗೆ ಅಂಟಿಸಿದ್ದ ಜಾಹೀರಾತುಗಳಲ್ಲಿರುವ ಅನೇಕ ಸಂಖ್ಯೆಗಳಿಗೆ ಕರೆ ಮಾಡಿ ಉದ್ಯೋಗಕ್ಕಾಗಿ ವಿಚಾರಿಸಿದೆ. ಆದರೆ ಯಾವುದೂ ಫಲಕಾರಿಯಾಗಿರಲಿಲ್ಲ. ಆಗ ಕಡೆಗೊಮ್ಮೆ ಅನಾಥಾಶ್ರಮದಲ್ಲಿ ಕೆಲಸ ದೊರಕಿತು. ಅವರೇ ನನಗೆ ಊಟ, ವಸತಿಯ ಏರ್ಪಾಡು ಸಹ ಮಾಡಿದ್ದರು. ಮಲ್ಲೇಶ್ವರದಲ್ಲಿನ ಅನಾಥಾಶ್ರಮದಲ್ಲಿ ನಾನು ಎರಡು ವರ್ಷಗಳ ಕಾಲ ಕಳೆದಿದ್ದೇನೆ" ಪರಿಚಯ ತನ್ನ ನೆನಪನ್ನು ತಿರುವಿ ಹಾಕಿದ್ದಾರೆ.
"ಅದೇ ವೇಳೆ ಲಿಂಗಪರಿವರ್ತಿತರಾದವರ ಕಲ್ಯಾಣಕ್ಕಾಗಿ ದುಡಿಯುವ ಸಮರ ಹೆಸರಿನ ಎನ್ ಜಿಓ ಬಗ್ಗೆ ನನಗೆ ತಿಳಿದುಬಂದಿತು. ನಾನು ಸಮರಕ್ಕೆ ಸೇರಲು ನಿರ್ಧರಿಸಿದೆ.ಇದಕ್ಕೆ ಮುನ್ನ ನಾನು ನನ್ನ ಭಾವನೆಗಳನ್ನು ಧೈರ್ಯವಾಗಿ ಬಿಂಬಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಸಮರಕ್ಕೆ ಬಂದ ನಂತರ ಅಂತಿಮವಾಗಿ 19 ವರ್ಷದವನಾಗಿದ್ದಾಗ ನಾನು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದೆ.ಇದರ ನಂತರ, ನಾನು ಲೈಂಗಿಕ ಕಾರ್ಯಕರ್ತೆಯಾಗಿಯೂ ಕೆಲಸ ಮಾಡಿದೆ. ಅಲ್ಲದೆ ಅಲ್ಲಲ್ಲಿ ಭಿಕ್ಷೆ ಬೇಡುತ್ತಿದ್ದೆ. 
"ಇದಾಗಿ ನಾನು ನನ್ನ ಕೆಲವು ಸಹಚರರೊಡನೆ ಕೆಂಗೇರಿಯಲ್ಲಿ ವಾಸವಿದ್ದೆ. ಆಗೆಲ್ಲಾ ನಾನು ತಿಂಗಳಿಗೆ  30,000 ದಷ್ಟು ಹಣವನ್ನು ಗಳಿಸುತ್ತಿದ್ದೆ, ಆದರೆ ನನಗಿದರಿಂದ ಸಂತೋಷವಾಗಿರಲಿಲ್ಲ.ಜನರು ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿದ್ದರು.ಅಲ್ಲದೆ ನಾನಗೆ ಇದರಿಂದ ಬಹಳ ನೋವಾಗಿತ್ತು. ಆಗ ನಾನು ಮತ್ತೆ ಉತ್ತಮ ಉದ್ಯೋಗವನ್ನರಸಲು ಮುಂದಾದೆ. ಆದರೆ ಜನರು ನಾನು ಲಿಂಗಪರಿವರ್ತಿತಳೆಂದು ತಿಳಿದಾಗ ಉದ್ಯೋಗ ನಿಡಲು ನಿರಾಕರಿಸುತ್ತಿದ್ದರು.
`
"ಜಯನಗರದಲ್ಲಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿಗೆ ಣಾನು ಭೇಟಿ ನೀಡಿದೆ, ಅಲ್ಲಿ ಅದರ ಅಧ್ಯಕ್ಷೆ ವಸುಂಧರಾ ಅವರನ್ನು ಭೇಟಿಯಾದಾಗ ಅವರು ನನ್ನನ್ನು ಜಯಮಾಲಾ ಅವರ ಬಳಿ ಕರೆದೊಯ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಜಯಮಲಾ ಆಕೆಯ ಕಛೇರಿಯಲ್ಲಿ ನನಗೆ ಡಿ ಗ್ರೂಪ್ ನ ಹುದ್ದೆ ನೀಡಲು ಸಮ್ಮತಿಸಿದ್ದರು. ಇದರಿಂದ ನನಗೆ ಬಹಳ ಖುಷಿಯಾಗಿದೆ"ಅವರು ಹೇಳಿದರು. ಶುಕ್ರವಾರದಿಂದ, ಪರಿಚಯ ಅವರು ಕಾಂಟ್ರಾಕ್ಟ್  ಆಧಾರದ ಮೇಲೆ  ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅವರ ಸಂಬಳವು ತಿಂಗಳಿಗೆ 10,000 ರೂಪಾಯಿಗಳಾಗಿದೆ.
ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಪರಿಚಯ ಅವರು ಕೆಲಸ ಮಾಡುವವರಿದ್ದಾರೆ.ಈಕೆ ಈಗ ಹೆಬ್ಬಾಳದಿಂದ ನಿತ್ಯ ವಿಧಾನಸೌಧಕ್ಕೆ ಆಗಮಿಸುತ್ತಾರೆ. ಅವರು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ತಮ್ಮಂತೆಯೇ ಲಿಂಗಪರಿವರ್ತನೆಗೊಳಗಾದ ಇನ್ನೊಬ್ಬ ವ್ಯಕ್ತಿಯೊಡನೆ ವಾಸವಿದ್ದಾರೆ. ಅವರಿಂದ ಪರಿಚಯಾ ತಾವು ಟೈಪಿಂಗ್ ಹಾಗೂ ಕಂಪ್ಯೂಟರ್ ಬಳಕೆಯನ್ನು ಕಲಿತರು.
"ನಾನು ಮನೆಯವರೊಡನೆ ಸಂಪರ್ಕದಲ್ಲಿದ್ದೇನೆ. ಆದರೆ ಮನೆಗೆ ಎಂದಿಗೂ ಹಿಂತಿರುಗಿಲ್ಲ. ನನ್ನ ತಾಯಿ ಈಗ ಸಂತಸದಿಂದಿದ್ದಾರೆ. ನಾನು ಲಿಂಗಪರಿವರ್ತನೆ ಮಾಡಿಸಿಕೊಂಡದ್ದು ಅವಳಿಗೆ ಗೊತ್ತು. ಈಗ ವಿಧಾನಸೌಧದಲ್ಲಿ ಕೆಲಸಕ್ಕೆ ಸೇರಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ.
"ಈ ಹಿಂದೆ ಈಗ ನಾನು ಗಳಿಸಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಗಳಿಸಿದ್ದೆ. ಆದರೆ ಅದರಲ್ಲಿ ಸಂತೋಷವಿರಲಿಲ್ಲ.ಈಗ, ನಾನು. ನಾನು ಘನತೆಯಿಂದ ಬದುಕಬಲ್ಲೆ. ಶುಕ್ರವಾರ ಕೆಲಸ ಮಾಡಿದ ಮೊದಲ ದಿನ, ಸಹೋದ್ಯೋಗಿಗಳು ನನ್ನೊಂದಿಗೆ ಮಾತನಾಡಿದರು ಮತ್ತು ಅವರಲ್ಲಿ ಒಬ್ಬರಂತೆ ನನ್ನನ್ನು ಗೌರವಿಸಿದ್ದರು." ಪರಿಚಯ ಹೇಳಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com