ಭದ್ರಾವತಿ: ಅಪಘಾತದಲ್ಲಿ ಕೈಕಳೆದುಕೊಂಡರೂ ಎಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ವಿದ್ಯಾರ್ಥಿನಿ

ಆಕೆ ತನ್ನಸ್ನೇಹಿತರೊಡನೆ ಪಿಕ್ನಿಕ್ ತೆರಳಿದ್ದ ವೇಳೆ ಭೀಕರ ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿದ್ದಳು. ಇನ್ನು ಆಕೆಯ ಭವಿಷ್ಯವೇನೆಂಬ ಚಿಂತೆ ಅವಳಿಗೆ ಹಾಗೂ ಅವಳ ಪಾಲಕರಿಗೂ....

Published: 02nd May 2019 12:00 PM  |   Last Updated: 02nd May 2019 03:54 AM   |  A+A-


Girl who lost a hand in accident scores 96 per cent in SSLC exam but battle for compensation continues

ಭದ್ರಾವತಿಯ ಬಿ.ಎಸ್. ನಂದಿನಿ ಹಾಗೂ ಅವರ ಪೋಷಕರು

Posted By : RHN RHN
Source : The New Indian Express
ಶಿವಮೊಗ್ಗ: ಆಕೆ ತನ್ನಸ್ನೇಹಿತರೊಡನೆ ಪಿಕ್ನಿಕ್ ತೆರಳಿದ್ದ ವೇಳೆ ಭೀಕರ ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿದ್ದಳು. ಇನ್ನು ಆಕೆಯ ಭವಿಷ್ಯವೇನೆಂಬ ಚಿಂತೆ ಅವಳಿಗೆ ಹಾಗೂ ಅವಳ ಪಾಲಕರಿಗೂ ಇತ್ತಾದರೂ  ಈಗ ತಮ್ಮ ಮಗಳ ಸಾಧನೆ ಕಂಡು ಪಾಲಕರ ಮೊಗದಲ್ಲಿ ಕಿರುನುಗೆ ಮೂಡಿದೆ. ಆಕೆ ಈ ವರ್ಷ ನಡೆದ ಹತ್ತನೇ ತರಗತಿ ಪರೀಕ್ಷೆಯಲ್ಲಿ  96% ಅಂಕ ಗಳಿಸಿ ಸಾಧನೆ ಮೆರೆದಿದ್ದಾಳೆ.

ಭದ್ರಾವತಿಯ ಬಿ.ಎಸ್. ನಂದಿನಿ ಎಂಬ ವಿದ್ಯಾರ್ಥಿನಿ ಸುಮಾರು ಮೂರು ತಿಂಗಳ ಹಿಂದೆ ಶಾಲಾ ಪ್ರವಾಸಕ್ಕೆ ತೆರಳಿದ್ದಾಗ ಭೀಕರ ಅಪಘಾತವಾಗಿ ತನ್ನ ಬಲಗೈ ಸಂಪೂರ್ಣ ಕಳೆದುಕೊಂಡಿದ್ದಲ್ಲದೆ ಎಡಗೈ ಸಹ ಬಹುತೇಕ ಹಾನಿಗೀಡಾಗಿತ್ತು. ನವೆಂಬರ್ 2018 ರಲ್ಲಿ ಪೂರ್ಣಪ್ರಜ್ಞಾ  ಶಾಲೆಯ ಪ್ರವಾಸ ಈ ವಿದ್ಯಾರ್ಥಿನಿ ಪಾಲಿಗೆ ಭೀಕರ ಅನುಭವವನ್ನು ನೀಡಿತ್ತು. ಉಡುಪಿ ಸಮೀಪದ ಸೇಂಟ್ ಮೆರೀಸ್ ದ್ವೀಪ ಸೇರಿ ನಾನಾಕಡೆ ಪ್ರವಾಸ ಹೊರಟಿದ್ದ ವಿದ್ಯಾರ್ಥಿಗಳ ಬಸ್ ಚಿಕ್ಕಮಗಳೂರು ಎನ್.ಆರ್. ಪುರ ಸಮೀಪ ಅಪಘಾತವಾಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದ, ಒಂಬತ್ತು ಮಂದಿ ಗಂಭೀರ ಗಾಯಗೊಂಡಿದ್ದರು. ಅವರಲ್ಲಿ ಒಬ್ಬಳು ನಂದಿನಿಯಾಗಿದ್ದು ಈಕೆ ಬಲಗೈ ಸಂಪೂರ್ಣ ಹಾನಿಗೊಳಗಾಗಿತ್ತು.  ಆದರೆ ಛಲ ಬಿಡದೆ ನಂದಿನಿ ತನ್ನ ಉಳಿದ ತುಂಡಾದ ತೋಳಿನ ಮೂಲಕವೇ ಪರೀಕ್ಷೆ ಬರೆದು ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ. 

ಅಪಘಾತದ ಚಿಕಿತ್ಸೆಗಾಗಿ ಸುಮಾರು ಎರಡು ತಿಂಗಳ ಕಾಲ ಶಾಲೆಯಿಂದ ದೂರವಿದ್ದೂ ನಂದಿನಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ  96% (600/625)  ಅಂಕ ಗಳಿಸಿದ್ದಾರೆ. ಭದ್ರಾವತಿ, ಕೋಯಮತ್ತೂರು ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದ್ದು ಆ ಚಿಕಿತ್ಸೆ ಜತೆಜತೆಗೇ ಆಕೆ ಪರೀಕ್ಷೆಗೆ ಸಿದ್ದತೆ ನಡೆಸಿದ್ದಳು. ವಿದ್ಯಾರ್ಥಿನಿಯ ಎಡಗೈ ಉಳಿಯುವಿಕೆಗಾಗಿ ಆಕೆಯ ಪೋಷಕರು ಆಕೆಯನ್ನು ತಮಿಳುನಾಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

"ನನ್ನ ಕೈಗಳಿಲ್ಲ ಎಂದು ನನಗೆ ಅರಿವಾಗಿತ್ತು, ಆದರೆ ನಾನು ನನ್ನ ಅಧ್ಯಯನ ಮುಂದುವರಿಸಲು ತೀರ್ಮಾನಿಸಿದೆ.ಅದರಂತೆ ಎಲ್ಲಾ ವಿಷಯಗಳ ಪ್ರಮುಖ ಭಾಗಗಳ ಅದ್ಯಯನ ಮುಂದುವರಿಸಿದೆ.ನನ್ನ ಕಷ್ಟದ ಸಮಯದಲ್ಲಿ ನನ್ನ ಸಹಪಾಠಿಗಳು, ಶಿಕ್ಷಕರು ಮತ್ತು ಕುಟುಂಬದ ಸದಸ್ಯರು ನನ್ನ ಬೆಂಬಲಕ್ಕೆ ನಿಂತರು. ಚಿಕಿತ್ಸೆಗಾಗಿ ನಾನುಆಸ್ಪತ್ರೆಯಲ್ಲಿದ್ದು ಶಾಲೆಗೆ ಹಾಜರಾಗದೆ ಹೋದಾಗಲೂ ಶಾಲಾ ಪಠ್ಯಕ್ರಮವನ್ನು ಒದಗಿಸುವಲ್ಲಿ ಅವರೆಲ್ಲಾ ಬಹಳ ಸಹಕಾರ ನೀಡಿದ್ದಾರೆ." ನಂದಿನಿ ಹೇಳಿದ್ದಾರೆ.

ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಿರುವ ಪೋಷಕರಾದ ಸೋಮನಾಥ್ ಹಾಗೂ ನಿರ್ಮಲಾ ಈಗಲೂ ಆಕೆಯ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆ. "ನಾವು ಅವಳು ಸುಖವಾಗಿರುವುದಕ್ಕಾಗಿ ಹಾರೈಸುತ್ತೇವೆ. ಇಂದು ಆಕೆಯ ಅಂಕಗಳಿಕೆ ನೊಡಿದ್ದ ನಂತರ ಇದ್ರು ಕೆಲಭಾಗ ಸಾಧ್ಯವಿದೆ ಎಂಬ ಭರವಸೆ ಮೂಡಿದೆ. ನಮಗೆ ಆಕೆಯ ಸಾಧನೆ ಬಗ್ಗೆ ಹೆಮ್ಮೆ ಇದೆ, ಆದರೆ ಪ್ರತಿಬಾರಿ ಆಕೆಯನ್ನು ಕಂಡಾಗಲೂ ನಮಗೆ ಅತಿವ ದುಃಖವಾಗುತ್ತದೆ" ನಂದಿನಿಯ ತಂದೆ ಮತ್ತು ಪ್ರೌಢ ಶಾಲಾ ಶಿಕ್ಷಕ ಸೋಮನಾಥ ಬಿ ವಿ ಹೇಳಿದರು

ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸುವುದು ಕಷ್ಟ

ಇನ್ನು ಕಳೆದೆರಡು ತಿಂಗಳಿಂದ  ಪ್ರತಿ ದಿನ ಎದುರಾಗುವ ವೈದ್ಯಕೀಯ ಖರ್ಚು ವೆಚ್ಚಗಳನ್ನು ಭರಿಸಲು ಸೋಮನಾಥ್ ಕುಟುಂಬ ಬಹಳವೇ ಕಷ್ಟಪಡುತ್ತಿದೆ. ಅಪಘಾತಗಳ ದಿನ ಹಲವಾರು ಸಂಘಟನೆಗಳು ಮತ್ತು ರಾಜಕೀಯ ನಾಯಕರು ದೊಡ್ಡ ಪ್ರಮಾಣದಲ್ಲಿ ಭರವಸೆ ನಿಡಿದ್ದರು. ಆದರೆ ಮುಂದೆ ಅವರೆಲ್ಲರೂ ಈ ಘಟನೆಯನ್ನೇ ಮರೆತಿದ್ದಾರೆ. ಈ ಹಿಂದೆ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದಾಗಲೂ ನಂದಿನಿ ಪೋಷಕರು ಅವರನ್ನು ಕಂಡಿದ್ದರು. ಅವರೂ ಆರ್ಥಿಕ ನೆರವಿನ ಭರವಸೆ ನೀಡಿದ್ದರಾದರೂ ಇಂದುಗೂ ಅವರ ಭರವಸೆ ಭರವಸೆಯಾಗಿಯೇ ಉಳಿದಿದೆ.

"ಶಾಲಾ ಆಡಳಿತ ಪ್ರಾಥಮಿಕ ಚಿಕಿತ್ಸೆ ವೆಚ್ಚವನ್ನಷ್ತೇ ಪಾವತಿ ಮಾಡಿದೆ, ಉಳಿದಂತೆ ಯಾವ ವೆಚ್ಚ ಭರಿಸಲು ಅವರು ನಿರಾಕರಿಸಿದ್ದಾರೆ. ನಾನು ಉಡುಪಿಯ ಶಾಲಾ ಮುಖ್ಯ ಆಡಳಿತ ಮಂಡಳಿಯವರೆಗೆ ಪ್ರಕರಣವನ್ನು ಒಯ್ದಾಗ ಅಲ್ಲಿಯೂ ಭರವಸೆಯಷ್ಟೇ ದೊರಕಿತು. ಅಪಘಾತದ ಬಳಿಕ ಅನೇಕರು ನಮ್ಮ ಮನೆಗೆ ಆಗಮಿಸಿದ್ದರು, ಆದರೆ ನಾವು ಚಿಕಿತ್ಸೆಗಾಗಿ ಖರ್ಚು ಮಾಡಿದ ಕನಿಷ್ಠ ಹಣವನ್ನು ಪಡೆಯಲು ನಮಗೆ ಸಹಾಯ ಮಾಡಲಿಲ್ಲ. ಕೆಲವರು ಈಗ ವಿಭಿನ್ನ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ಅವರ ಜವಾಬ್ದಾರಿಗಳಿಂದ ದೂರ ಸರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸೋಮನಾಥ್ ಹೇಳಿದ್ದಾರೆ. 
Stay up to date on all the latest ವಿಶೇಷ news with The Kannadaprabha App. Download now
facebook twitter whatsapp