ತಾಯಂದಿರ ದಿನ: ಎಂಟು ಮಕ್ಕಳಿದ್ರೂ ಏಕಾಂಗಿ ಬದುಕು, 85 ವರ್ಷದ ಸ್ವಾಭಿಮಾನಿ ಮಹಿಳೆಯ ಕಥೆ-ವ್ಯಥೆ

ಆಕೆ ಹೆಸರು ದೇವಕಿ, ವರ್ಷ 85 ಮುಖದಲ್ಲಿ ಸದಾ ನಗುವಿಟ್ಟುಕೊಂಡು ವ್ಯಾಪಾರ ನಡೆಸುವ ಈಕೆಗೆ ಎಂಟು ಜನ ಮಕ್ಕಳು. ಆದರೆ ಈಗ ತನ್ನ ಕುಟುಂಬ ಎಂದು ಹೇಳಿಕೊಳ್ಲಲು ಒಬ್ಬರೂ ಜತೆಯಲ್ಲಿಲ್ಲ.

Published: 12th May 2019 12:00 PM  |   Last Updated: 12th May 2019 09:34 AM   |  A+A-


Devaki

ದೇವಕಮ್ಮ

Posted By : RHN RHN
Source : The New Indian Express
ಬೆಂಗಳೂರು: ಆಕೆ ಹೆಸರು ದೇವಕಿ, ವರ್ಷ 85 ಮುಖದಲ್ಲಿ ಸದಾ ನಗುವಿಟ್ಟುಕೊಂಡು ವ್ಯಾಪಾರ ನಡೆಸುವ ಈಕೆಗೆ ಎಂಟು ಜನ ಮಕ್ಕಳು. ಆದರೆ ಈಗ ತನ್ನ ಕುಟುಂಬ ಎಂದು ಹೇಳಿಕೊಳ್ಲಲು ಒಬ್ಬರೂ ಜತೆಯಲ್ಲಿಲ್ಲ. ಹದಿನಾರು ವರ್ಷದ ಹಿಂದೆ ಆಕೆಯ ಪತಿ ಸಾವನ್ನಪ್ಪಿದ್ದ ನಂತರ ದೇವಕಿಯವರ ಮಕ್ಕಳೆಲ್ಲಾ ಆಕೆಯ ಕೈಬಿಟ್ತರು. ಆದರೆ ದೇವಕಿ ಎದೆಗುಂದಲಿಲ್ಲ. ತಮ್ಮ 70 ನೇ ವಯಸ್ಸಿನಲ್ಲಿ ಒಂದು ಸಣ್ಣ ಅಂಗಡಿ ಪ್ರಾರಂಭಿಸಿದರು.

ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯರಂತೆ ದೇವಕಿ ಸಹ ಪ್ರತಿದಿನ ಬೆಳಿಗ್ಗೆ ಆರಕ್ಕೆ ಅನೆ ಬಿಡುತ್ತಾರೆ. ಬೆಳಗಿನ ಉಪಹಾರ, ಮದ್ಯಾಹ್ನದ ಊಟವನ್ನು ಬುತ್ತಿಯಲ್ಲಿ ತುಂಬಿಕೊಂಡು ರಾಜಾಜಿನಗರ, ಮಂಜುನಾಥ ನಗರದಲ್ಲಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿನ ತಮ್ಮ ಅಂಗಡಿಗೆ ಆಗಮಿಸುತ್ತಾರೆ. ಚಿಕ್ಕ ಅಂಗಡಿಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಸಂಜೆ ಆರು ಗಂಟೆಗೆಲ್ಲಾ ಆಕೆ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಾರೆ. ಪ್ರತಿದಿನ ಸರಾಸರಿ 400  ರು. ವ್ಯಾಪಾರ ಮಾಡುವುದಾಗಿ ಆಕೆ ಪತ್ರಿಕೆಗೆ ತಿಳಿಸಿದ್ದಾರೆ.

"1,600 ಬಾಡಿಗೆಗೆ ಪಾವತಿಸಿದ ನಂತರ, ನಾನು ಉಳಿದ ಹಣದಲ್ಲಿ ತಿಂಗಳ ಖಾಲ ಜೀವನ ಮಾಡಬಲ್ಲೆ. ನಾನು ತಿಂಗಳಿಗೆ 1000 ರೂಪಾಯಿ ವಿಧವಾ ಮಾಸಾಶನವನ್ನು ಪಡೆಯುತ್ತೇನೆ" ಅವರು ಹೇಳಿದರು.

ಮೂಲತಃಅ ಕಲಬುರ್ಗಿಯವರಾದ ದೇವಕಿ ಅಥವಾ ದೇವಕಮ್ಮ ತಮ್ಮ ಪತಿ ಹಾಗೂ ಎಂಟು ಮಕ್ಕಳೊಡನೆ ನಗರಕ್ಕೆ ಆಗಮಿಸಿದ್ದರು.  

"ನನ್ನ ಮಕ್ಕಳು ನಮ್ಮ ಸ್ವಗ್ರಾಮದಲ್ಲಿನ ಜಾಗವನ್ನು ಮಾರಿ ನಮಗೆ ಸಮಪಾಲಿನ ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಯಾವ ಮಕ್ಕಳೂ ಸಹ ನನ್ನನ್ನು ಜತೆಯಲ್ಲಿರಿಸಿಕೊಳ್ಲಲು ಬಯಸುವುದಿಲ್ಲ" ಅವರು ವಿವರಿಸಿದರು.

"ನನ್ನ ಪುತ್ರರಲ್ಲಿ ಓರ್ವ ಮದ್ಯವ್ಯಸನಿಯಾಗಿದ್ದಾನೆ. ನಾನು ಅವನನ್ನು ಐದು ತಿಂಗಳ ಕಾಲ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೆ. ವಿಷಯವೆಂದರೆ ಆತನ ಪತ್ನಿ ಸೇರಿ ಯಾರೊಬ್ಬರೂ ಅವನ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಆದರೆ ನನಗೆ ಃಆಗೆ ಬಿಟ್ಟುಬಿಡಲಾಗಲಿಲ್ಲ. ಆದರೆ ಕಡೆಗೆ ಎಲ್ಲವೂ ವ್ಯರ್ಥವಾಗಿ ಹೋಯಿತು".ಈಗ ಆತ ಸಹ ಅವರೊಡನಿಲ್ಲ. ಕೆಲವೊಮ್ಮೆ ಆತ ದೇವಕಮ್ಮನವರ ಅಂಗಡಿಗೆ ಆಗಮಿಸಿ ಮದ್ಯಪಾನ ಮಾಡಲಿಕ್ಕಾಗಿ ಹಣ ಬೇಡುತ್ತಾನೆ. ಆಕೆ ನಿಡಲು ನಿರಾಕರಿಸಿದರೆ  ಕೆಲವೊಮ್ಮೆ ಅವಳ ಮೇಲೆ ಹಲ್ಲೆ ಮಾಡುತ್ತಾನೆ.

3X3 ಅಡಿ  ಜಾಗದಲ್ಲಿ ಅಂಗಡಿ ಮಾಡಲು ದೇವಕಮ್ಮನವರ ನೆರೆಹೊರೆಯವರು ಆಕೆಗೆ ಸಹಾಯ ಮಾಡಿದ್ದಾರೆ. "ನೆಲಸಮಗೊಳಿಸಲಾದ ಕಟ್ಟ್ಡವೊಂದರಿಂಡ ಮರದ ಹಲಗೆಗಳನ್ನೆತ್ತಿಕೊಂಡು ನಾನೊಂದು ಅಂಗಡಿ ನಿರ್ಮಿಸಿಕೊಳ್ಳಲು ಅವರು ನನಗೆ ನೆರವಾಗಿದ್ದಾರೆ." ದೇವಕಿ ಹೇಳಿದರು.

ಅನ್ನಭಾಗ್ಯ ವಿಚಾರವಾಗಿ ಕೇಳಿದಾಗ ಆಕೆ ತಾನೇನೂ ಅಕ್ಕಿ, ಬೇಳೆ, ಸಕ್ಕರೆಗಳನ್ನು ಪಡೆಯುತ್ತಿಲ್ಲ ಎನ್ನುತ್ತಾರೆ. ". "ನನ್ನ ಮಗನ ರೇಷನ್ ಕಾರ್ಡ್ ನಲ್ಲಿ ನನ್ನ ಹೆಸರು ಸೇರಿಸಲಾಗಿದೆ, ಆದ್ದರಿಂದ ನನ್ನ ಪಾಲು ಅವನಿಗೆ ಹೋಗುತ್ತಿದೆ"

ದೇವಕಮ್ಮನವರ ಅಂಗಡಿ ಕಾಲಿ ಸೈಟ್ ನ ಪಕ್ಕದಲ್ಲಿದ್ದು ಒಂದೊಮ್ಮೆ ಯಾರಾದರೂ ಈ ಜಾಗದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಿದರೆ ಅವರು ಆ ಸ್ಥಳ ತೊರೆಯಬೇಕಾಗುವುದು. ಒಮ್ಮೆ ಯಾರಾದರೂ ಆ ಸೈಟ್ ನಲ್ಲಿ ಕಟ್ಟಡ ನ್ರ್ಮಾಣ ಪ್ರಾರಂಭಿಸಿದರೆ ನಾನು ಈ ಸ್ಥಳವನ್ನು ಬಿಟ್ಟುಬಿಡಬೇಕು. ಪರ್ಯಾಯ ಸ್ಥಳಕ್ಕಾಗಿ ಯಾರಾದರೂ ನನಗೆ ಸಹಾಯ ಮಾಡಿದ್ದರೆ ನಾನು ಕೃತಜ್ಞರಾಗಿರುತ್ತೇನೆ. ಯೋಗ್ಯ ಸ್ಥಳದಲ್ಲಿ ಅಂಗಡಿಯನ್ನು ನಡೆಸುವುದು ನನ್ನ ಏಕೈಕ ಆಶಯ. ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳುವುದಿಲ್ಲ. ನಾನು ಸ್ವಾಭಿಮಾನಿಯಾಗಿದ್ದು ನನ್ನ ಕೊನೆಯುಸಿರು ಇರುವ ತನಕ ನನ್ನ ಊಟವನ್ನು ನಾನು ದುಡಿದು ಗಳಿಸುತ್ತೇನೆ." ಅವರು ಹೇಳಿದರು.
Stay up to date on all the latest ವಿಶೇಷ news with The Kannadaprabha App. Download now
facebook twitter whatsapp