ಮದುಮಗಳೇ ಇಲ್ಲದ ಈ ಮದುವೆಗೆ ಬಂದು ಉಂಡವರು 800 ಮಂದಿ!

ಜೀವನದಲ್ಲೊಮ್ಮೆ ಆಗುವ ವಿವಾಹವು ಎಂದಿಗೂ ಅವಿಸ್ಮರಣೀಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲೊಂಬ್ಬರು ತನ್ನ ಮಗನಿಗೆ ವಧುವೇ ಸಿಗದಿದ್ದರೂ ಸಹ....

Published: 13th May 2019 12:00 PM  |   Last Updated: 13th May 2019 05:02 AM   |  A+A-


This Gujarat man had a lavish wedding, sans bride

ಮದುಮಗಳೇ ಇಲ್ಲದ ಈ ಮದುವೆಗೆ ಬಂದು ಉಂಡವರು 800 ಮಂದಿ!

Posted By : RHN RHN
Source : The New Indian Express
ಹಿಮ್ಮತ್‌ನಗರ: ಜೀವನದಲ್ಲೊಮ್ಮೆ ಆಗುವ ವಿವಾಹವು ಎಂದಿಗೂ ಅವಿಸ್ಮರಣೀಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲೊಂಬ್ಬರು ತನ್ನ ಮಗನಿಗೆ ವಧುವೇ ಸಿಗದಿದ್ದರೂ ಸಹ ಅವನ ಆಸೆಯಂತೆ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಸಿದ್ದಾರೆ! ಹೌದು ವಧು ಇಲ್ಲದೇ ಹೋದರೂ ತನ್ನ 27  ವರ್ಷದ ಮಗ ಅಜಯ್ ಬರೋತ್ ಗೆ ಆತನ ತಂದೆ ಅವನಿಷ್ಟದಂತೆ ಮದುವೆ ಮಾಡಿಸಿದ್ದಾರೆ.

ಗುಜರಾತಿನಲ್ಲಿ ನದೆದಿರುವ ಈ ವಿವಾಹದ ಹಿಂದೆ ಮಾನವೀಯತೆಯ ಉದ್ದೇಶವಿದೆ. ಅಜಯ್ ಕಲಿಕಾ ಅಸಾಮರ್ಥ್ಯ ಹೊಂದಿದ ವ್ಯಕ್ತಿಯಾಗಿದ್ದು ಆತನಿಗೆ ತನ್ನ ಮದುವೆ ಅದ್ದೂರಿಯಾಗಿರಬೇಕೆಂದು ಆಸೆ ಇತ್ತು. ಚಿಕ್ಕಂದಿನಿಂದಲೇ ತಾಯಿಯನ್ನು ಕಳೆದುಕೊಂಡಿದ್ದ ಆತನಿಗೆ ಅವನಿಚ್ಚೆಯನ್ನು ಪೂರ್ಣಗೊಳಿಸಬೇಕೆಂದು ತಂದೆ ನಿಶ್ಚಯಿಸಿದ್ದರು. ಆದರೆ ಎಷ್ಟು ಹುಡುಕಿದರೂ ತಕ್ಕ ಜೋಡಿ ದೊರೆಯಲಿಲ್ಲ. ಹಾಗೆಂದು ನಿರಾಶರಾಗದ ಪೋಷಕರು ಆತನಿಗೆ ವಧುವೇ ಇಲ್ಲದೆ ವಿವಾಹ ಕಾರ್ಯಕ್ರಮ ನಡೆಸಿದ್ದಾರೆ.

ಮಾನಸಿಕ ಸಮಸ್ಯೆ ಹೊಂದಿದ್ದ ಮಗನ ಕನಸನ್ನು ಈಡೇರಿಸಲಿಕ್ಕಾಗಿ ತಂದೆ ಸಿದ್ದವಾಗಿದ್ದರು. ಗುಜರಾತಿ ಸಂಪ್ರದಾಯದಂತೆ ಮದುವೆಯ ಎಲ್ಲಾ ಶಾಸ್ತ್ರಗಳೂ ನೆರವೇರಿದ್ದವು. ಮದುವೆ ಆಮಂತ್ರಣ ಪತ್ರಿಕೆ ಸಹ ಮುದ್ರಿಸಲಾಗಿದ್ದು ಸಂಪಂಧಿಕರು, ಸ್ನೇಹಿತರಿಗೆ ನಿಡಲಾಗಿದೆ.

ಮದುವೆ ಹಿಂದಿನ ದಿನ ಮೆಹಂದಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೆ ವರ ಕುಟುಂಬ್, ಆಪ್ತ ಸ್ನೇಹಿತರು ಸಾಕಷ್ಟು ಪ್ರಮಾಣದಲ್ಲಿ ಜಮಾಯಿಸಿದ್ದರು.

ಮದುವೆ ದಿನ ಸಹ ಸಂಪ್ರದಾಯದ ಅನುಸಾರ ಕುದುರೆ ಏರಿ ಯುವಕ ಮೆರವಣಿಗೆಯಲ್ಲಿ ಭಾಗವಹಿಸಿದ್ದ. ಈ ವೇಳೆ 200 ಜನರು ನೃತ್ಯ ಮಾಡುತ್ತಾ ಸಾಗಿದ್ದರು. ಮದುವೆಗೆ ಸುಮಾರು 800  ಜನರಿಗೆ ಔತಣಕೂಟ ಏರ್ಪಾಡಿಸಲಾಗಿತ್ತು.

ಮಾದ್ಯಮದವರೊಡನೆ ಮಾತನಾಡಿದ ಅಜಯ್ ತಂದೆ "ನನ್ನ ಮಗ ಮಾನಸಿಕ ಅಸಮತೋಲನ ಹೊಂದಿದ್ದವ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ. ಊರಿನಲ್ಲಿ ಬಹುತೇಕ ಎಲ್ಲಾ ಮದುವೆಗೆ ಆತ ಹಾಜರಾಗುತ್ತಿದ್ದ. ನನ್ನ ಮದುವೆ ಯಾವಾಗಲೆಂದು ಆಗಾಗ ನನ್ನನ್ನು ವಿಚಾರಿಸುತ್ತಿದ್ದ. ಆದರೆ ಅವನನ್ನು ಒಪ್ಪುವ ವಧು ಸಿಕ್ಕುವುದಿಲ್ಲ ಎಂಬುದು ನಮಗೆ ತಿಳಿದಿತ್ತು. ನಾನು ನನ್ನ ಪರಿವಾರ, ಕುಟುಂಬದವರೊಡನೆ ಮಾತನಾಡಿ ವಧುವಿಲ್ಲದೆ ವಿವಾಹ ಮಾಡಲು ನಿಶ್ಚಯಿಸಿದೆವು. ಅದರಂತೆ ಮಗನ ಆಸೆ ಈಡೇರುವಂತಾಗಲು ನಾವಿಂದು ವಿವಾಹ ನಡೆಸಿದ್ದೇವೆ" ಎಂದಿದ್ದಾರೆ. ಮಗನ ಸಂತೋಷದ ಹೊರತು ನನಗಾವುದೂ ದೊಡ್ಡದಲ್ಲ ಎಂಬುದು ಅವರ ನಿರ್ಧಾರವಾಗಿದೆ.
Stay up to date on all the latest ವಿಶೇಷ news with The Kannadaprabha App. Download now
facebook twitter whatsapp