ಹೊಸಪೇಟೆಯಲ್ಲಿ ವಿಶೇಷ ರಿಕ್ಷಾ ವಾಲಾ!

ಇಲ್ಲೊಬ್ಬ ಬುದ್ದಿವಂತ ಬಡಪಾಯಿ ಸೈಕಲ್ ರಿಕ್ಷಾ ಚಾಲಕ ತನ್ನಲ್ಲಿರುವ ಪುಡಿಗಾಸನ್ನ ಕೂಡಿಟ್ಟು ಹಳೆಯ ಸೈಕಲ್ ರಿಕ್ಷಾಗೆ ಆಧುನಿಕ  ಟಚ್ ಕೊಟ್ಟು ತನ್ನ ಭಾರವನ್ನ ಕಡಿಮೆಮಾಡಿಕೊಂಡಿದ್ದಾನೆ. 

Published: 14th November 2019 06:28 PM  |   Last Updated: 14th November 2019 06:28 PM   |  A+A-


SpecialRickshawala

ರಿಕ್ಷಾವಾಲಾ

Posted By : Nagaraja AB
Source : RC Network

ಹೊಸಪೇಟೆ: ವಿಜ್ಞಾನ ತಂತ್ರಜ್ಞಾನ ಎಷ್ಟೇ  ಮುಂದುವರೆದಿದ್ರೂ ಅದನ್ನ ಬಳಸಿಕೊಳ್ಳುವ ಬುದ್ದಿವಂತಿಕೆ ಇಲ್ಲದಿದ್ದರೆ ಬಡವನ ಬದುಕು ಮಾತ್ರ ಯಾವತ್ತಿಗೂ ಬದಲಾಗುವುದೇ ಇಲ್ಲ ನೋಡಿ, ಅದರಲ್ಲೂ ಹಣ ಉಳ್ಳ ಕೆಲವರು ಹೊಸ ಆಧುನಿಕ ಯಂತ್ರಗಳನ್ನು  ಖರೀದಿಸಿ ತಮ್ಮ ಕೆಲಸದ ಹೊರೆಗಳನ್ನ ಕಡಿಮೆಮಾಡಿಕೊಂಡ್ರೆ, ಇತ್ತ ಬುದ್ದಿ ಇಲ್ಲದವನು ಮಾತ್ರ ಕತ್ತೆಯ ರೀತಿಯಲ್ಲಿ ಭಾರವನ್ನ ಹೊರಲೇಬೇಕು ಎಳೆಯಲೆಬೇಕಾದ ಪರಿಸ್ಥಿತಿಯನ್ನ ನಾವು ನೀವು ಎಲ್ಲೆಡೆ ಕಾಣುತ್ತೇವೆ, ಆದರೆ ಇಲ್ಲೊಬ್ಬ ಬುದ್ದಿವಂತ ಬಡಪಾಯಿ ಸೈಕಲ್ ರಿಕ್ಷಾ ಚಾಲಕ ತನ್ನಲ್ಲಿರುವ ಪುಡಿಗಾಸನ್ನ ಕೂಡಿಟ್ಟು ಹಳೆಯ ಸೈಕಲ್ ರಿಕ್ಷಾಗೆ ಆಧುನಿಕ  ಟಚ್ ಕೊಟ್ಟು ತನ್ನ ಭಾರವನ್ನ ಕಡಿಮೆಮಾಡಿಕೊಂಡಿದ್ದಾನೆ. 

ಹೌದು ಹೀಗೆ ಮೂರು ಚಕ್ರದ ಸೈಕಲ್ ರಿಕ್ಷಾ ಮೇಲೆ ಕುಳಿತು ಆರಾಮವಾಗಿ ಸೈಕಲ್ ಚಲಾಯಿಸುತ್ತಿರುವ ಈ ವ್ಯಕ್ತಿಯ ಹೆಸರು ಬಸವರಾಜ್ ಎಂದು, ಅರವತ್ತರ ಆಸುಪಾಸಿನ ಈ ವ್ಯಕ್ತಿ ಆರಾಮವಾಗಿ ಈ ರೀತಿ ಸೈಕಲ್ ರಿಕ್ಷಾವನ್ನ ಚಲಾಯಿಸಿ ಜೀವನ ಸಾಗಿಸುವುದಕ್ಕೆ ಕಾರಣ ಈತನ್ನಲ್ಲಿರುವ ಛಲ ಮತ್ತು ಬುದ್ದಿವಂತಿಕೆ. 

ಹೌದು ಹೊಸಪೇಟೆ ನಗರದ ಬಳ್ಳಾರಿ ರೋಡ್ ನಿವಾಸಿಯಾಗಿರುವ ಈ ಬಸವರಾಜ್ ಕಳೆದ ನಾಲ್ಕು ದಶಕಗಳಿಂದ ರಿಕ್ಷಾ ಚಲಾಯಿಸಿಕೊಂಡೇ ಬದುಕು ಸಾಗಿಸುತಿದ್ದಾನೆ. ಆದರೆ ಇತ್ತೀಚೆಗೆ ವಯಸ್ಸಾಗುತಿದ್ದಂತೆ ಇವರ ಶಕ್ತಿ ಕೂಡ ಕಡಿಮೆಯಾಗಿ ಹೇಗಪ್ಪ ಈ ಸೈಕಲ್ ರಿಕ್ಷಾ ತುಳಿದು ದುಡಿಯಬೇಕೆಂದು ಯೋಚನೆಯಾಗಿತ್ತು, ಈ ಮದ್ಯ ಬಸವರಾಜ್ ಅವರಿಗೆ ಕಂಡಿದ್ದೇ ಹಳೆ ಮೋಟಾರು ಸೈಕಲ್ ಇಂಜಿನ್, ಹೌದು ಗುಜರಿ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಒಂದು ಮೋಟಾರು  ಸೈಕಲ್ ಇಂಜಿನ್ ಖರೀದಿಸಿ ತನ್ನ ಪರಿಚಯಸ್ಥ ವೆಂಕಟೇಶ್ ಎಂಬ ಬೈಕ್ ಮೆಕಾನಿಕ್ ಬಳಿ ಹೋಗಿ ತನ್ನ ಈ ಸೈಕಲ್ ರಿಕ್ಷಾಗೆ ಅಳವಡಿಸಿಕೊಂದ್ದಾನೆ. ಬ್ರೇಕ್ ಹೆಕ್ಸಲೀಟರ್ ಕಿಕ್ ರಾಡ್ ಎಲ್ಲವೂ ಅದೇ ತನ್ನ ಹಳೆಯ ಸೈಕಲ್ ರಿಕ್ಷಾದ್ದೇ,  ಹಾಗಾಗಿ ಈ ಸೈಕಲ್ ರಿಕ್ಷಾ ಈಗ ಹೊಸಪೇಟೆಯ ದುಡಿಯುವ ವರ್ಗದ ಜನ ಸಾಮಾನ್ಯರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ನಗರದ ವಿ.ಆರ್.ಎಲ್. ಸಂಸ್ಥೆಯ ಕೋರಿಯರ್ ಪಾರ್ಸೆಲ್ ಸರ್ವೀಸ್ ನಲ್ಲಿ ಕೆಲಸಮಾಡುವ ಈ ಬಸವರಾಜ್ ಪ್ರತಿದಿನ ನಗರದಲ್ಲಿ ಕಿಲೋಮಿಟರ್ ಗಟ್ಟಲೆ ಸೈಕಲ್ ತುಳಿದು ಸರ್ವೀಸ್ ಕೊಡಬೇಕು, ಅದರಲ್ಲೂ ಸಾಗುವ ರಸ್ತೆಯಲ್ಲಿ ದಿಬ್ಬ ತಗ್ಗುಗಳು ಬಂದರೆ ಜೀವನವೇ ಸಾಕೆನಿಸಿಬಿಡುವಷ್ಟು ಕಷ್ಟವಾಗುತಿತ್ತು.  ಆದರೆ ಈ ರಿಕ್ಷಾ ಬೈಕ್ ಸಿದ್ದಪಡಿಸಿದಾಗಿನಿಂದ ಯಾವುದೇ ತೊಂದರೆ ಇಲ್ಲದೆ ಸಲೀಸಾಗಿ ಕೆಲಸಮಾಡಿಕೊಂಡು ಸಂಜೆಯಾಗುತಿದ್ದಂತೆ ಆರಾಮವಾಗಿ ದುಡಿದ ಆದಾಯವನ್ನ ಮನೆಗೆ ತೆಗೆದುಕೊಂಡು ಹೋಗುತಿದ್ದಾನೆ

ಪ್ರತಿದಿನ ಒಂದು ನೂರು ರೂಪಾಯಿಯನ್ನ ವೆಚ್ಚ ಮಾಡಿ ಪೆಟ್ರೋಲ್ ಹಾಕಿದ್ರೆ, ಐದು ನೂರರಿಂದಾರು ಆರುನೂರು ರೂಪಾಯಿ ಸಂಪಾದಿಸಿಕೊಂಡು ಮನೆಗೆ ಆರಾಮವಾಗಿ ಹೋಗುತಿದ್ದಾರೆ. ಅದಲ್ಲದೆ ಈ ಹಿಂದೆ ಕಡಿಮೆ ಕೆಲಸ ಮಾಡುತಿದ್ದ ಬಸವರಾಜ್ ಈಗ ಎಲ್ಲರಿಗಿಂತ ಹೆಚ್ಚಿಗೆ ಕೆಲಸ ಮಾಡಿಕೊಂಡು ಮನೆಗೆ ಹೋಗುತಿದ್ದಾನೆ.ಇದು ಹೊಸಪೇಟೆ ಜನ ಸಾಮಾನ್ಯರ ಹುಬ್ಬೇರಿಸುವಂತೆ ಮಾಡಿದೆ.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp