ಭಕ್ತಿಯ ಮಹಿಮೆ! ಶಬರಿಮಲೆ ಯಾತ್ರಿಕರನ್ನ ಅನುಸರಿಸಿ 480 ಕಿಮೀ ಚಾರಣ ಮಾಡಿದ ಬೀದಿನಾಯಿ

ದೇವರ ಮೇಲಿನ ಭಕ್ತಿ ಹಾಗೂ ಸಮರ್ಪಣಾ ಬಾವಕ್ಕೆ ಯಾವ ಮಿತಿಗಳಿರುವುದಿಲ್ಲ. ಅದು ಮಾನವರಿರಲಿ, ಪ್ರಾಣಿಗಳೇ ಆಗಿರಲಿ ಭಕ್ತಿ ಎಲ್ಲರಲ್ಲಿ ಒಂದೇ ಆಗಿರಲಿದೆ ಎನ್ನುವುದುಅಕ್ಕೆ ಈ ಸುದ್ದಿ ತಾಜಾ ಉದಾಹರಣೆಯಾಗಲಿದೆ. ಸಾಮಾನ್ಯ ಬೀದಿ ನಾಯಿಯೊಂದು ಶಬರಿಮಲೆ ಯಾತ್ರಿಕರನ್ನು ಅನುಸರಿಸಿ ಬಂದಿದ್ದು ಇದುವರೆಗೆ 480 ಕಿಮೀ ಪ್ರಯಾಣ ಮಾಡಿದೆ.

Published: 18th November 2019 03:54 PM  |   Last Updated: 18th November 2019 03:55 PM   |  A+A-

ಭಕ್ತಿಯ ಮಹಿಮೆ! ಶಬರಿಮಲೆ ಯಾತ್ರಿಕರನ್ನ ಅನುಸರಿಸಿ 480 ಕಿಮೀ ಚಾರಣ ಮಾಡಿದ ಬೀದಿನಾಯಿ

Posted By : Raghavendra Adiga
Source : ANI

ದೇವರ ಮೇಲಿನ ಭಕ್ತಿ ಹಾಗೂ ಸಮರ್ಪಣಾ ಬಾವಕ್ಕೆ ಯಾವ ಮಿತಿಗಳಿರುವುದಿಲ್ಲ. ಅದು ಮಾನವರಿರಲಿ, ಪ್ರಾಣಿಗಳೇ ಆಗಿರಲಿ ಭಕ್ತಿ ಎಲ್ಲರಲ್ಲಿ ಒಂದೇ ಆಗಿರಲಿದೆ ಎನ್ನುವುದುಅಕ್ಕೆ ಈ ಸುದ್ದಿ ತಾಜಾ ಉದಾಹರಣೆಯಾಗಲಿದೆ. ಸಾಮಾನ್ಯ ಬೀದಿ ನಾಯಿಯೊಂದು ಶಬರಿಮಲೆ ಯಾತ್ರಿಕರನ್ನು ಅನುಸರಿಸಿ ಬಂದಿದ್ದು ಇದುವರೆಗೆ 480 ಕಿಮೀ ಪ್ರಯಾಣ ಮಾಡಿದೆ.

ಕೇರಳದ ಶಬರಿಮಲೆಗೆ ತೆರಳುತ್ತಿರುವ  13 ಅಯ್ಯಪ್ಪ ಭಕ್ತರ ತಂಡದೊಡನೆ ಈ ನಾಯಿ ಪ್ರಯಾಣ ಬೆಳೆಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಭಕ್ತರು ಬರಿಗಾಲಿನಲ್ಲಿ 31 ರಂದು ಆಂಧ್ರಪ್ರದೇಶದ ತಿರುಮಲದಿಂದ ಯಾತ್ರೆ ಪ್ರಾರಂಭಿಸಿದಾಗಿನಿಂದ ನಾಯಿ ಅವರನ್ನು ಅನುಸರಿಸಿ ಬರುತ್ತಿದೆ. ಈ ಭಕ್ತರ ತಂಡವೀಗ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿದೆ.

ದಕ್ಷಿಣ ಕನ್ನಡದ ಮೂಡಬಿದಿರೆಯ ತೋಡಾರು ಗ್ರಾಮದ ನಿವಾಸಿ ರಾಜೇಶ್ ಗುರುಸ್ವಾಮಿಯವರ ತಂಡದಲ್ಲಿ ಈ ನಾಯಿಯೂ ಸೇರಿಕೊಂಡಿದೆ.ಪ್ರಾರಂಭದಲ್ಲಿ ನಾಯಿ ತಮ್ಮನ್ನು ಹಿಂಬಾಲಿಸಿ ಬರುವುದು ಯಾವೊಬ್ಬ ಭಕ್ತರಿಗೆ ಗಮನಕ್ಕೆ ಬಂದಿರಲಿಲ್ಲ. ಆದರೆ ಬಹುದೂರ ಸಾಗಿ ಬಂದಾಗಲೂ ನಾಯಿ ತಮ್ಮ ತಂಡದ ಬೆನ್ನಿಗೇ ಬರುತ್ತಿರಿವಿದಿ ಕಂಡು ಭಕ್ತರ ತಂಡ ಅಚ್ಚರಿಗೊಂಡಿದೆ. "ನಾವು ಆರಂಭದಲ್ಲಿ ನಾಯಿಯನ್ನು ಗಮನಿಸಲಿಲ್ಲ. ಆದರೆ ನಾವು ಮುಂದುವರೆದಂತೆ ಅದೂ ಕೂಡ ನಮ್ಮನ್ನು ಅನುಸರಿಸಿದೆ.ನಾವು ತಯಾರಿಸುವ ಆಹಾರವನ್ನು ನಾವು ಅದಕ್ಕೆ ನಿಡಿದ್ದೇವೆ.  ನಾವು ಪ್ರತಿವರ್ಷ ಶಬರಿಮಲೆ ತೀರ್ಥಯಾತ್ರೆ ಮಾಡುತ್ತೇವೆ, ಆದರೆ ಇದು ಹೊಸ ಅನುಭವ," ಭಕ್ತರು ಹೇಳಿದರು.

ನಾಯಿ ಒಂದೆರಡು ಬಾರಿ ತನ್ನ ಪಂಜಗಳಿಗೆ ಗಾಯವನ್ನು ಮಾಡಿಕೊಂಡಿದ್ದು ಸ್ಥಳೀಯ ಪಶುವೈದ್ಯರು ಅದಕ್ಕೆ ಚಿಕಿತ್ಸೆ ಒದಗಿಸಿದ್ದಾರೆ. ಈ ಭಕ್ತರ ತಂಡ ಇದೀಗ ನಾಯಿಯನ್ನು ಸಹ ಶಬರಿಮಲೆಗೆ ಕರೆದೊಯ್ಯಲಿದೆ ಎಂದು ಭಕ್ತರೊಬ್ಬರು ಹೇಳೀದ್ದಾರೆ. 41 ದಿನಗಳ ಸುದೀರ್ಘವಾದ ಮಂಡಲ-ಮಕರವಿಳಕ್ಕುಂ ಪೂಜಾ ಉತ್ಸವಕ್ಕಾಗಿ ನವೆಂಬರ್ 16 ರಂದು ಶಬರಿಮಲೆ ದೇವಾಲಯವನ್ನು ತೆರೆಯಲಾಯಿತು.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp