ತಾನು ಬದುಕಿದ್ದೇನೆಂದು ಪತ್ನಿಗೆ ತಿಳಿಸಲು ಪ್ರತಿದಿನ ಹಣ ವಿತ್ ಡ್ರಾ ಮಾಡುವ ಸೈನಿಕ!

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿದ ನಂತರದಲ್ಲಿ ಮೊಬೈಲ್ ನೆಟ್ ವರ್ಕ್ ಹಾಗೂ ಇತರೆ ಎಲ್ಲಾ ರೀತಿಯ ಸಂಪರ್ಕ ಸಾಧನಗಳನ್ನು ತೆಗೆದು ಹಾಕಿರುವುದು ಗೊತ್ತಿರುವ ಸಂಗತಿ. ಇದರಿಂದಾಗಿ ಸಾರ್ವಜನಿಕರಷ್ಟೇ ಅಲ್ಲದೆ ಸೈನಿಕರಿಗೆ ಸಹ ಸಾಕಷ್ಟು ತೊಂದರೆಯಾಗಿದೆ. ಸೇನಾ ಸಿಬ್ಬಂದಿಗಳು ತಮ್ಮ ಕುಟುಂಬದವರನ್ನು ಸಂಪರ್ಕಿಸಲು....

Published: 06th October 2019 04:10 PM  |   Last Updated: 06th October 2019 04:10 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿದ ನಂತರದಲ್ಲಿ ಮೊಬೈಲ್ ನೆಟ್ ವರ್ಕ್ ಹಾಗೂ ಇತರೆ ಎಲ್ಲಾ ರೀತಿಯ ಸಂಪರ್ಕ ಸಾಧನಗಳನ್ನು ತೆಗೆದು ಹಾಕಿರುವುದು ಗೊತ್ತಿರುವ ಸಂಗತಿ. ಇದರಿಂದಾಗಿ ಸಾರ್ವಜನಿಕರಷ್ಟೇ ಅಲ್ಲದೆ ಸೈನಿಕರಿಗೆ ಸಹ ಸಾಕಷ್ಟು ತೊಂದರೆಯಾಗಿದೆ. ಸೇನಾ ಸಿಬ್ಬಂದಿಗಳು ತಮ್ಮ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗದೆ ಹೋಗುತ್ತಿದ್ದಾರೆ. ಅದರಿಂದ ಸೈನಿಕರ ಕುಟುಂಬದವರೂ ಸಹ ಆತಂಕಿತರಾಗಿದ್ದಾರೆ. ಆದರೆ ಇಲ್ಲೊಬ್ಬ ಸೈನಿಕ ತಾನು ಇದಕ್ಕಾಗಿ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾನೆ. ಆತ "ತಾನು ಬದುಕಿದ್ದೇನೆ" ಎಂದು ತಮ್ಮ ಕುಟುಂಬದವರಿಗೆ ಖಾತ್ರಿ ಪಡಿಸಲಿಕ್ಕಾಗಿಯೇ ಪ್ರತಿ ದಿನವೂ ಎಟಿಎಂ ನಿಂದ ಹಣವನ್ನು ವಿತ್ ಡ್ರಾ ಮಾಡುತ್ತಿದ್ದಾರೆ!

ಕಾಶ್ಮೀರದದಲ್ಲಿನ ಸೈನಿಕ ಬಾರಮುಲ್ಲಾದ ಖ್ವಾಜಾ ಬಾಗ್ ಪ್ರದೇಶದಲ್ಲಿ ಎಟಿಎಂ ಕ್ಯಾಬಿನ್‌ಗೆ ಪ್ರವೇಶಿಸುತ್ತಾರೆ. ಅಲ್ಲಿ ಅವರು ಕನಿಷ್ಟ ಮೊತ್ತ 100 ರು. ವಿತ್ ಡ್ರಾ ಮಾಡುತ್ತಾರೆ. ಹಾಗೆಯೇ ಅದನ್ನು ತನ್ನ ಪಾಕೆಟ್ ಗೆ ಸೇರಿಸಿಕೊಂಡು ಹೊರಟು ಹೋಗುತ್ತಾರೆ.

ಪ್ರತಿದಿನವೂ ಆ ಸೌಇನಿಕ ತಪ್ಪದೇ ಎಟಿಎಂಗೆ ಬಂದು 100 ರು. ವಿತ್ ಡ್ರಾ ಮಾಡಿಕೊಂಡು ಹೋಗುತ್ತಾರೆ. ಅದಾಗ ಎಟಿಎಂ ಸಿಬ್ಬಂದಿ ಇದನ್ನು ಗಮನಿಸಿ ಸೈನಿಕನನ್ನು ಪ್ರಶ್ನಿಸಿದ್ದಾರೆ. "ನೀವು ಒಂದೊಮ್ಮೆಗೇ ಏಕೆ ತಮಗೆ ಬೇಕಾದಷ್ಟು ಹಣ ವಿತ್ ಡ್ರಾ ಮಾಡಬಾರದು? ಪ್ರತಿದಿನವೂ 100 ರು. ಮಾತ್ರವೇ ಏಕೆ ವಿತ್ ಡ್ರಾ ಮಾಡುವಿರಿ?" 

ಇದಕ್ಕೆ ಉತ್ತರವಾಗಿ ಸೈನಿಕ "ನನಗೆ ನನ್ನ ಕುಟುಂಬವನ್ನು ತಲುಪಲು, ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ಕುಟುಂಬದವರೊಡನೆ ನಾನು ಸಂಪರ್ಕ ಹೊಂದಲು ಸಾಧ್ಯವಿಲ್ಲ. ಆದರೆ ನನ್ನ ಬ್ಯಾಂಕ್ ಖಾತೆ ನನ್ನ ಪತ್ನಿ ಹೆಸರಿನ ಮೊಬೈಲ್ ನಂಬರ್ ಗೆ ಲಿಂಕ್ ಆಗಿದೆ. ಹಾಗಾಗಿ ನಾನಿಲ್ಲಿ ಹಣ ವಿತ್ ಡ್ರಾ ಮಾಡಿದರೆಆಕೆ ಮೆಸೇಜು ಓದುತ್ತಾಳೆ. ಆಗ ಪ್ರತಿದಿನವೂ ನಾನು ಹಣ ಡ್ರಾ ಮಾಡುವುದರಿಂಡ ನಾನು ಕ್ಷೇಮವಾಗಿದ್ದೇನೆ ಎಂದು ಆಕೆ ತಿಳಿಯುತ್ತಾಳೆ" ಎಂದು ಉತ್ತರಿಸಿದ್ದಾರೆ. ಸೈನಿಕನ ಉತ್ತರದಿಂದಾಗಿ ಸೆಕ್ಯೂರಿಟಿ ಗಾರ್ಡ್ ಮಾತ್ರವಲ್ಲದೆ ಅಲ್ಲೇ ಇದ್ದ ಸಾರ್ವಜನಿಕರು ಸಹ ಭಾವುಕರಾಗಿ ಪ್ರತಿಕ್ರಯಿಸಿದ್ದಾರೆ. ಇದೀಗ ಈ ಸಂಬಂಧ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿದ್ದು ನೆಟ್ಟಿಗರು ಭಾವುಕರಾಗಿ ವಿವಿಧ ಬಗೆಯಲ್ಲಿ ಪ್ರತಿಕ್ರಯಿಸುತ್ತಿದ್ದಾರೆ.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp