ಮದ್ಯ ಮಾರಾಟ ಹೆಚ್ಚಲು ಕಾರಣವಾದ ಮಹಿಳೆಯರು! ಸಮೀಕ್ಷೆಯಲ್ಲಿ ಬಯಲಾಯ್ತು ವಿಚಿತ್ರ ಸತ್ಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪಾನ ಮಾಡುತ್ತಿರುವುದು ಆಲ್ಕೋಹಾಲ್ ಮಾರುಕಟ್ಟೆ ವಹಿವಾಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪಾನ ಮಾಡುತ್ತಿರುವುದು ಆಲ್ಕೋಹಾಲ್ ಮಾರುಕಟ್ಟೆ ವಹಿವಾಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಕಮ್ಯೂನಿಟಿ ಎಗೇನ್ಸ್ಟ್ ಡ್ರಂಕನ್ ಡ್ರೈವಿಂಗ್ (ಸಿಎಡಿಡಿ) ಸಂಸ್ಥೆಯು ನಡೆಸಿದ ಈ ಸಮೀಕ್ಷೆಯಲ್ಲಿ ಭಾರತದ ಆಲ್ಕೋಹಾಲ್ ಮಾರುಕಟ್ಟೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು ವಾರ್ಷಿಕ 2.7 ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ" ಎಂದು ವಿವರಿಸಲಾಗಿದೆ.

ಜಾಗತಿಕವಾಗಿ ಶೇ. 6ರಷ್ಟು ಪ್ರಮಾಣದಲ್ಲಿ ಭಾರತೀಯರು ಆಲ್ಕೊಹಾಲ್ ಬಳಸುತ್ತಿದ್ದಾರೆ.  ಕಳೆದ ದಶಕಕ್ಕೆ ಹೋಲಿಸಿದರೆ ಮಹಿಳೆಯರು ಹೆಚ್ಚು ಮದ್ಯಪಾನ ಮಾಡುತ್ತಿದ್ದಾರೆ. ಉದಾಹರಣೆಗೆ, ದೆಹಲಿಯಲ್ಲಿ, 40 ಪ್ರತಿಶತ ಪುರುಷರು ಮತ್ತು 20 ಪ್ರತಿಶತ ಮಹಿಳೆಯರು (ಸುಮಾರು 15 ಲಕ್ಷ ಮಹಿಳೆಯರು) ಆಲ್ಕೊಹಾಲ್ ಸೇವಿಸುತ್ತಾರೆ ಎಂದು ಸಿಎಡಿಡಿ ಸಂಸ್ಥಾಪಕ ಪ್ರಿನ್ಸ್ ಸಿಂಘಾಲ್ ಹೇಳಿದ್ದಾರೆ.

ವಿವಿಧ ವಯೋಮಾನದ 5,000 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಂತೆ ಮೂರು ತಿಂಗಳ ಅವಧಿಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು "ಸಾಂ<ಸ್ಕ್ರೂತಿ ಬದಲಾವಣೆಯ ಈ ಸಮಯದಲ್ಲಿ ಮಘಿಳೆಯರಲ್ಲಿ ತಿನ್ನುವ ಹಾಗೂ ಆಲ್ಕೋಹಾಲ್ ಸೇವಿಸುವ ಪ್ರಮಾಣ ಹೆಚ್ಚಾಗಿದ್ದು ಇದು ಮದ್ಯದ ಬೇಡಿಕೆಯನ್ನು ಹೆಚ್ಚಿಸಿದೆ" ಎಂದು ಸಿಂಘಾಲ್ ಹೇಳಿದರು. ಸಿಎಡಿಡಿ ಸಂಸ್ಥಾಪಕರು ಮಹಿಳೆಯರು ಇನ್ನು ಮುಂದೆ ಪುರುಷರ ಸಹವಾಸದಲ್ಲಿ ಆಲ್ಕೊಹಾಲ್ ಸೇವನೆಗೆ ವಲಂಬಿತರಾಗುವುದಿಲ್ಲ. ಬದಲಾಗಿ ತಾವೇ ಏಕಾಂಗಿಯಾಗಿಯೋ ಅಥವಾ ಸ್ನೇಹಿತೆಯರ ಜತೆ ಗುಂಪಾಗಿಯೋ ಆಲ್ಕೋಹಾಲ್ ಸೇವನೆ ಮಾಡುತ್ತಾರೆ. ಎಂದು ಹೇಳಿದರು.

ಮಹಿಳೆಯರ ಅದರಲ್ಲಿಯೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರ ಆಲ್ಕೊಹಾಲ್ ಮೇಲಿನ ಖರ್ಚು ಗಣನೀಯವಾಗಿ ಹೆಚ್ಚಾಗಿದೆ ಎಂದು ಸಮೀಕ್ಷೆ  ಬಹಿರಂಗಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com