ಹರಿಯಾಣ: ಮದ್ವೆಗೆ ಹೆಣ್ಣಿಲ್ಲ-1.50 ಲಕ್ಷ ನೀಡಿ ವಧು ಖರೀದಿಗಿಳಿದ ಯುವಕರು!

 ಅತಿಯಾದ ಸ್ತ್ರೀಭ್ರೂಣ ಹತ್ಯೆಯ ಪರಿಣಾಮ ಈಗ ಉತ್ತರ ರಾಜ್ಯ ಹರಿಯಾಣದಲ್ಲಿ ವಿವಾಹಯೋಗ್ಯ ಯುವತಿಯರ ಸಂಖ್ಯೆ ತೀರಾ ವಿರಳವಾಗಿದ್ದು ಯುವಕರು, ಅವರ ಪೋಷಕರು ನೆರೆ ರಾಜ್ಯಗಳಿಂಡ ಹಣ ನೀಡಿ ವಧುವನ್ನು ತರುವಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡಿಘರ್: ಅತಿಯಾದ ಸ್ತ್ರೀಭ್ರೂಣ ಹತ್ಯೆಯ ಪರಿಣಾಮ ಈಗ ಉತ್ತರ ರಾಜ್ಯ ಹರಿಯಾಣದಲ್ಲಿ ವಿವಾಹಯೋಗ್ಯ ಯುವತಿಯರ ಸಂಖ್ಯೆ ತೀರಾ ವಿರಳವಾಗಿದ್ದು ಯುವಕರು, ಅವರ ಪೋಷಕರು ನೆರೆ ರಾಜ್ಯಗಳಿಂಡ ಹಣ ನೀಡಿ ವಧುವನ್ನು ತರುವಂತಾಗಿದೆ. ವಿಶೇಷವೆಂದರೆ ಇದೊಂದು ಪೂರ್ಣ ಪ್ರಮಾಣದ ಉದ್ಯಮವೇ ಆಗಿ ಬೆಳೆದಿದ್ದು ನೂರಾರು ಯುವತಿಯರನ್ನು ಭಾರತದ ಒಂದು ಡಜನ್ ಭಾರತೀಯ ರಾಜ್ಯಗಳಿಂದ ಮಾತ್ರವಲ್ಲದೆ ನೇಪಾಳದಿಂದ ಸಹ ಯುವತಿಯರನ್ನು ಖರೀದಿಸಿ ತರಲಾಗುತ್ತಿದೆ ಎಂದು  ಅಧ್ಯಯನವೊಂದು ಹೇಳಿದೆ.

ಹರಿಯಾಣದ ಪುರುಷರು ತಮ್ಮ ಸಾಮಾಜಿಕ ಸ್ಥಾನಮಾನ, ಸೌಂದರ್ಯ, ವಿವಾಹದ ಸ್ಥಿತಿ ಮತ್ತು ವಧುಗಳ ಶಿಕ್ಷಣವನ್ನು ಅವಲಂಬಿಸಿ 35,000 ರಿಂದ 1.50 ಲಕ್ಷ ರೂ.ಗಳನ್ನು ಪಾವತಿಸಿ ವಿವಾಹಕ್ಕಾಗಿ ಯುವತಿಯರ ಖರೀದಿ ನಡೆಸಿದ್ದಾರೆ."ವಧುವಿನ ಖರೀದಿ ವ್ಯವಹಾರ ದಿನದಿನಕ್ಕೆ ಹೆಚ್ಚಳವಾಗುತ್ತಿದ್ದು ಇದರಿಂದ ಮದ್ಯವರ್ತಿಗಳು ಸಾಕಷ್ಟು ದೊಡ್ಡ ಮೊತ್ತದ ಹಣ ಸಂಪಾದಿಸುತ್ತಿದ್ದಾರೆ" ಎಂದು ವರದಿ ಹೇಳಿದೆ.

"ಪಾರೋ" ಅಥವಾ "ಖರೀದಿ ಹುಯಿ" ಅಥವಾ "ಮೋಲ್-ಕಿ-ಬಹು" ಎಂದು ಕರೆಯಲ್ಪಡುವ ವಧುಗಳನ್ನು ಅಕ್ಷರಶಃ ಪ್ರಾಣಿಗಳಂತೆ ಪರಿಗಣಿಸಿ ಮಾರಾಟ ಮಾಡಲಾಗುತ್ತದೆ.ಅವರೆಲ್ಲರೂ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ತ್ರಿಪುರ, ಉತ್ತರಾಖಂಡ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ನೇಪಾಳದ ಬಡ ಕುಟುಂಬಗಳಿಂದ ಬಂದವರು ಎಂದು ಪಂಜಾಬ್ ವಿಶ್ವವಿದ್ಯಾನಿಲಯದ  ಸಾಮಾಜಿಕ ಸೇವಾಕೇಂದ್ರದ ಸಂಶೋಧನಾ ವಿದ್ವಾಂಸ ಆದಿತ್ಯ ಪರಿಹಾರ್ ಹೇಳುತ್ತಾರೆ ಹರಿಯಾಣದಲ್ಲಿ ವಧು ಖರೀದಿ ಕುರಿತ ಅಧ್ಯಯನದಲ್ಲಿ ದೆಹಲಿ,  ಪಾಲ್ವಾಲ್, ಕರ್ನಾಲ್, ಕಲ್ಕಾ ಮತ್ತು ಅಂಬಾಲಾದಲ್ಲಿ ಮಹಿಳೆಯರನ್ನು ಮಾರಾಟ ಗೆ ಸ್ಥಳಗಳಿಗೆ ಕರೆತರಲಾಗುತ್ತದೆ ಮತ್ತು ನಂತರ ‘ಖರೀದಿದಾರ ಗಂಡ’  ನೊಡನೆ ಕಳುಹಿಸಲಾಗುತ್ತದೆ ಎಂದು ಪರಿಹಾರ್ ಹೇಳುತ್ತಾರೆ.

ಲಿಂಗಾನುಪಾತದಲ್ಲಿನ ಅತಿಯಾದ ವ್ಯತ್ಯಾಸವು ಹರಿಯಾಣದಲ್ಲಿ ಮದುವೆಗೆ ಯುವತಿಯರ ಕೊರತೆಗೆ ಕಾರಣವಾಗಿದೆ ಮತ್ತು ವಧು ಖರೀದಿಗೂ ಇದುವೇ ಮುಖ್ಯ ಕಾರಣ.ಗ್ರಾಮೀಣ ಪ್ರದೇಶದ ಜನರಿಗೆ ಮದುವೆ ಕಳ್ಳಸಾಗಣೆ ಬಗೆಗೆ ಅರಿವಿಲ್ಲ.ಮದ್ಯವರ್ತಿಗಳು ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ-ಇತರ ರಾಜ್ಯಗಳ ಬಡ ಹುಡುಗಿಯರನ್ನು ‘ಟ್ರ್ಯಾಪಿಂಗ್’ ಮಾಡುತ್ತಾರೆ ಎಂದು ಅಧ್ಯಯನವು ತಿಳಿಸಿದೆ. ಅಲ್ಲದೆ, ಹುಡುಗಿಯರನ್ನು ಖರೀದಿಸುವುದು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿಗಳು, ಜಮೀನ್ದಾರರ ಉಪಜಾತಿಗಳು,  ಬ್ರಾಹ್ಮಣರು, ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗಳ ಯುವತಿಯರ ಖರೀದಿಯೂ ನಡೆಯುತ್ತಿದೆ.

ಇನ್ನು ವಿವಾಹವಾಗುವ ಯುವಕರು ಬಹುತೇಕ ಅನಕ್ಷರಸ್ಥರು, ಅಥವಾ ಕಡಿಮೆ ವಿದ್ಯಾವಂತರು ಮತ್ತು ಹೆಚ್ಚಾಗಿ ಸಣ್ಣ ರೈತರು ಅಥವಾ ನುರಿತ ಮತ್ತು ಅರೆ-ನುರಿತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಿಂಗಳಿಗೆ 10,000 ರೂ.ಗಿಂತ ಕಡಿಮೆ ಆದಾಯವನ್ನು ಗಳಿಸುತ್ತಾರೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಸಂಸ್ಕೃತಿ ಮತ್ತು ಭಾಷೆಯ ವ್ಯತ್ಯಾಸಗಳು ಮತ್ತು ವರ ಮತ್ತು ವಧುವಿನ ನಡುವಿನ ಗಮನಾರ್ಹ ವಯಸ್ಸಿನ ವ್ಯತ್ಯಾಸದಿಂದಾಗಿ ಅಂತಹ ದಂಪತಿಗಳ ಗಂಭೀರ ಸಮಸ್ಯೆ ಎದುರಿಸುವುದು ಸತ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com