40 ವರ್ಷ ತಮ್ಮ ಸೇವೆ ಮಾಡಿದ ಮಹಿಳೆಗೆ ಗುಂಟೂರು ಪೊಲೀಸರ ಹೃದಯಸ್ಪರ್ಶಿ ವಿದಾಯ!

ಬರೋಬ್ಬರಿ 40 ವರ್ಷಗಳ ಕಾಲ ಪೊಲೀಸ್ ಠಾಣೆಯಲ್ಲಿಯೇ ತನ್ನ ಜೀವ ಸವೆಸಿದ ಮಹಿಳೆಗೆ ಗುಂಟೂರು ಪೊಲೀಸರು ಕಣ್ಣೀರಿನ ವಿದಾಯ ಹೇಳಿದ್ದಾರೆ. 
40 ವರ್ಷಗಳ ಪೊಲೀಸ್ ಇಲಾಖೆಗಾಗಿಯೇ ಜೀವ ಸವೆಸಿದ ಮಹಿಳೆಗೆ ವಿದಾಯ ಹೇಳಿದ ಗುಂಟೂರು ಪೊಲೀಸರು!
40 ವರ್ಷಗಳ ಪೊಲೀಸ್ ಇಲಾಖೆಗಾಗಿಯೇ ಜೀವ ಸವೆಸಿದ ಮಹಿಳೆಗೆ ವಿದಾಯ ಹೇಳಿದ ಗುಂಟೂರು ಪೊಲೀಸರು!

ಗುಂಟೂರು: ಬರೋಬ್ಬರಿ 40 ವರ್ಷಗಳ ಕಾಲ ಪೊಲೀಸ್ ಇಲಾಖೆಗಾಗಿಯೇ ತನ್ನ ಜೀವ ಸವೆಸಿದ ಮಹಿಳೆಗೆ ಗಂಟೂರು ಪೊಲೀಸರು ಕಣ್ಣೀರಿನ ವಿದಾಯ ಹೇಳಿದ್ದಾರೆ. 

ಗಂಡನನ್ನು ಕಳೆದುಕೊಂಡ ಬಳಿಕ ಮಹಿಳೆ, ಗುಂಟೂರು ಜಿಲ್ಲೆಯ ತಡೇಪಲ್ಲಿ ಪೊಲೀಸ್ ಠಾಣೆಯನ್ನೇ ಸೂರು ಮಾಡಿಕೊಂಡಿದ್ದರು. ಕಳೆದ 40 ವರ್ಷಗಳಿಂದ ಪೊಲೀಸ್ ಇಲಾಖೆಗಾಗಿಯೇ ತನ್ನ ಜೀವವನ್ನು ಸವೆಸಿದ್ದಾರೆ. ಇದೀಗ ಮಹಿಳೆ ಇಹಲೋಕ ತ್ಯಜಿಸಿದ್ದು, ಸ್ವತಃ ಪೊಲೀಸರೇ ಹಣವನ್ನು ವ್ಯಯಿಸಿ ಮಹಿಳೆಗೆ ಅಂತಿಮ ವಿದಾಯ ಹೇಳಿದ್ದಾರೆ. 

ಮಹಿಳೆಯ ನಿಜವಾದ ಹೆಸರನ್ನು ತಿಳಿಯದ ಪೊಲೀಸರು ಆಕೆಯನ್ನು ಭಾನವತ್, ಮೂಗಮ್ಮ ಎಂದು ಕರೆಯುತ್ತಿದ್ದರು. ಮಹಿಳೆ ಮಾಡುತ್ತಿದ್ದ ಕಾರ್ಯಗಳಿಗೆ ಸಿಬ್ಬಂದಿಗಳೂ ಸೇರಿ ಪೊಲೀಸ್ ಅಧಿಕಾರಿಗಳೂ ಕೂಡ ಗೌರವವನ್ನು ನೀಡುತ್ತಿದ್ದರು. ಬೆಳಗಿನ ಸಮಯದಲ್ಲಿ ಠಾಣೆಯಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ ಮಹಿಳೆಯ ರಾತ್ರಿಯಾಗುತ್ತಿದ್ದಂತೆಯೇ ಪೊಲೀಸ್ ಕ್ಟಾಟ್ರಸ್ ನಲ್ಲಿ ಕಳೆಯುತ್ತಿದ್ದರು. 

ಠಾಣೆಯಲ್ಲಿ ಯಾವುದೇ ಕೆಲಸವಿದ್ದರೂ ಹಿಂದೂ ಮುಂದೂ ನೋಡದೆ ಬಂದು ಕೆಲಸ ಮಾಡುತ್ತಿದ್ದರು. ಠಾಣೆಗೆ ಬರುತ್ತಿದ್ದ ಪೊಲೀಸರು ವರ್ಗಾವಣೆಯಾಗುತ್ತಿದ್ದರು. ಆದರೆ, ಮಹಿಳೆ ಮಾತ್ರ ತನ್ನ ಕೊನೆಯುಸಿರಿರುವವರೆಗೂ ಠಾಣೆಯಲ್ಲಿಯೇ ಕಳೆದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಮೂಗಮ್ಮ ಅವರ ಕುಟುಂಬ ಸದಸ್ಯರು ನಲಗೊಂಡ ಜಿಲ್ಲೆಯ ಸೂರ್ಯಪೇಟೆಯಲ್ಲಿ ನೆಲೆಸಿದ್ದಾರೆ. ತಡೆಪಲ್ಲಿಯಲ್ಲಿ ಕೆಲವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪನಿ ಬಂದ್ ಆದ ಬಳಿಕ ಎಲ್ಲರೂ ತಡೇಪಲ್ಲಿಯೇ ನೆಲೆಸಿದ್ದಾರೆಂದು ಪೊಲೀಸ್ ಅಧಿಕಾರಿ ಡಿ.ನರೇಶ್ ಕುಮಾರ್ ಹೇಳಿದ್ದಾರೆ. 

ಎಲ್ಲರೂ ಊರು ಬಿಟ್ಟರೂ ಮೂಗಮ್ಮ ಮಾತ್ರ ಇಲ್ಲಿಯೇ ಉಳಿದರು. ಠಾಣೆಯಲ್ಲಿ ಡಾನ್ ರೀತಿ ಇದ್ದರು. ಠಾಣೆಯಲ್ಲಿನ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದ ನಾವು ಊಟ ತಿಂಡಿಯನ್ನೂ ಮರೆತು ಬಿಡುತ್ತಿದ್ದೆವು. ಈ ವೇಳೆ ಮೂಗಮ್ಮ ನಮ್ಮೆಲ್ಲರನ್ನೂ ನೋಡಿಕೊಳ್ಳುತ್ತಿದ್ದರು. ಅನಾರೋಗ್ಯಕ್ಕೀಡಾದಾಗ ಸಾಕಷ್ಟು ಬಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇನೆ. ಠಾಣೆಯಿಂದ ಹೊರ ಹೋಗುವ ಹಿಂದಿನ ರಾತ್ರಿ ನನ್ನೊಂದಿಗೆ ಮಾತನಾಡಿದ್ದಾರೆಂದು ಏಸ್.ಆರ್. ನಾರಾಯಣ ಅವರು ತಿಳಿಸಿದ್ದಾರೆ. 

ಮೂಗಮ್ಮ ಅವರೊಂದಿಗೆ ಸಮಯ ಕಳೆದಿದ್ದ ಪೊಲೀಸರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದು, ಮೂಗಮ್ಮ ಅವರಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಸರ್ಕಾರಿ ಗೌರವದ ರೀತಿಯಲ್ಲಿಯೇ ಪೊಲೀಸರು ಗೌರಮ್ಮ ಅವರಿಗೆ ಅಂತಿಮ ವಿದಾಯ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com