ಧಾರವಾಡ ಜಿಲ್ಲೆಯ ಈ ಗ್ರಾಮ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ, ಅ. 2ರಂದು ಪ್ರಧಾನಿ ಮೋದಿಯಿಂದ ಪ್ರಶಸ್ತಿ

ಸಾಮಾನ್ಯವಾಗಿ ಉತ್ತರ ಕರ್ನಾಟಕ ಎಂದ ತಕ್ಷಣ ಹಿಂದೂಳಿದ ಪ್ರದೇಶ ಎಂದು ಭಾವಿಸುತ್ತೇನೆ. ಆದರೆ ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮಕ್ಕೆ ಭೇಟಿ ನೀಡಿದರೆ ನಮ್ಮ ಗ್ರಹಿಕೆಯ ತಪ್ಪು ಎಂಬುದು ಗೊತ್ತಾಗುತ್ತದೆ...

Published: 28th September 2019 06:06 PM  |   Last Updated: 28th September 2019 06:12 PM   |  A+A-


anchetgeri

ಅಂಚಟಗೇರಿ

Posted By : Lingaraj Badiger
Source : The New Indian Express

ಧಾರವಾಡ: ಸಾಮಾನ್ಯವಾಗಿ ಉತ್ತರ ಕರ್ನಾಟಕ ಎಂದ ತಕ್ಷಣ ಹಿಂದೂಳಿದ ಪ್ರದೇಶ ಎಂದು ಭಾವಿಸುತ್ತೇವೆ. ಆದರೆ ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮಕ್ಕೆ ಭೇಟಿ ನೀಡಿದರೆ ನಮ್ಮ ಗ್ರಹಿಕೆ ತಪ್ಪು ಎಂಬುದು ಗೊತ್ತಾಗುತ್ತದೆ. ಸುಮಾರು 6 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ವೈಫೈ, ಸೋಲಾರ್ ವಿದ್ಯುತ್ ಮತ್ತು ಹಲವು ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿಗಳನ್ನು ಸಹ ಕಾಣಬಹುದು.

ಗ್ರಾಮ ಪಂಚಾಯತ್ ಕಚೇರಿ ಮತ್ತು ಉತ್ತಮ ಸರ್ಕಾರಿ ಶಾಲೆಗಳನ್ನು ಹೊಂದಿರುವ ಈ ಗ್ರಾಮ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗುವ ಮೂಲಕ ದೇಶದ ಗಮನ ಸೆಳೆದಿದ್ದು, ಇದಕ್ಕಾಗಿ ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದಂದು ಪ್ರಧಾನಿ ನರೇಂದ್ರ  ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದೆ.

ಸ್ವಚ್ಛ ಹಿ ಸೇವಾ ಕಾರ್ಯಕ್ರಮದಡಿ ಈ ಗ್ರಾಮವನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಅಕ್ಟೋಬರ್ 2ರಂದು ಗುಜರಾತ್ ನ ಅಹಮದಾಬಾದ್ ನ ಸಬರಮತಿ ಆಶ್ರಮದಲ್ಲಿ ನಡೆಯುವ ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಅಂಚಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್ ಬಿಡ್ನಾಳ್ ಹಾಗೂ ಗುತ್ತಿಗೆ ಪೌರಕಾರ್ಮಿಕ ಕರಿಬಸಪ್ಪ ಗುಡಿಸಲಮನಿ ಅವರನ್ನು ಪ್ರಧಾನಿ ಮೋದಿ ಸನ್ಮಾನಿಸಲಿದ್ದಾರೆ.

ಅಂಚಟಗೇರಿ ಗ್ರಾಮ 2017ರಲ್ಲಿ ಬಯಲು ಶೌಚ ಮುಕ್ತ ಗ್ರಾಮ ಎಂಬ ಗೌರವಕ್ಕೆ ಪಾತ್ರವಾಗಿತ್ತು. ಈಗ ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಈ ಗ್ರಾಮದ ಜನತೆ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ. ಈ ಮೂಲಕ ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp