ವಿಧಿಯ ಕೈವಾಡ! 1600 ಕಿಮೀ ದೂರದಿಂದ ಕಾಲ್ನಡಿಗೆಯಲ್ಲಿ ಬಂದ ಮಗನನ್ನು ಮನೆಗೆ ಸೇರಿಸದ ತಾಯಿ

ಕಾಲವು ಮಾನವ ಸಂಬಂಧಗಳ ಪರೀಕ್ಷೆಗೆ ನಿಲ್ಲುತ್ತದೆ ಎಂದು ಹಿರಿಯರು ಹೇಳುವುದು ಇದಕ್ಕೇ ಇರಬೇಕು.  ಮಗನೊಬ್ಬ ತನ್ನ ತಾಯಿಯನ್ನು ಕಾಣುವ ಸಲುವಾಗಿ ಲಾಕ್ ಡೌನ್ ಆತಂಕದ ನಡುವೆ ಕೂಡ ದೂರದ ಮುಂಬೈನಿಂದ ವಾರಣಾಸಿಗೆ ಬರೋಬ್ಬರಿ 1600 ಕಿ.ಮೀ ದೂರ ಕ್ರಮಿಸಿ ಬಂದರೂ ಆತನಿಗೆ ನಿರಾಶೆ ಕಾದಿತ್ತು. ದೂರದಿಂದ ಬಂದ ಮಗನನ್ನು ತಾಯಿ ಪ್ರೀತಿಯಿಂದ ಅಪ್ಪಿ ಬರಮಾಡಿಕೊಳ್ಳುವ ಬದಲು ಆಕೆವನನ್ನು

Published: 13th April 2020 07:40 PM  |   Last Updated: 13th April 2020 07:40 PM   |  A+A-


ವಿಧಿಯ ಕೈವಾಡ! 1600 ಕಿಮೀ ದೂರದಿಂದ ಕಾಲ್ನಡಿಗೆಯಲ್ಲಿ ಬಂದ ಮಗನನ್ನು ಮನೆಗೆ ಸೇರಿಸದ ತಾಯಿ

Posted By : raghavendra
Source : The New Indian Express

ಲಖನೌ: ಕಾಲವು ಮಾನವ ಸಂಬಂಧಗಳ ಪರೀಕ್ಷೆಗೆ ನಿಲ್ಲುತ್ತದೆ ಎಂದು ಹಿರಿಯರು ಹೇಳುವುದು ಇದಕ್ಕೇ ಇರಬೇಕು.  ಮಗನೊಬ್ಬ ತನ್ನ ತಾಯಿಯನ್ನು ಕಾಣುವ ಸಲುವಾಗಿ ಲಾಕ್ ಡೌನ್ ಆತಂಕದ ನಡುವೆ ಕೂಡ ದೂರದ ಮುಂಬೈನಿಂದ ವಾರಣಾಸಿಗೆ ಬರೋಬ್ಬರಿ 1600 ಕಿ.ಮೀ ದೂರ ಕ್ರಮಿಸಿ ಬಂದರೂ ಆತನಿಗೆ ನಿರಾಶೆ ಕಾದಿತ್ತು. ದೂರದಿಂದ ಬಂದ ಮಗನನ್ನು ತಾಯಿ ಪ್ರೀತಿಯಿಂದ ಅಪ್ಪಿ ಬರಮಾಡಿಕೊಳ್ಳುವ ಬದಲು ಆಕೆವನನ್ನು ಮನೆಯೊಳಗೆ ಸೇರಿಸಿಕೊಳ್ಳಲೂ ಸಹ ನಿರಾಕರಿಸಿದ್ದಾಳೆ!

ಹೌದು ಇದು ಸತ್ಯ! ವಾರಣಾಸಿ ಮೂಲದ  ಅಶೋಕ್ (25) ಮುಂಬೈನಲ್ಲಿ ಕೆಲಸದಲ್ಲಿದ್ದ. ಇದೀಗ ದೇಶಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನೆಲೆ ಕೆಲಸವಿಲ್ಲದೆ ಹೋಗಿ ತಾನು ಊರಿಗೆ ಹೊಂತಿರುಗಿ ತಾಯಿ, ಸೋದರರೊಡನೆ ಇರಲು ಬಯಸಿದ್ದ. ಅದಕ್ಕಾಗಿ ಆತ ಕಾಲ್ನಡಿಗೆಯಲ್ಲೇ ಸಾವಿರಾರು ಕಿಮೀ ದೂರ ಕ್ರಮಿಸಿ ಬಂದಿದ್ದ. ಆದರೆ ತಾಯಿ ಹಾಗೂ ಆತನ ಸೋದರ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ.

ವಾರಣಾಸಿಯ ಗೋಲಾ ದಿನನಾಥ್ ಮೂಲದ ಅಶೋಕ್ ನಾಲ್ಕು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗಿದ್ದ. ಸೆಂಟ್ರಲ್ ಮುಂಬೈನ ನಾಗಪಾಡಾದ ರೆಸ್ಟೋರೆಂಟ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ. 

ಆದರೆ ಕೊರೋನಾವೈರಸ್  ಲಾಕ್‌ಡೌನ್ ಘೋಷಿಸಿದ ನಂತರ, ಹೋಟೆಲ್ ಮುಚ್ಚಲ್ಪಟ್ಟಿತು, ಮತ್ತು ಅಶೋಕ್ ಇತರ ಕಡೆಗಳಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಿದ್ದಾನೆ. ಆದರೆ ಎಲ್ಲವೂ ಸಹಜ ಸ್ಥಿತಿಗೆ ಮರಳುವವರೆಗೆ ಏನೂ ಮಾಡುವಂತಿರಲಿಲ್ಲ.

"ನಾನು ಚಂದೌಲಿ ಮತ್ತು ಇತರ ಪ್ರದೇಶಗಳ ನನ್ನ ಐದು ಸ್ನೇಹಿತರೊಂದಿಗೆ ಹದಿನೈದು ದಿನಗಳ ಹಿಂದೆ ಮನೆಗೆ ಮರಳುವುದಕ್ಕೆ ನಿರ್ಧರಿಸಿದೆ. ಕೈಯಲ್ಲಿ ಸ್ವಲ್ಪ ಹಣದೊಂದಿಗೆ, ನಾವು ರಸ್ತೆ ಮತ್ತು ರೈಲು ಹಳಿಗಳ ಮೂಲಕ ಕಾಲ್ನಡಿಗೆಯಲ್ಲಿ ಮನೆಗೆ ತಲುಪಲು 1600 ಕಿ.ಮೀ. ನಡೆದಿದ್ದೆವು."

ವಾರಣಾಸಿ ಕ್ಯಾಂಟ್ ರೈಲ್ವೆ ನಿಲ್ದಾಣ ತಲುಪಿದ ನಂತರ ಅವನಿಗೆ ಸಂತೋಷ ತಡೆಯಲಾಗಲಿಲ್ಲ. ಆದಷ್ಟು ಬೇಗನೆ ತಾಯಿಯನ್ನು ಕೂಡಿಕೊಳ್ಳುವ ಕಾತುರವಾಗಿ ಆಕೆಗೆ ಕರೆ ಮಾಡಿದ್ದಾನೆ. ಅಶೋಕ್ ಅ ತಾಯಿಯ ಕಡೆಯಿಂದ ಸಂಭ್ರಮದ ಪ್ರತಿಕ್ರಿಯೆ ನಿರೀಕ್ಷಿಸಿದ್ದ. "ಈ ಕಷ್ಟದ ಸಮಯದಲ್ಲಿ, ಪೋಷಕರು ದೂರದಲ್ಲಿರುವ ತಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿರುವಾಗ, ನಾನು ಹಿಂತಿರುಗಿದ್ದೇನೆ ಎಂದು ತಿಳಿದರೆ  ನನ್ನ ತಾಯಿ ತುಂಬಾ ಸಂತೋಷವಾಗುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ, ಆದರೆ ಅವಳು ನನ್ನನ್ನು ಅನುಮಾನದಿಂದ ದೂರವಿಟ್ಟಳು. ಇದು ನನಗೆಷ್ಟರ ಮಟ್ಟಿಗೆ ಆಘಾತಕ್ಕೆ ಕಾರಣವಾಗಿದೆ ಎನ್ನುವುದನ್ನು ನೀವು ಊಹಿಸಿ"

ವಾಸ್ತವವಾಗಿ, ಅವನ ಆಗಮನದ ಸುದ್ದಿ ಹರಡಿದ ನಂತರ ಇಡೀ ಪ್ರದೇಶವು ಆತಂಕಕ್ಕೊಳಗಾಯಿತು. ಅಶೋಕ್ ಹಿಂದಿರುಗುವುದನ್ನು ತಡೆಯಲು ಇಡೀ ಆ ಪ್ರದೇಶದ ಜನರು ಒಟ್ಟಾಗಿದ್ದರು. ಅಷ್ಟು ಮಾತ್ರವಲ್ಲ  ತಕ್ಷಣ ತಮ್ಮ ಪ್ರದೇಶದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕೊರೋನಾವೈರಸ್ ಲಾಕ್‌ಡೌನ್ ಇದ್ದು ಎಲ್ಲೆಡೆ ಜನ ಆತಂಕದಲ್ಲಿರುವುದು ಅಶೋಕ್ ಗೆ ಸಹ ಗೊತ್ತಿತ್ತು. ಆತನೇನೂ ಬೇಜವಾಬ್ದಾರಿ ವ್ಯಕ್ತಿಯಾಗಿರಲಿಲ್ಲ. ಆತ  ಮೊದಲು ಕಬೀರ್‌ಚೌರಾದ ವಿಭಾಗೀಯ ಆಸ್ಪತ್ರೆಗೆ ಹೋದನು. ಅಲ್ಲಿ ಯಾವುದೇ ಸ್ಕ್ರೀನಿಂಗ್ ಮಾಡದ ಕಾರಣ, ಅಶೋಕ್ ಅವರನ್ನು ದೀನ್ ದಯಾಳ್ ಲೆವೆಲ್ 2 ಆಸ್ಪತ್ರೆಗೆ ಕಳಿಸಲಾಗಿತ್ತು.ಆಸ್ಪತ್ರೆಯಲ್ಲಿ, ಅವನ ತಪಾಸಣೆಯ ನಂತರ, ಅವನಲ್ಲಿ ಸೋಂಕಿನ ಯಾವುದೇ ಚಿಹ್ನೆಗಳು ಇಲ್ಲದಿದ್ದರೂ, 14 ದಿನಗಳ ಕಾಲ ಸೆಲ್ಫ್-ಕ್ವಾರಂಟೈನ್ ಮಾಡಲು ವೈದ್ಯರು ಸಲಹೆ ನೀಡಿದರು. ವೈದ್ಯರ ಸಲಹೆಯನ್ನು ಅನುಸರಿಸಲು ನಿರ್ಧರಿಸಿದ ಬಳಿಕವೇ ಅಶೋಕ್ ಮನೆಗೆ ತೆರಳಿದ್ದ. ಆದರೆ, ಮೊದಲೇ ವರದಿ ಮಾಡಿದಂತೆ, ಅವನ ತಾಯಿ ಮತ್ತು ಸಹೋದರ ಅಶೋಕ್ ನಿಂದ ಕೊರೋನಾ ಬರಬಹುದು ಎಂದು ಶಂಕಿಸಿ  ಬಾಗಿಲು ತೆರೆಯಲು ನಿರಾಕರಿಸಿದನು. ಅಶೋಕ್ ತನ್ನ ಕುಟುಂಬವನ್ನು ಮನವೊಲಿಸಲು ತನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡಿದ. ಆದರೂ ಯಾವ ಪ್ರಯೋಜನವಾಗಲಿಲ್ಲ.

ಇಷ್ಟಾಗಿ ಅಶೋಕ್ ಕಡೆಗೆ ತನ್ನ ತಾಯಿಯ ಅಜ್ಜಿಯ ಮನೆಯಿದ್ದ ಕಟುಪುರ ಗ್ರಾಮಕ್ಕೆ ತೆರಳಿದ್ದ. ಆದರೆ ಅಲ್ಲಿಯೂ ಸಹ ಅವನಿಗೆ ಆಶ್ರಯ ದೊರಕಲಿಲ್ಲ. ಅಶೋಕ್ ಕೊರೋನಾವೈರಸ್ ದಾಳಿಗೆ ತುತ್ತಾಗಿರಬಹುದು ಎಂದು ಶಂಕಿಸಿದ ಅವರು ಅಶೋಕ್ ನನ್ನು ಮನೆಗೆ ಸೇರಿಸಿಕೊಂಡರೆ ಪೊಲೀಸರುಹಾಗೂ ಆರೋಗ್ಯ ಅಧಿಕಾರಿಗಳು ನಮಗೆ ತೊಂದರೆ ಕೊಡಬಹುದೆಂದು ಭಾವಿಸಿದ್ದಾರೆ. 

ಇದಾಗಿ ಅಶೋಕ್ ಗೆ ಉಳಿದುಕೊಳ್ಳಲು ಎಲ್ಲಿಯೂ ಜಾಗ ದೊರಕದ ಕಾರಣ , ಜಿಲ್ಲಾ ಪೊಲೀಸರು ಆತನನ್ನು ವಾರಣಾಸಿಯ ಮೈದಾಗಿನ್ ಪ್ರದೇಶದ ಖಾಸಗಿ ಆಸ್ಪತ್ರೆಯ ಸಂಪರ್ಕತಡೆ ಕೇಂದ್ರಕ್ಕೆ ದಾಖಲಿಸಿದೆ. "ಅವರು ಉತ್ತಮ ಆರೋಗ್ಯ ಹೊಂದಿದ್ದಾರೆ. ಆದರೆ  ತುಂಬಾ ದಣಿದಿದ್ದಾರೆ " ಕೊಟ್ವಾಲಿ ಪೊಲೀಸ್ ಠಾಣೆ ಅಧಿಕಾರಿ ಇನ್ಸ್‌ಪೆಕ್ಟರ್ ಮಹೇಶ್ ಪಾಂಡೆ ಹೇಳಿದರು.

ಪೊಲೀಸರು ಈಗ ಅವರ ಸ್ನೇಹಿತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಸ್ಕ್ರೀನಿಂಗ್ ಮತ್ತು ಕ್ವಾರಂಟೈನ್ ನಡೆಸಲು ತೀರ್ಮಾನಿಸಿದ್ದಾರೆ.


Stay up to date on all the latest ವಿಶೇಷ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp