ಲಾಕ್ ಡೌನ್ ಮಧ್ಯೆ ಅಂಬ್ಯುಲೆನ್ಸ್ ನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡ ಯುವಕ! ಜನರಿಗೆ ಉಚಿತ ಸೇವೆ

ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಅಂಬ್ಯುಲೆನ್ಸ್ ನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡ ಯುವಕನೊಬ್ಬ,  ಗರ್ಭಿಣಿಯರು, ವೃದ್ಧರನ್ನು ಗ್ರಾಮೀಣ ಪ್ರದೇಶಗಳಿಂದ ಪಟ್ಟಣದಲ್ಲಿರುವ ಆರೈಕೆಯ ಆಸ್ಪತ್ರೆಗಳಿಗೆ ಉಚಿತವಾಗಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. 
ಅಂಬ್ಯುಲೆನ್ಸ್ ಮುಂದೆ ನಿಂತಿರುವ ಮಣಿಕಂದನ್
ಅಂಬ್ಯುಲೆನ್ಸ್ ಮುಂದೆ ನಿಂತಿರುವ ಮಣಿಕಂದನ್

ಪುದುಚೇರಿ: ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಅಂಬ್ಯುಲೆನ್ಸ್ ನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡ ಯುವಕನೊಬ್ಬ,  ಗರ್ಭಿಣಿಯರು, ವೃದ್ಧರನ್ನು ಗ್ರಾಮೀಣ ಪ್ರದೇಶಗಳಿಂದ ಪಟ್ಟಣದಲ್ಲಿರುವ ಆರೈಕೆಯ ಆಸ್ಪತ್ರೆಗಳಿಗೆ ಉಚಿತವಾಗಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. 

ರಾಮನಾಥಪುರಂ ಗ್ರಾಮದ 34 ವರ್ಷದ ಮಣಿಕಂದನ್ ,ಲಾಕ್ ಡೌನ್ ಅವಧಿಯಲ್ಲಿ ಸುಲ್ತಾನ್ ಪೇಟೆ, ವಿಲೈನೂರು, ಅರಸೂರ್, ಕೊಡಪಾಕ್ಕಂ, ಮತ್ತಿತರ ಗ್ರಾಮೀಣ ಪ್ರದೇಶಗಳಿಂದ ಆರು ಗರ್ಭಿಣಿಯರು ಸೇರಿದಂತೆ 20 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಮಣಿಕಂದನ್ ಎಲ್ಲಾ ಸಂದರ್ಭಗಳಲ್ಲಿಯೂ ದೊರೆಯುತ್ತಾರೆ. ಏಪ್ರಿಲ್ 14ರಂದು ಮಧ್ಯರಾತ್ರಿ 12-30ರಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಣಿಕಂದನ್ ಅವರಿಗೆ ಕರೆ ಮಾಡಿದ್ದಾರೆ. ನಂತರ ಅಲ್ಲಿಗೆ ಧಾವಿಸಿದ ಮಣಿಕಂದನ್, ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನಿಸಿದ ನಂತರ ಪೋಷಕರನ್ನು ವಾಪಾಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. 

ಅನೇಕ ಸಂದರ್ಭಗಳಲ್ಲಿ 108 ಅಂಬ್ಯುಲೆನ್ಸ್ ಗಳ ದೊರೆಯುವುದಿಲ್ಲ, ಸರ್ಕಾರಿ ಅಂಬ್ಯುಲೆನ್ಸ್ ಬಹಳ ವಿಳಂಬವಾಗಿ ಬರುತ್ತಿವೆ. ಖಾಸಗಿ ಅಂಬ್ಯುಲೆನ್ಸ್ ಗಳು ಕೇಳುವ ದರವನ್ನು ಭರಿಸುವ ಶಕ್ತಿ ಬಹುತೇಕ ಹಳ್ಳಿಗಾಡಿನ ಜನರಿಗೆ ಇರುವುದಿಲ್ಲ ಎಂದು ಮಣಿಕಂದನ್ ಹೇಳುತ್ತಾರೆ. 

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ನಲ್ಲಿ ಪದವೀಧರನಾಗಿರುವ ಮಣಿಕಂದನ್, ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ದೊರೆಯದೆ ಅಪಘಾತದಲ್ಲಿ ತನ್ನ ಸಹೋದರನ್ನು ಕಳೆದುಕೊಂಡ ನಂತರ 2016 ರಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ.  ಕಲಂ ಟ್ರಸ್ಟ್ ಅಂಬ್ಯುಲೆನ್ಸ್  ಎಂಬ ಹೆಸರಿನ ಎರಡು ಅಂಬ್ಯುಲೆನ್ಸ್ ಗಳು ಕ್ಷಿಪ್ರಗತಿಯಲ್ಲಿ ಹಳ್ಳಿಗಳಿಗೆ ತಲುಪುತ್ತವೆ

ಕಳೆದ 24 ದಿನಗಳಿಂದಲೂ ಅಂಬ್ಯುಲೆನ್ಸ್ ನಲ್ಲಿಯೇ ಇರುವ ಮಣಿಕಂದನ್ ಅವರಿಗೆ ಪೊಲೀಸರು ಉಪಹಾರ, ಊಟವನ್ನು ನೀಡುತ್ತಿದ್ದಾರೆ. ಪ್ರತಿನಿತ್ಯ ಆಸ್ಪತ್ರೆಗೆ ಹೋಗುವುದರಿಂದ ಮನೆಯನ್ನು ಬಿಟ್ಟಿದ್ದೇನೆ. ಆರು ಜೊತೆ ಬಟ್ಟೆ ಹೊಂದಿದ್ದು, ರಸ್ತೆ ಬದಿಯಲ್ಲಿನ ಕೊಳದ ಬಳಿ ಸ್ನಾನ ಮಾಡಿ ಬಟ್ಟೆ ಬದಲಾಯಿಸುವುದಾಗಿ ಮಣಿಕಂದನ್ ಹೇಳುತ್ತಾರೆ

ಮಣಿಕಂದನ್ ಮೊಬೈಲ್ ನಂಬರ್ 8148263646 ಪೊಲೀಸರು, ಶಾಲೆಗಳು, ಸಮುದಾಯ ಮುಖಂಡರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಚಿತವಾಗಿದ್ದು, ಅಗತ್ಯಬಿದ್ದವರು ಕರೆ ಮಾಡುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 670 ರೋಗಿಗಳನ್ನು ಈ ಅಂಬ್ಯುಲೆನ್ಸ್ ಗಳಲ್ಲಿ ಕರೆದೊಯ್ಯಲಾಗಿದೆ. 

ಮಣಿಕಂದನ್ ಪೋಷಕರು ಈಗಲೂ ಕೂಡಾ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇದರಲ್ಲಿಯೇ ತನ್ನಗೆ ತೃಪ್ತಿ ಇದೆ. ಯಾವುದೇ ಸೇವೆ ಮಾಡದ ಜೀವನಕ್ಕೆ ಅರ್ಥವಿಲ್ಲ ಎಂದು ಮಣಿಕಂದನ್ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com