ಕೋವಿಡ್-19 ಸೋಂಕಿನಿಂದ ಗೋವಾ ಮುಕ್ತ: ಕ್ರೆಡಿಟ್ ಈ ವೈದ್ಯರಿಗೆ ಸಲ್ಲಬೇಕು!

ಕೊರೋನಾಸೋಂಕು ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳನೇ ವ್ಯಕ್ತಿಯ ಪರೀಕ್ಷೆಯಲ್ಲಿ ಭಾನುವಾರ ನೆಗೆಟಿವ್ ಕಂಡುಬಂದ ನಂತರ ಗೋವಾ, ಕೋವಿಡ್-19 ಸೋಂಕಿನಿಂದ ಮುಕ್ತವಾದ ರಾಜ್ಯವಾಗಿ ದಾಖಲೆ ಬರೆದಿದೆ.
ಡಾ. ಎಡ್ವಿನ್ ಗೋಮ್ಸ್
ಡಾ. ಎಡ್ವಿನ್ ಗೋಮ್ಸ್

ಪಣಜಿ: ಕೊರೋನಾಸೋಂಕು ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳನೇ ವ್ಯಕ್ತಿಯ ಪರೀಕ್ಷೆಯಲ್ಲಿ ಭಾನುವಾರ ನೆಗೆಟಿವ್ ಕಂಡುಬಂದ ನಂತರ ಗೋವಾ, ಕೋವಿಡ್-19 ಸೋಂಕಿನಿಂದ ಮುಕ್ತವಾದ ರಾಜ್ಯವಾಗಿ ದಾಖಲೆ ಬರೆದಿದೆ.

ಕೊರೋನಾವೈರಸ್ ಚಿಕಿತ್ಸೆಗಾಗಿ  ರಾಜ್ಯ ಗೊತ್ತುಪಡಿಸಿದ ಸೌಲಭ್ಯಕ್ಕಾಗಿ ನೇಮಕವಾಗಿದ್ದ ನೋಡಲ್ ಅಧಿಕಾರಿ ಎಡ್ವಿನ್ ಗೋಮ್ಸ್ , ರಾಜ್ಯದಾದ್ಯಂತ ಮನೆಮಾತಾಗಿದ್ದು, ಪ್ರಶಂಸೆಯ ಸುರಿಮಳೆಯಾಗುತ್ತಿದೆ. 

ಗೋವಾ ಮೆಡಿಕಲ್ ಕಾಲೇಜಿನ ಔಷಧ ವಿಭಾಗದ ಮುಖ್ಯಸ್ಥ 58 ವರ್ಷದ ಎಡ್ವಿನ್ ಗೋಮ್ಸ್, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲಾ ಏಳು ರೋಗಿಗಳಿಗೂ ಯಶಸ್ವಿ ಚಿಕಿತ್ಸೆ ನೀಡಿದ್ದು, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮುಕ್ತಕಂಠದಿಂದ ಗೋಮ್ಸ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. 

ಮಾರಕ ಕೋರೋನಾವೈರಸ್ ನಿಯಂತ್ರಿಸುವಲ್ಲಿ ಡಾ. ಎಡ್ವಿನ್ ಗೋಮ್ಸ್ ನೇತೃತ್ವದಲ್ಲಿನ ಅತ್ಯುತ್ತಮ ತಂಡ ಅವಿರತವಾಗಿ ಶ್ರಮಿಸಿದ್ದು, ನಮ್ಮ ಯೋಧರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವುದಾಗಿ ರಾಣೆ ಹೇಳಿದ್ದಾರೆ. 

ಕೋವಿಡ್-19 ಸೋಂಕು ಹೆಚ್ಚಿರುವ ಸಂದರ್ಭದಲ್ಲಿ 58 ವರ್ಷದ ಎಡ್ವಿನ್ ಗೋಮ್ಸ್, ತೀವ್ರ ಪ್ರಯತ್ನದಿಂದ ಎಲ್ಲಾ ರೋಗಿಗಳನ್ನು ಗುಣಮುಖರನ್ನಾಗಿಸಿದ್ದಾರೆ ಎಂದು ಹೆಸರಾಂತ ವೈದ್ಯ ಆಸ್ಕರ್ ರೆಬೆಲೊ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಡಾ. ಎಡ್ವಿನ್ ಗೋಮ್ಸ್ ತನ್ನಗಿಂತ ಒಂದು ವರ್ಷ ಕಿರಿಯವರಾಗಿದ್ದು, ಕೆಲಸದಲ್ಲಿ ಪ್ರಾಮಾಣಿಕತೆ ರೂಡಿಸಿಕೊಂಡಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಇಂತಹ ಗಟ್ಟಿ ವೈದ್ಯರ ಅಗತ್ಯವಿರುವುದಾಗಿ ಭಾರತೀಯ ವೈದ್ಯಕೀಯ ಸಂಘ ಗೋವಾ ಘಟಕದ ಮಾಜಿ ಅಧ್ಯಕ್ಷ ಶೇಖರ್ ಸಾಲ್ಕರ್ ಶ್ಲಾಘಿಸಿದ್ದಾರೆ. 

ಸಮಾಲೋಚನಾ ವೈದ್ಯರು, ನರ್ಸ್ ಗಳು, ಸಹಾಯಕರು ಒಳಗೊಂಡಂತೆ  ಎಡ್ವಿನ್ ಗೋಮ್ಸ್ ನೇತೃತ್ವದಲ್ಲಿ ಮೂರು ವೈದ್ಯರ ತಂಡ ಪಾಳಿ ಆಧಾರದಲ್ಲಿ ಕೆಲಸ ಮಾಡುವ ಮೂಲಕ  ಗೋವಾವನ್ನು ಕೋವಿಡ್-19 ಸೋಂಕಿನಿಂದ ಮುಕ್ತವಾಗಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com