ದೋಸೆಯಿಂದ ಚಾಕೊಲೇಟ್‌ವರೆಗೆ ಕೊರೋನಾ ರೋಗಿಗಳ ಇಷ್ಟಾರ್ಥ ನೆರವೇರಿಸುವ ಆ 'ದೇವತೆ'!

ಚಿಪ್ಸ್ ನಿಂದ ದೋಸೆವರೆಗೆ, ಆಟಿಕೆಗಳಿಂದ ಗೇಮ್ ಗಳ ವರೆಗೆ,  ರೇಜರ್‌ ಗಳಿಂದ ನೈಲ್ ಕಟರ್ ವರೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ರೋಗಿಗಳು ಏನು ಬೇಕೆಂದರೆ ಅದನ್ನು ಪಡೆಯುತ್ತಾರೆ. ಏಕೆಂದರೆ ಅದೆಲ್ಲಾ ಆ "ದೇವತೆ"ಯ ಕೃಪೆ.
ಡಾ.ಅಸಿಮಾ ಬಾನು
ಡಾ.ಅಸಿಮಾ ಬಾನು

ಬೆಂಗಳೂರು: ಚಿಪ್ಸ್ ನಿಂದ ದೋಸೆವರೆಗೆ, ಆಟಿಕೆಗಳಿಂದ ಗೇಮ್ ಗಳ ವರೆಗೆ,  ರೇಜರ್‌ ಗಳಿಂದ ನೈಲ್ ಕಟರ್ ವರೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ರೋಗಿಗಳು ಏನು ಬೇಕೆಂದರೆ ಅದನ್ನು ಪಡೆಯುತ್ತಾರೆ. ಏಕೆಂದರೆ ಅದೆಲ್ಲಾ ಆ "ದೇವತೆ"ಯ ಕೃಪೆ.  ಆದರೆ ಆ ಅದೃಶ್ಯ ದೇವತೆ ಆಯಾರೆಂದು ಯಾವೊಬ್ಬ ರೋಗಿಯೂ ತಿಳಿದಿಲ್ಲ. ಅವರು ವಿಕ್ಟೋರಿಯಾ ಆಸ್ಪತ್ರೆಯ ಆಘಾತ ಮತ್ತು ತುರ್ತು ಆರೈಕೆ ಕೇಂದ್ರದ ನೋಡಲ್ ಅಧಿಕಾರಿ ಡಾ.ಅಸಿಮಾ ಬಾನು. ಸಧ್ಯ ಬಾನು ಅವರು ಕೋವಿಡ್ 19 ಸೋಂಕು ನಿವಾರಣಾ ತಂಡದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ.

ಇಡೀ ಬ್ಲಾಕ್‌ನ ಉಸ್ತುವಾರಿ ವಹಿಸಿರುವ ಡಾ.ಅಸಿಮಾ ಅವರಿಗೆ  ರೋಗಿಗಳ ಎಲ್ಲಾ ಅಗತ್ಯತೆಗಳನ್ನು ಪೂರೈಸುವುದು ಸುಲಭವಲ್ಲ. ಆದರೂ, ಆಕೆ ನಗುಮೊಗದೊಡನೆ ಕೆಲಸ ಮಾಡುತ್ತಾಳೆ. . “ಇದು ನನಗೆ ತುಂಬಾ ಹೊಸದು ಮತ್ತು ಸವಾಲಿನ ಕೆಲಸವಾಗಿದೆನಾನು ಚಿಕಿತ್ಸೆ ಕುರಿತು ತಲೆಕೆಡಿಸಿಕೊಳ್ಳುವುದು ಮಾತ್ರವಲ್ಲದೆ ರೋಗಿಗಳು ಏನು ಬಯಸುತ್ತಾರೆ ಎಂಬುದರ ಬಗ್ಗೆಯೂ ಗಮನಹರಿಸಬೇಕು. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಅವರಿಲ್ಲಿಯೇ ಇರುವುದರಿಂದ ನಾವು ಅವರನ್ನು ಸಂತೋಷವಾಗಿರಿಸಿಕೊಳ್ಳಬೇಕು.”ಎಂದು ಅವರು ಹೇಳಿದರು. ರೋಗಿಗಳು ಪರೀಕ್ಷೆಗೆ ಬಂದಾಗ ಅವರು ಕೇವಲ ಫೋನ್‌ ಮಾತ್ರವೇ ತಂದಿರುತ್ತಾರೆ. ಅವರಿಗೆ ದಿನನಿತ್ಯ ಅಗತ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ನಾವು ಪೂರೈಸಬೇಕು-ಡಾ.ಅಸಿಮಾ ಹೇಳಿದರು.

"ಒಂದೊಮ್ಮೆ ಪರೀಕ್ಷಿಸಲು ಬಂದ ರೋಗಿಗಳಿಗೆ ರೀಓಗಲಕ್ಷಣವಿದ್ದರೆ ಆ ಪರೀಕ್ಷಾ ವರದಿ ಬರುವವರೆಗೆ ಅವರನ್ನು ಕ್ವಾರಂಟೈನ್ ನಲ್ಲಿರಿಸಬೇಕು. ಹಾಗೊಮ್ಮೆ ಅವರಿಗೆ ಪಾಸಿಟಿವ್ ಎಂದು ವರದಿ ಬಂದರೆ  ಅವರನ್ನು ನೇರವಾಗಿ ಗೊತ್ತುಪಡಿಸಿದ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅವರೊಮ್ಮೆ ಅಲ್ಲಿಗೆ ತಲುಪಿದಾಗ  ಸ್ವಾಭಾವಿಕವಾಗಿ, ಅವರು ಬಟ್ಟೆ ಅಥವಾ ಇತರ ಅಗತ್ಯ ವಸ್ತುಗಳನ್ನು ತರುವುದಿಲ್ಲ. ಮತ್ತು ಒಮ್ಮೆ ಅವರು ಕೊರೋನಾ ಪಾಸಿಟಿವ್ ಎಂದು ದೃಢವಾಗಿದ್ದರೆ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಾಂಪರ್ಕಿತರನ್ನು  ಕಂಡುಹಿಡಿಯಲಾಗುತ್ತದೆ ಮತ್ತು ಅವರನ್ನು ಪ್ರತ್ಯೇಕಿಸಲಾಗುತ್ತದೆ. ಆದ್ದರಿಂದ ಆಸ್ಪತ್ರೆಯಲ್ಲಿ ತಮ್ಮ ದೈನಂದಿನ ಬಳಕೆಗೆ ಅಗತ್ಯವಾದ ವಸ್ತುಗಳನ್ನು ಪಡೆಯಲು ರೋಗಿಗೆ ಯಾವುದೇ ಮಾರ್ಗ ಇರುವುದಿಲ್ಲ.ಆಗ ಅವರು ನಿತ್ಯಬಳಕೆ ವಸ್ತುಗಳಿಗಾಗಿ ನಮ್ಮನ್ನು ಕೇಳುತ್ತಾರೆ.ಅದನ್ನು ನಾವು ಒದಗಿಸಬೇಕು

"ಕೆಲವು ರೋಗಿಗಳು ಆಸ್ಪತ್ರೆಯ ಉಡುಪು ಧರಿಸಲು ಇಷ್ಟಪಡುವುದಿ;ಲ್ಲ ತಮ್ಮದೇ ಆದ ಬಟ್ಟೆಗಳನ್ನು ಬಯಸುತ್ತಾರೆ. ಆದ್ದರಿಂದ ಅಂತಹ ಸಂದರ್ಭಗಳಲ್ಲಿ, ನಾನು ನನ್ನ ಕುಟುಂಬವನ್ನು ಕರೆದು ಸಂಪೂರ್ಣವಾಗಿ ಸ್ವಚ್ಚ ಮಾಡಿದ್ದ ವ ಕೆಲವು ಬಟ್ಟೆಗಳನ್ನು ಕಳುಹಿಸಲು ಹೇಳುತ್ತೇನೆ ಅವುಗಳಲ್ಲಿ ಕೆಲವು ಬಳಕೆಯಾಗಿದೆ. ನಾನು ಅದನ್ನು ರೋಗಿಗಳಿಗೆ ನೀಡುತ್ತೇನೆ. ಕೆಲವರಿಗೆ ಚಪ್ಪಲಿಗಳೂ ಬೇಕಾಗುತ್ತದೆ. ನಾನು ಅವರ ಚಪ್ಪಲಿಯ ಅಳತೆ ಪರಿಶೀಲಿಸಿ ಕುಟುಂಬಕ್ಕೆ ಸಂದೇಶವನ್ನು ರವಾನಿಸಿ ಅಲ್ಲಿಂದ ಅಗತ್ಯ ಗಾತ್ರದ ಚಪ್ಪಲಿ ತರಿಸಿಕೊಳ್ಳುತ್ತೇನೆ.

"ಇದುವರೆಗೆ ಕೋವಿಡ್ ಪಾಸಿಟಿವ್ ಇರುವ ಐವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಅವರು ಆಟವಾಡಲು ಆಟಿಕೆ, ಗೇಮಿಂಗ್ ಸಲಕರಣೆ ಕೇಳುತ್ತಾರೆ.  ಕೇಕ್ ಮತ್ತು ಚಾಕೊಲೇಟ್‌ಗ ಬೇಕೆಂದು ಹಠ ಮಾಡುತ್ತಾರೆ.ಅಂತಹಾ ವೇಳೆ ಅವುಗಳನ್ನು ಸ್ವಿಗ್ಗಿ ಮೂಲಕ ಅವರಿಗೆ ತಲುಪಿಸುತ್ತೇನೆ" ವೈದ್ಯೆ ಬಾನು ಹೇಳೀದ್ದಾರೆ. “ನಾನು ಅವರಿಗಾಗಿ ಖರ್ಚು ಮಾಡಿದರೂ ಪರವಾಗಿಲ್ಲ. ಅವರು ಸಂತೋಷವಾಗಿರಬೇಕು, "

ಡಾ. ಅಸಿಮಾ ಎಂದಿಗೂ ರೋಗಿಗಳ ಮುಂದೆ ಹೋಗಿಲ್ಲ ಏಕೆಂದರೆ ಅಲ್ಲಿ ಹೆಚ್ಚು ದಾದಿಯರು, ವೈದ್ಯರು ಇರುತ್ತಾರೆ. ಅವರು ರೋಗಿಗಳೊಂದಿಗೆ ವಾಟ್ಸಾಪ್ ಗುಂಪನ್ನು ರಚಿಸಿದ್ದಾರೆ ಮತ್ತು ಅವರು ಏನು ಬೇಕಾದರೂ ಅವರಿಗೆ ಸಂದೇಶ ಕಳುಹಿಸುತ್ತಾರೆ. "ಅವರು ನನ್ನನ್ನು ನೋಡಿಲ್ಲ, ಅವರಿಗೆ ತಿಳಿದಿರುವುದು ಡಾ. ಅಸಿಮಾ ಅವರಿಗೆ ಬೇಕಾದುದನ್ನು ನೀಡುತ್ತಾರೆ ಎಂದಷ್ಟೇ ಆಗಿದೆ" ಅವರು ಹೇಳೀದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com