ಬಾಲಗಂಗಾಧರ ತಿಲಕರ ಚಿತ್ರ
ಬಾಲಗಂಗಾಧರ ತಿಲಕರ ಚಿತ್ರ

ಲೋಕಮಾನ್ಯ ತಿಲಕರ 100ನೇ ಪುಣ್ಯತಿಥಿ: ಬಾಲ ಗಂಗಾಧರರ ಬಾಲ್ಯ, ರಾಜಕೀಯ ಜೀವನ, ಹೋರಾಟ...

ಬಾಲ ಗಂಗಾಧರ ತಿಲಕ್, ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಭಾರತೀಯ ಸಮಾಜ ಸುಧಾರಕ, ಸ್ವಾತಂತ್ರ್ಯ ಚಳವಳಿಕಾರ ಎಂದೇ ಜನಪ್ರಿಯ. ಜನರಿಂದ ಸಾಮೂಹಿಕವಾಗಿ ನಾಯಕ ಎಂದು ಘೋಷಿಸಲ್ಪಟ್ಟಿದ್ದರಿಂದ ಇವರಿಗೆ ಲೋಕಮಾನ್ಯ ಎಂಬ ಬಿರುದು ಹೆಸರಿನ ಮುಂದೆ ಸಿಕ್ಕಿತು.

ಬಾಲ ಗಂಗಾಧರ ತಿಲಕ್, ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಭಾರತೀಯ ಸಮಾಜ ಸುಧಾರಕ, ಸ್ವಾತಂತ್ರ್ಯ ಚಳವಳಿಕಾರ ಎಂದೇ ಜನಪ್ರಿಯ. ಜನರಿಂದ ಸಾಮೂಹಿಕವಾಗಿ ನಾಯಕ ಎಂದು ಘೋಷಿಸಲ್ಪಟ್ಟಿದ್ದರಿಂದ ಇವರಿಗೆ ಲೋಕಮಾನ್ಯ ಎಂಬ ಬಿರುದು ಹೆಸರಿನ ಮುಂದೆ ಸಿಕ್ಕಿತು.

ಇಂದು ಆಗಸ್ಟ್ 1, ಲೋಕಮಾನ್ಯ ಬಾಲಗಂಗಾಧರ ತಿಲಕರ 100ನೇ ಪುಣ್ಯತಿಥಿ. ತಿಲಕರು ತಮ್ಮ ಜೀವನದಲ್ಲಿ ಶಿಕ್ಷಕರಾಗಿ, ವಕೀಲರಾಗಿ, ಪತ್ರಕರ್ತರಾಗಿ, ತಜ್ಞರಾಗಿ, ಗಣಿತಜ್ಞರಾಗಿ, ತತ್ವಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬ್ರಿಟಿಷರ ಗುಲಾಮಗಿರಿ ಆಡಳಿತದಿಂದ ಹೊರಬಂದು ಭಾರತೀಯರು ಸ್ವತಂತ್ರರಾಗಬೇಕೆಂದು ಕನಸು ಕಂಡ ಧೀಮಂತ ವ್ಯಕ್ತಿತ್ವ ತಿಲಕರದ್ದು.ಮನಸ್ಸಿಗೆ ಯೋಚನೆ ಬಂದಿದ್ದೇ ತಡ ಅದನ್ನು ಕಾರ್ಯರೂಪಕ್ಕೆ ತಂದು ಭಾರತದ ಸ್ವಾತಂತ್ರ್ಯ ಚಳವಳಿಗೆ ಅಡಿಪಾಯ ಹಾಕಿದರು.

ತಿಲಕರ ಬಾಲ್ಯ ಜೀವನ: ಬಾಲಗಂಗಾಧರ ತಿಲಕರು ಹುಟ್ಟಿದ್ದು 1856ರ ಜುಲೈ 22ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ. ಇವರ ತಂದೆ ಕೇಶವ ಗಂಗಾಧರ ತಿಲಕರು ಸಂಸ್ಕೃತ ವಿದ್ವಾಂಸರು. ಬಾಲಗಂಗಾಧರ ತಿಲಕರು ತಮ್ಮ ಸಾರ್ವಜನಿಕ, ರಾಜಕೀಯ ಜೀವನ ಆರಂಭಿಸಿದ್ದು ಸಮಾಜ ಸುಧಾರಕರಾಗಿ ಮತ್ತು ಸ್ವಾತಂತ್ರ್ಯ ಚಳವಳಿಕಾರರಾಗಿ. ಸ್ವರಾಜ್ಯ, ಸ್ವ ಆಡಳಿತ ಕಾನೂನನ್ನು ಪ್ರಚುರಪಡಿಸಿದರು. ಭಾರತದ ಸ್ವಾತಂತ್ರ್ಯ ಚಳವಳಿಯ ಕಿಚ್ಚನ್ನು ಹೆಚ್ಚಿಸುವ ಕೇಸರಿ ಎಂಬ ಮರಾಠಿ ಪತ್ರಿಕೆ ಹಾಗೂ ಮರಾಠಾ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಸ್ವರಾಜ್ಯ ನನ್ನ ಅಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ ಎಂಬ ಘೋಷವಾಕ್ಯ ಲಕ್ಷಾಂತರ ಯುವಕರ ಜೀವನದಲ್ಲಿ ಉತ್ಸಾಹ ತುಂಬಿಸಿತ್ತು.

ರಾಜಕೀಯ ವೃತ್ತಿ: ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮಾ ಗಾಂಧಿಯವರಿಗಿಂತ ಮುನ್ನ ಮುನ್ನುಡಿ ಹಾಕಿದ ತಿಲಕರು ಕ್ರಾಂತಿಕಾರಿ ರಾಷ್ಟ್ರವಾದಿ ಜೊತೆಗೆ ಸಾಮಾಜಿಕವಾಗಿ ಸಂಪ್ರದಾಯವಾದಿ. ತಮ್ಮ ಸ್ವಾತಂತ್ರ್ಯ ಹೋರಾಟ ಜೀವನದಲ್ಲಿ ಹಲವು ಬಾರಿ ಕಾರಾಗೃಹ ವಾಸ ಅನುಭವಿಸಿದ್ದರು.

ಸಮಾಜ ಸುಧಾರಕನಾಗಿ: 1891ರ ಒಪ್ಪಿಗೆ ಮಸೂದೆ(ಕನ್ಸೆಂಟ್ ಬಿಲ್)ನ್ನು ವಿರೋಧಿಸಿದರು ತಿಲಕರು. ಹಿಂದೂ ಧರ್ಮಕ್ಕೆ ವಿರುದ್ಧವಾದದ್ದು ಅಪಾಯಕಾರಿ ಎಂಬುದು ಅವರ ವಾದ. ಹಿಂದೂ ಧರ್ಮದ ಹೆಣ್ಣುಮಕ್ಕಳು 10ರಿಂದ 12ನೇ ವರ್ಷದಲ್ಲಿ ಮದುವೆಯಾಗಬಹುದು ಎಂಬ ನಿಯಮವನ್ನು ತಿಲಕರು ವಿರೋಧಿಸಿದ್ದರು.

ತಿಲಕರು ಸ್ವದೇಶಿ ಚಳವಳಿ ಮತ್ತು ಬಹಿಷ್ಕಾರ ಚಳವಳಿಗೆ ಪ್ರೋತ್ಸಾಹ ನೀಡಿದ್ದರು. ವಿದೇಶಿ ವಸ್ತುಗಳ ಬಳಕೆ ಮಾಡುವುದಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದ್ದರು. ಇಂದು ಕೋವಿಡ್-19 ಬಂದ ಮೇಲೆ ಸ್ವದೇಶಿ ವಸ್ತು ಹೆಚ್ಚೆಚ್ಚು ಬಳಕೆ ಮಾಡಿ, ಆತ್ಮ ನಿರ್ಭರ್ ಭಾರತಕ್ಕೆ ಒತ್ತು ನೀಡಬೇಕೆಂದು ಕೇಂದ್ರ ಸರ್ಕಾರ ಪ್ರಧಾನಿ ಮೋದಿಯವರು ಒತ್ತು ನೀಡುತ್ತಿರುವುದನ್ನು ತಿಲಕರು 100-120 ವರ್ಷಗಳ ಹಿಂದೆಯೇ ಹೇಳಿದ್ದರು. ಸ್ವದೇಶಿ ವಸ್ತುಗಳ ಬಳಕೆ ಮತ್ತು ಚಳವಳಿಗಳ ಬಹಿಷ್ಕಾರ ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಿದ್ದರು.

Related Stories

No stories found.

Advertisement

X
Kannada Prabha
www.kannadaprabha.com