ದಕ್ಷಿಣ ಭಾರತದ 'ರಸಂ' ಅಮೆರಿಕದಲ್ಲಿ ಜನಪ್ರಿಯ: ತಮಿಳು ನಾಡಿನ ಈ ಬಾಣಸಿಗನ ಕೈರುಚಿಗೆ ಸೋತ ಅಮೆರಿಕನ್ನರು!

ಕೋವಿಡ್-19 ನಿಗ್ರಹಿಸಲು ಇಡೀ ವಿಶ್ವವೇ ದೊಡ್ಡಣ್ಣ ಅಮೆರಿಕದತ್ತ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಒಂದು ಕಣ್ಣಿಟ್ಟಿದ್ದರೆ ನ್ಯೂಯಾರ್ಕ್, ನ್ಯೂಜೆರ್ಸಿ, ಪ್ರಿನ್ಸೆಟೊನ್ ನ ರಾಜ್ಯಗಳ ಅಮೆರಿಕ ಜನತೆಗೆ ದಕ್ಷಿಣ ಭಾರತೀಯರೊಬ್ಬರು ರಸಂ ಮಾಡಿಕೊಡುವ ಮೂಲಕ ಕೊರೋನಾ ಸೋಂಕು ನಿವಾರಣೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದರೆ ತಪ್ಪಾಗಲಾರದು.
ಅರುಣ್ ರಾಜದೊರೈ
ಅರುಣ್ ರಾಜದೊರೈ

ಅರಿಯಲೂರು: ಕೋವಿಡ್-19 ನಿಗ್ರಹಿಸಲು ಇಡೀ ವಿಶ್ವವೇ ದೊಡ್ಡಣ್ಣ ಅಮೆರಿಕದತ್ತ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಒಂದು ಕಣ್ಣಿಟ್ಟಿದ್ದರೆ ನ್ಯೂಯಾರ್ಕ್, ನ್ಯೂಜೆರ್ಸಿ, ಪ್ರಿನ್ಸೆಟೊನ್ ನ ರಾಜ್ಯಗಳ ಅಮೆರಿಕ ಜನತೆಗೆ ದಕ್ಷಿಣ ಭಾರತೀಯರೊಬ್ಬರು ರಸಂ ಮಾಡಿಕೊಡುವ ಮೂಲಕ ಕೊರೋನಾ ಸೋಂಕು ನಿವಾರಣೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ದಕ್ಷಿಣ ಭಾರತೀಯರು ರಸಂ ಮಾಡುವುದರಲ್ಲಿ ನಿಸ್ಸೀಮರು, ಅದರಲ್ಲೂ ಕರ್ನಾಟಕದ, ತಮಿಳು ನಾಡಿನ ರಸಂ ಅಂದರೆ ಬಾಯಲ್ಲಿ ನೀರು ಬರತ್ತೆ, ಅಮೆರಿಕದಲ್ಲಿ ತಮಿಳು ನಾಡಿನ ಶೆಫ್ ರಸಂ ಮಾಡುತ್ತಿದ್ದಾರೆ.

ಅಮೆರಿಕದಲ್ಲಿ ಕಳೆದ ಬಾರಿ ಲಾಕ್ ಡೌನ್ ಮಧ್ಯೆ 35 ವರ್ಷದ ಅರುಣ್ ರಾಜದೊರೈಯವರಿಗೆ ಈ ಐಡಿಯಾ ತಲೆಯಲ್ಲಿ ಹೊಳೆಯಿತಂತೆ. ರಸಂ ಮಾಡಲು ಸಾಮಾನ್ಯವಾಗಿ ನಾವೆಲ್ಲಾ ಅರಶಿನ, ಶುಂಠಿ, ಬೆಳ್ಳುಳ್ಳಿ ಬಳಸುತ್ತೇವೆ. ಇವು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ. ಕೋವಿಡ್-19 ತಡೆಗೆ ಇವೆಲ್ಲವೂ ರಾಮಬಾಣ.

ಅರುಣ್ ಮೂರು ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಊಟ-ತಿಂಡಿ ನೀಡುತ್ತಿದ್ದರು. ಈ ಸಮಯದಲ್ಲಿ ಈ ವಸ್ತುಗಳನ್ನು ಹಾಕಿ ಪದಾರ್ಥ ಮಾಡಿ ರೋಗಿಗಳಿಗೆ ನೀಡೋಣ ಎಂದು ಅವರಿಗೆ ಅನಿಸಿತು. ರಸಂ ಮಾಡಿಯೇ ಬಿಟ್ಟರು, ರೋಗಿಗಳಿಗೆ ಅದನ್ನು ಉಂಡು ಖುಷಿಯಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.ಅರುಣ್ ಅವರ ರಸಂ ಜನಪ್ರಿಯವಾಯಿತು. ಅವರು ಕೆಲಸ ಮಾಡುವ ಹೊಟೇಲ್ ಗೂ ಹೆಸರು ಬಂತು. 

ಅರುಣ್ ಅವರು ಕೆಲಸ ಮಾಡುವ ಹೊಟೇಲ್ ನ ಶಾಖೆಗಳು ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕೆನಡಾಗಳಲ್ಲಿದ್ದು, ಅಲ್ಲಿನ ರೆಸ್ಟೋರೆಂಟ್ ಗಳಲ್ಲಿ ರಸಂನ್ನು ಮಾಡಲಾಗುತ್ತಿದೆಯಂತೆ. ಪ್ರತಿದಿನ 500ರಿಂದ 600 ಕಪ್ ರಸಂ ಮಾರಾಟವಾಗುತ್ತಿದೆಯಂತೆ. 

ನಾನು ರಸಂ ಮಾಡುವಾಗ ಮನೆಯಲ್ಲಿ ಪ್ರಯೋಗ ಮಾಡಿ ನೋಡುತ್ತಿದ್ದೆ. ಇದು ಇಷ್ಟು ಜನಪ್ರಿಯ, ಬೇಡಿಕೆ ಬರಬಹುದು ಎಂದು ನಾವು ಯೋಚಿಸಿರಲಿಲ್ಲ ಎನ್ನುತ್ತಾರೆ ತಮಿಳು ನಾಡಿನ ಜಯಂಕೊಂಡಂ ಹತ್ತಿರದ ಮೀನ್ಸುರುಟ್ಟಿಯ ಅರುಣ್. ಇವರು 5 ವರ್ಷಗಳ ಹಿಂದೆ ಅಮೆರಿಕದ ನ್ಯೂಜೆರ್ಸಿಗೆ ಹೋಗಿದ್ದರು. ತಿರುಚಿಯ ಐಹೆಚ್ ಎಂನಲ್ಲಿ ಕ್ಯಾಟರಿಂಗ್ ಓದಿದ್ದರು. 

ಅರುಣ್ 2018ರಲ್ಲಿ ಉತ್ತಮ ಆಗ್ನೇಯ ಏಷ್ಯಾದ ಬಾಣಸಿಗ ಪ್ರಶಸ್ತಿಗೆ ಪಾತ್ರವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com