ಭದ್ರಾಸನದ ಮೂಲಕ 15 ದೀಪಗಳ ಮೈಮೇಲೆ ಇಟ್ಟು ಸಮತೋಲನ ಮಾಡಿದ 6 ವರ್ಷದ ಬಾಲಕ!

ಭದ್ರಾಸನದ ಮೂಲಕ 15 ದೀಪಗಳನ್ನು ಮೈಮೇಲೆ ಇಟ್ಟುಕೊಂಡು ಸಮತೋಲನ ಮಾಡುವ ಮೂಲಕ 6 ವರ್ಷದ ಬಾಲಕನೋರ್ವ ಸುದ್ದಿಗೆ ಗ್ರಾಸವಾಗಿದ್ದಾನೆ.
ದೀಪಗಳನ್ನಿಟ್ಟುಕೊಂಡು ಸಮತೋಲನ ಮಾಡಿದ ಬಾಲಕ
ದೀಪಗಳನ್ನಿಟ್ಟುಕೊಂಡು ಸಮತೋಲನ ಮಾಡಿದ ಬಾಲಕ

ತಿರುವಣ್ಣಾಮಲೈ: ಭದ್ರಾಸನದ ಮೂಲಕ 15 ದೀಪಗಳನ್ನು ಮೈಮೇಲೆ ಇಟ್ಟುಕೊಂಡು ಸಮತೋಲನ ಮಾಡುವ ಮೂಲಕ 6 ವರ್ಷದ ಬಾಲಕನೋರ್ವ ಸುದ್ದಿಗೆ ಗ್ರಾಸವಾಗಿದ್ದಾನೆ.

ಹೌದು ತಮಿಳುನಾಡಿನ ತಿರುವಣ್ಣಾ ಮಲೈನ 6 ವರ್ಷದ ಪುಟ್ಟ ಬಾಲಕನ ಯೋಗ ಜ್ಞಾನಕ್ಕೆ ನೆರೆದಿದ್ದವರು ಮಾರುಹೋಗಿದ್ದಾರೆ. ಇಲ್ಲಿನ ಬಾಬಾಜಿ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ವರ್ಷದ ದೇವೇಶ್ ತನ್ನ ಹುಟ್ಟು ಹಬ್ಬದ ದಿನದಂದೇ ತನ್ನ ಯೋಗ ಕಲೆಯನ್ನು ಪ್ರದರ್ಶಿಸಿದ್ದಾರೆ.  ಭದ್ರಾಸನ ಭಂಗಿಯಲ್ಲಿ ಕುಳಿತು ತನ್ನ ಭುಜಗಳು, ತೊಡೆ ಮತ್ತು ಕಾಲು, ಕೈಗಳ ಮೇಲೆ 15 ದೀಪಗಳನ್ನು ಹಚ್ಚಿಕೊಂಡು ಅವು ಬೀಳದಂತೆ ಸಮತೋಲನ ಮಾಡಿದ್ದಾರೆ, 

ಈ ಬಗ್ಗೆ ಮಾತನಾಡಿರುವ ಬಾಲಕ ದೇವೇಶ್, ಸುಡುವ ದೀಪಗಳ ಬೆಂಕಿಯ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ ಮತ್ತು ದೀಪದ ಶಾಖವು ನನ್ನ ಏಕಾಗ್ರತೆಗೆ ತೊಡಕಾಗಲಿಲ್ಲ. ನಾನು ಯೋಗವನ್ನು ತುಂಬಾ ಇಷ್ಟ ಪಡುತ್ತೇನೆ, ಹೀಗಾಗಿ ನಾನು ಕಳೆದ 2 ವರ್ಷಗಳಿಂದಲೂ ಯೋಗಾಭ್ಯಾಸ  ಮಾಡುತ್ತಿದ್ದೇನೆ. ಈಗ ನಾನು ಭದ್ರಾಸನ ಹಾಕಿ ದೀಪಗಳನ್ನು ಮೈ ಮೇಲೆ ಇಟ್ಟು ಸಮತೋಲನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಪುತ್ರನ ಸಾಧನೆ ಕುರಿತು ಹೆಮ್ಮೆಯಿಂದ ಮಾತನಾಡಿರುವ ತಂದೆ ಅಯ್ಯಪ್ಪ ಅವರು, ತುಂಬಾ ಚೆನ್ನಾಗೆ ದೇವೇಶ್ ದೀಪಗಳನ್ನು ಬ್ಯಾಲೆನ್ಸ್ ಮಾಡಿದ. ಮಗನ ಸಾಧನೆಗೆ ಆತನ ಯೋಗ ಗುರುಗಳಾದ ಕಲ್ಪನಾ ಅವರು ಕಾರಣ. ಕೊರೋನಾ ಸಂದರ್ಭದಲ್ಲಿ ನನ್ನ ಪುತ್ರನಿಗಾಗಿ ಪ್ರತ್ಯೇಕ  ಯೋಗ ತರಗತಿಗಳನ್ನು ಆಯೋಜಿಸಿ ಯೋಗ ಶಿಕ್ಷಣ ನೀಡಿದರು. ಕಲ್ಪನಾ ಅವರೂ ಕೂಡ ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com