ಗದಗ: ಭರವಸೆಯ ಬೆಳಕು ಈ ಅಂಬ್ಯುಲೆನ್ಸ್ ಡ್ರೈವರ್!

ಆಂಬ್ಯುಲೆನ್ಸ್ ಚಾಲಕರೊಬ್ಬರು ಕಳೆದ ಆರು ತಿಂಗಳಲ್ಲಿ ಒಂದು ದಿನ ಕೂಡಾ ರಜೆ ತೆಗೆದುಕೊಳ್ಳದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕಾರಣ ಅವರು ನಗರದಾದ್ಯಂತ ಪ್ರಸಿದ್ಧಿಯಾಗಿದ್ದಾರೆ.
ಅಂಬ್ಯುಲೆನ್ಸ್
ಅಂಬ್ಯುಲೆನ್ಸ್

ಗದಗ: ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರೊಬ್ಬರು ಕಳೆದ ಆರು ತಿಂಗಳಲ್ಲಿ ಒಂದು ದಿನ ಕೂಡಾ ರಜೆ ತೆಗೆದುಕೊಳ್ಳದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕಾರಣ ಅವರು ನಗರದಾದ್ಯಂತ ಪ್ರಸಿದ್ಧಿಯಾಗಿದ್ದಾರೆ. ಅದಕ್ಕಿಂತ ಮುಖ್ಯವಾಗಿ, ರೋಣ ಪಟ್ಟಣದ ಆಂಬ್ಯುಲೆನ್ಸ್ ಚಾಲಕ ವೀರಯ್ಯ ಪುತ್ರಯ್ಯ ಹಿರೇಮಠ್, 250 ಕ್ಕೂ ಹೆಚ್ಚು ಕೋವಿಡ್ -19 ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಅವರೊಬ್ಬ ಸಾಮಾನ್ಯ ಚಾಲಕರಾಗಿದ್ದು, ಕೋವಿಡ್-19ಗೆ ಹೆದರಬೇಡಿ, ಸೂಕ್ತ ಚಿಕಿತ್ಸೆದಿಂದ ಗುಣಮುಖರಾಗುತ್ತಿರಾ ಎಂದು ಹೇಳುವ ಮೂಲಕ ರೋಗಿಗಳಲ್ಲಿ  ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಅವರ ಸ್ಪೂರ್ತಿದಾಯಕ ಮಾತುಗಳಿಂದ ಹಲವು ಮಂದಿ ಗುಣಮುಖರಾಗಿ ವಾಪಸ್ ಮನೆಗೆ ತೆರಳುತ್ತಿದ್ದಾರೆ.

ವೀರಯ್ಯ ಪುತ್ರಯ್ಯ ಹಿರೇಮಠ್
ವೀರಯ್ಯ ಪುತ್ರಯ್ಯ ಹಿರೇಮಠ್

ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ವೀರಯ್ಯ ಕಳೆದ ಎಂಟು ವರ್ಷಗಳಿಂದ ಅಂಬ್ಯುಲೆನ್ಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್-19 ಉಲ್ಬಣದ ನಂತರ ಆ ಕೆಲಸ ಬಿಟ್ಟು ಬೇರೆ ಕೆಲಸ ನೋಡಿಕೊಳ್ಳುವಂತೆ ಅವರ ಸ್ನೇಹಿತರು, ಕುಟುಂಬ ಸದಸ್ಯರು ಸಲಹೆ ನೀಡಿದ್ದಾರೆ. ಆದರೆ, ವೀರಯ್ಯ ಅದನ್ನು ನಿರಾಕರಿಸಿ, ತನ್ನ ಕೆಲಸವನ್ನು ಮುಂದುವರೆಸಿದ್ದಾರೆ. ನಿರಂತರವಾಗಿ ಕೋವಿಡ್- ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದು, ಅವರ ವಿವಾಹ ವಾರ್ಷಿಕೋತ್ಸವ ಮತ್ತಿತರ ಕುಟುಂಬದ ಸಮಾರಂಭಗಳನ್ನು ರದ್ದುಪಡಿಸಿ ಕೆಲಸ ಮಾಡುತ್ತಿದ್ದಾರೆ.

ವೀರಯ್ಯ ನಮ್ಮೊಂದಿಗಿರುವುದು ಅದೃಷ್ಟ. ಅವರ ಮಾತುಗಳಿಂದಲೇ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಅವರು ಇತರರಿಗೆ ರೋಲ್ ಮಾಡಲ್ ಆಗಿದ್ದಾರೆ. ಎಲ್ಲಾ ವೇಳೆಯಲ್ಲೂ ಕೆಲಸ ಮಾಡಲು ಸಿದ್ಧರಿದ್ದು, ಒಂದೇ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ರೋಣ ತಾಲೂಕ್ 108 ಅಂಬ್ಯುಲೆನ್ಸ್ ಪ್ರಾದೇಶಿಕ ಅಧಿಕಾರಿ ಮೊಹಮ್ಮದ್ ಶಫಿ ಹೇಳುತ್ತಾರೆ.

ಇಂತಹ ಸಂದರ್ಭದಲ್ಲಿ ನನ್ನ ಸೇವೆ ಅಗತ್ಯವಿರುವ ಕಾರಣ ವಿಶ್ರಾಂತಿ ಪಡೆಯಲು ಬಯಸುವುದಿಲ್ಲ. ತಾಲ್ಲೂಕು ಆಡಳಿತವು ನನ್ನನ್ನು ಅತ್ಯುತ್ತಮ ಕೋವಿಡ್ ಯೋಧ ಎಂದು ಸನ್ಮಾನಿಸಿತು, ಇದು ನನ್ನ ಕರ್ತವ್ಯ. ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ವೀರಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com