ರ‍್ಯಾಗಿಂಗ್‌ಗೆ ಹೆದರಿ ಎಂಜಿನಿಯರಿಂಗ್ ಕೋರ್ಸ್ ಅರ್ಧಕ್ಕೇ ಕೈಬಿಟ್ಟ ರಂಜಿತ್ ಗೆ ಜಾಗತಿಕ ಶಿಕ್ಷಕ ಪ್ರಶಸ್ತಿ!

ಬೆದರಿಕೆ ಹಾಗೂ ರ‍್ಯಾಗಿಂಗ್‌ನಿಂದಾಗಿ ರಂಜಿತ್‌ಸಿಂಹ ದಿಸಾಳೆ ತನ್ನ ಎಂಜಿನಿಯರಿಂಗ್ ಕೋರ್ಸ್ ಅನ್ನು ಮಧ್ಯದಲ್ಲೇ ಬಿಟ್ಟುಕೊಟ್ಟರು. ಆದರೆ ಇದು ಅವರಲ್ಲಿದ್ದ ಶಿಕ್ಷಣ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮುರಿಯಲಿಲ್ಲ. ಬದಲಾಗಿ, ಅದನ್ನು ಉತ್ತಮಗೊಳಿಸಲು ಮತ್ತು ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರಲು ಅವರು ಶಿಕ್ಷಕರಾಗಲು ಸಾಧ್ಯವಾಗಿಸಿತು.

Published: 07th December 2020 10:43 PM  |   Last Updated: 07th December 2020 10:43 PM   |  A+A-


ರಂಜಿತ್ ದಿಸಾಳೆ

Posted By : Raghavendra Adiga
Source : PTI

ನವದೆಹಲಿ: ಬೆದರಿಕೆ ಹಾಗೂ ರ‍್ಯಾಗಿಂಗ್‌ನಿಂದಾಗಿ ರಂಜಿತ್‌ಸಿಂಹ ದಿಸಾಳೆ ತನ್ನ ಎಂಜಿನಿಯರಿಂಗ್ ಕೋರ್ಸ್ ಅನ್ನು ಮಧ್ಯದಲ್ಲೇ ಬಿಟ್ಟುಕೊಟ್ಟರು. ಆದರೆ ಇದು ಅವರಲ್ಲಿದ್ದ ಶಿಕ್ಷಣ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮುರಿಯಲಿಲ್ಲ. ಬದಲಾಗಿ, ಅದನ್ನು ಉತ್ತಮಗೊಳಿಸಲು ಮತ್ತು ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರಲು ಅವರು ಶಿಕ್ಷಕರಾಗಲು ಸಾಧ್ಯವಾಗಿಸಿತು.

ಬೋಧನಾ ಕ್ರಮದಲ್ಲಿ ಹೊಸ ಆಲೋಚನೆಗಳನ್ನು ಅಳವಡಿಸುವ , ಶಿಕ್ಷಕರ ಧ್ವನಿಯನ್ನು ಕೇಳುವ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಅವರ ದೃಢನಿಶ್ಚಯವು ಮಹಾರಾಷ್ಟ್ರದ 32 ವರ್ಷದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ಮಿಲಿಯನ್ ಯುಎಸ್ ಡಾಲರ್ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನು ಗೆಲ್ಲುವಂತೆ ಮಾಡಿದೆ.

"ನಾನು ಬೆದರಿಕೆಮತ್ತು ರ‍್ಯಾಗಿಂಗ್ ಅನ್ನು ಎದುರುಸಲಾಗದೆ ಎಂಜಿನಿಯರಿಂಗ್ ಅನ್ನು ಬಿಟ್ಟುಕೊಟ್ಟೆ.  ಆದರೆ ಅದಕ್ಕಾಗಿ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಬೋಧನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅಲ್ಲದೆ ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆಯನ್ನು ತರಬಲ್ಲ ಅದೃಷ್ಟಶಾಲಿಯಾಗಿದ್ದೇನೆ" ಎಂದು ವಿಶ್ವದಾದ್ಯಂತ 12,000 ಶಿಕ್ಷಕರನ್ನು ಹಿಂದಿಕ್ಕಿ ಪ್ರಶಸ್ತಿ ವಿಜೇತರಾದ ದಿಸಾಳೆ ಹೇಳಿದ್ದಾರೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ 2,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮವಾದ ಪರಿತೆವಾಡಿ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಭಾರತದಲ್ಲಿ ತ್ವರಿತ-ಪ್ರತಿಕ್ರಿಯೆ (ಕ್ಯೂಆರ್) ಕೋಡೆಡ್ ಪಠ್ಯಪುಸ್ತಕ ಕ್ರಾಂತಿಯನ್ನು ಪ್ರಚೋದಿಸುವ ಪ್ರಯತ್ನಗಳಿಗಾಗಿ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಬಹುಮಾನದ ಹಣದ ಶೇಕಡಾ 50 ರಷ್ಟು ಹಣವನ್ನು ಸಹವರ್ತಿ ಫೈನಲಿಸ್ಟ್‌ಗಳಲ್ಲಿ ಸಮಾನವಾಗಿ ಹಂಚಿಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ. "ಶಿಕ್ಷಕರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾನ್ಯತೆ ನೀಡಿದ ವರ್ಕಿ ಫೌಂಡೇಶನ್ ಮತ್ತು ಯುನೆಸ್ಕೋಗೆ ನಾನು ಆಭಾರಿಯಾಗಿದ್ದೇನೆ" ಬಹುಮಾನದ ಹಣದ ಹೊರತಾಗಿ, ಈ ಪ್ರಶಸ್ತಿಗೆ ಭಾರಿ ಪ್ರತಿಷ್ಠೆಯಿದೆ. ಅದನ್ನು ಪಡೆದ ಮೊದಲ ಭಾರತೀಯ ಎಂಬ ಹೆಮ್ಮೆ ನನಗಿದೆ" ದಿಸಾಳೆ ನುಡಿದರು.

ಪರಿತೆವಾಡಿಯನ್ನು ಅವರ ತ್ವರಿತ-ಪ್ರತಿಕ್ರಿಯೆ (ಕ್ಯೂಆರ್) -ಕೋಡೆಡ್ ಪಠ್ಯಪುಸ್ತಕ ಕ್ರಾಂತಿಯು ಇಡೀ ರಾಜ್ಯಕ್ಕೆ ಮತ್ತು ನಂತರ ಇಡೀ ದೇಶಕ್ಕೆ  ಜನಪ್ರಿಯವಾಗಿಸಿದೆ. "ನಾನು ಶಿಕ್ಷಕನಾಗಿದ್ದೇನೆ ಮತ್ತು ಈಗ ನನ್ನ ಇಡೀ ಜೀವನ ಇದಕ್ಕೆ ಮೀಸಲು, ನನ್ನ ಪ್ರಶಸ್ತಿಯನ್ನು ವಿಶ್ವಾದ್ಯಂತದ ಎಲ್ಲ ಶಿಕ್ಷಕರಿಗೆ ಅರ್ಪಿಸುತ್ತೇನೆ.  . ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಸರ್ಕಾರ, ಖಾಸಗಿ ಪಾಲುದಾರರು ಮತ್ತು ಶಿಕ್ಷಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ”

"ಒಳ್ಳೆಯ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಬೇಕು ಇದರಿಂದ ಅವರು ವಿಭಿನ್ನವಾದದ್ದನ್ನು ಮಾಡಲು ಪ್ರೇರಣೆ ಪಡೆಯುತ್ತಾರೆ. ರೆ. ಅವರ ಧ್ವನಿಯನ್ನು ಕೇಳಬೇಕು, ಗೌರವಿಸಬೇಕು ಮತ್ತು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ಹಲವು ಸವಾಲುಗಳಿವೆ ಮತ್ತು ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಿದರೆ ಇವುಗಳನ್ನು ಪರಿಹರಿಸಬಹುದು

"ಬಾಲಕಿಯರ ಶಿಕ್ಷಣವು ಒಂದು ಪ್ರಮುಖ ವಿಷಯವಾಗಿದೆ. ಡ್ರಾಪ್ ಔಟ್ ಎನ್ನುವುದು ಇನ್ನೊಂದು ಸಮಸ್ಯೆ. ಈ ವಲಯದಲ್ಲಿ ಹಲವು ಸವಾಲುಗಳಿವೆ. ಶಿಕ್ಷಕರಿಗೆ ಪರಿಹಾರಗಳು ಮತ್ತು ತಳಮಟ್ಟದ ಅನುಭವವಿದೆ. ನನ್ನ ವೈಯಕ್ತಿಕ ಅನುಭವದ ಆಧಾರದ ಮೇಲೆ ನಾನು ಇದನ್ನು ಹೇಳಬಲ್ಲೆ. ನನ್ನ ಆಲೋಚನೆಯನ್ನು ನಾನು ಸರ್ಕಾರದೊಂದಿಗೆ ಹಂಚಿಕೊಂಡಿದ್ದೇನೆ (ಕ್ಯೂಆರ್ ಕೋಡ್ ಕ್ರಾಂತಿ) ಮತ್ತು ಅವರು ಅದನ್ನು ಕಾರ್ಯಗತಗೊಳಿಸಿದರು ಮತ್ತು ಒಂದು ದೊಡ್ಡ ಬದಲಾವಣೆ ಇದರಿಂದ ಸಾಧ್ಯವಾಯಿತು.ಹೊಸ ಆಲೋಚನೆಗಳನ್ನು ಕೇಳಬಹುದಾದ ಅನೇಕರು ಇದ್ದಾರೆ.

"ನೀವು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದಾಗ, ನೀವು ಹಣವನ್ನು ಹೇಗೆ ಖರ್ಚು ಮಾಡುತ್ತೀರಿ ಎಂದು ನೀವು ನಮೂದಿಸಬೇಕು. ಆದ್ದರಿಂದ, ಇದು ಮೊದಲೇ ನಿರ್ಧರಿಸಿದ ವಿಷಯವಾಗಿತ್ತು, ಮತ್ತು ನಾನು ಈ ನಿರ್ಧಾರವನ್ನು ಸ್ವಯಂಪ್ರೇರಿತವಾಗಿ ಅಥವಾ ಭಾವನಾತ್ಮಕ ಹಿನ್ನೆಲೆಯಿಂದ ತೆಗೆದುಕೊಂಡದ್ದಲ್ಲ"ಬಹುಮಾನದ ಹಣವನ್ನು ಸ್ಪರ್ಧೆಯ ರನ್ನರ್ ಅಪ್ ಗಳ ಜೊತೆ ಹಂಚಿಕೊಳ್ಳುವ ಅವರ ನಿರ್ಧಾರದ ಬಗ್ಗೆ ಅವರು ಮಾತನಾಡಿದರು.

ಶಿಕ್ಷಕರು ಆದಾಯಕ್ಕಾಗಿ ಅಲ್ಲ, ಫಲಿತಾಂಶಕ್ಕಾಗಿ ಕೆಲಸ ಮಾಡುತ್ತಾರೆ ಮತ್ತು ಅಂತಹಾ ಶಿಕ್ಷಕರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಮತ್ತು ಅವರಿಗೆ ಪ್ರತಿಫಲವೂ ಸಿಗಬೇಕು ಎಂದರು. "ಅವರು ವಿಜೇತರೆಂದು ಭಾವಿಸಬೇಕು.ಅಷ್ಟೇ ಸಂತೋಷವಾಗಿರಬೇಕು ಎಂದು ನಾನು ಬಯಸುತ್ತೇನೆ" ದಿಸಾಳೆ ಹೇಳಿದರು.

ದಿಸಾಳೆ  ಅವರ ಪಾಲಿಗೆ ಪ್ರಶಸ್ತಿಗಾಗಿ ಇದು ಎರಡನೇ ಪ್ರಯತ್ನವಾಗಿದೆ. ಅಲ್ಲದೆ ಈ ಬಾರು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪ್ರಕ್ರಿಯೆಯು ವಿಳಂಬವಾಗಿತ್ತು. ಈ ಪ್ರಕ್ರಿಯೆಯಲ್ಲಿ ಸಂದರ್ಶನಗಳು, ಪಿಡಬ್ಲ್ಯೂಸಿ ಮತ್ತು ಇತರ ಏಜೆನ್ಸಿಗಳ ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ಸಹ ಸೇರಿದೆ.

"ನನ್ನ ಸಾಗರೋತ್ತರ ಸ್ನೇಹಿತರೊಬ್ಬರು ನನ್ನನ್ನು ನಾಮನಿರ್ದೇಶನ ಮಾಡಿದಾಗ ನನ್ನ ಮೊದಲ ಪ್ರಯತ್ನದಲ್ಲಿ ನನ್ನನ್ನು ತಿರಸ್ಕರಿಸಲಾಯಿತು. ನಂತರ ಅವರು ಮತ್ತೆ ಅರ್ಜಿ ಸಲ್ಲಿಸಲು ಹೇಳಿದರು. ಇದು ಸುದೀರ್ಘ ಪ್ರಕ್ರಿಯೆ ಮತ್ತು ಸಾಂಕ್ರಾಮಿಕ ರೋಗದಿಂದ ಸುಮಾರು ಒಂದು ವರ್ಷ ತೆಗೆದುಕೊಂಡಿತು. ನಾನು ಸಂದರ್ಶನಗಳ ಮೂಲಕ ನನ್ನ ಕೆಲಸವನ್ನು ತೋರಿಸಿದ್ದೇನೆಇದು ನನ್ನ ಒಟ್ಟಾರೆ ಪ್ರೊಫೈಲ್ ಎಂದು ನಾನು ಭಾವಿಸುತ್ತೇನೆ, ಆದರೆ ನನಗೆ ಪ್ರಶಸ್ತಿ ದೊರೆತ ಒಂದೇ ಒಂದು ಅಂಶವೂ ಅದರಲ್ಲಿಲ್ಲ!"

ಇನ್ನು ದಿಸಾಳೆ   ಪಾಲಿಗಿದು ಮೊದಲ ಅಂತರರಾಷ್ಟ್ರೀಯ ಮಾನ್ಯತೆ ಅಲ್ಲ. ಈ ಹಿಂದೆ ಮೈಕ್ರೋಸಾಫ್ಟ್ ಸಂಸ್ಥೆ "ಮೈಕ್ರೋಸಾಫ್ಟ್ ಇನ್ನೋವೇಟಿವ್ ಎಜುಕೇಟರ್ ಎಕ್ಸ್‌ಪರ್ಟ್" ಎಂದು ಇವರನ್ನು ಗುರುತಿಸಿತ್ತು. 2018 ರಲ್ಲಿ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್‌ನ ವರ್ಷದ ಇನ್ನೋವೇಟರ್ ಪ್ರಶಸ್ತಿ ಸಹ ಇವರಿಗೆ ಒಲಿದಿತ್ತು.

ಶಿಕ್ಷಕರ ಇನ್ನೋವೇಶನ್ ಫಂಡ್ ಸ್ಥಾಪಿಸಲು ದಿಸಾಳೆ   ಬಹುಮಾನದ ಮೊತ್ತದ ಕೆಲ ಅಂಶಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದು ಅವರಂತಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಆಲೋಚನೆಗಳ ರೂಪಿಸಲು ಸಹಾಯ ಮಾಡುತ್ತದೆ. ಪ್ರಶಸ್ತಿ ಗೆದ್ದಾಗಿನಿಂದ ದಿಸಾಳೆ    ಅವರ ಹೆಸರು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ ಮತ್ತು ಅಮಿತಾಬ್ ಬಚ್ಚನ್ ಸೇರಿದಂತೆ ಸೆಲೆಬ್ರಿಟಿಗಳಿಂದ ಅವರಿಗೆ ಅಭಿನಂದನಾ ಸಂದೇಶಗಳು ಬಂದಿವೆ ಆದರೆ ಈ ಸಾಧನೆಯನ್ನು ಪರಿತೆವಾಡಿಯಲ್ಲಿ ತಮ್ಮ ವಿದ್ಯಾರ್ಥಿಗಳೊಂದಿಗೆ ಆಚರಿಸಲು ಅವರು ಹೆಚ್ಚು ಉತ್ಸುಕರಾಗಿದ್ದಾರೆ.

"ನಾನು ಅವರನ್ನು ಭಾನುವಾರ ಭೇಟಿಯಾಗಲಿದ್ದೇನೆ ಮತ್ತು ಅವರೊಂದಿಗೆ ಈ ಸಂಭ್ರಮ ಆಚರಿಸಲಿದ್ದೇನೆ. ನಾನು ಈಗಾಗಲೇ ಅವರೊಂದಿಗೆ ಸುದ್ದಿಗಳನ್ನು ಹಂಚಿಕೊಂಡಿದ್ದೇನೆ ಮತ್ತು ಅವರು ತುಂಬಾ ಸಂತೋಷವಾಗಿದ್ದಾರೆ. ಈಗ ಅವರ ಮುಖದಲ್ಲಿನ ಸಂತೋಷವನ್ನು ನೋಡಲು ನಾನು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.


Stay up to date on all the latest ವಿಶೇಷ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp