ಸಮಸ್ಯೆಗೆ ಸರಳ ಉಪಾಯ: ಕೊಳಾಯಿಗೆ ಶಿಳ್ಳೆ ಇಟ್ಟು ನೀರು ಪೋಲಾಗುವುದನ್ನು ತಡೆದ ಪುದುಕೊಟ್ಟೈ ಶಿಕ್ಷಕ!

ಕೆಲವೊಮ್ಮೆ ಸಮಸ್ಯೆಗಳಿಗೆ ಸಣ್ಣ ಸಣ್ಣ ಪರಿಹಾರಗಳೇ ಸಿಗುತ್ತವೆ. ತಮಿಳು ನಾಡಿನ ಗಾಂಧರ್ವಕೊಟ್ಟೈಯ ಭೌತಶಾಸ್ತ್ರ ಉಪನ್ಯಾಸಕ ಬಾಲಮುರುಗನ್ ಇದನ್ನು ತೋರಿಸಿಕೊಟ್ಟಿದ್ದಾರೆ. 
ನೀರು ಬಿಟ್ಟಾಗ 10ರಿಂದ 15 ನಿಮಿಷ ಶಿಳ್ಳೆ ಹೊಡೆಯುತ್ತಿರುತ್ತದೆ
ನೀರು ಬಿಟ್ಟಾಗ 10ರಿಂದ 15 ನಿಮಿಷ ಶಿಳ್ಳೆ ಹೊಡೆಯುತ್ತಿರುತ್ತದೆ

ಪುದುಕೊಟ್ಟೈ: ಕೆಲವೊಮ್ಮೆ ಸಮಸ್ಯೆಗಳಿಗೆ ಸಣ್ಣ ಸಣ್ಣ ಪರಿಹಾರಗಳೇ ಸಿಗುತ್ತವೆ. ತಮಿಳು ನಾಡಿನ ಗಾಂಧರ್ವಕೊಟ್ಟೈಯ ಭೌತಶಾಸ್ತ್ರ ಉಪನ್ಯಾಸಕ ಬಾಲಮುರುಗನ್ ಇದನ್ನು ತೋರಿಸಿಕೊಟ್ಟಿದ್ದಾರೆ. 

ಅವರು ನೆಲೆಸಿರುವ ಲೇ ಔಟ್ ನಲ್ಲಿ ಕಾವೇರಿ ಸಂಯೋಜಿತ ಕುಡಿಯುವ ನೀರು ಯೋಜನೆಯಡಿ ಸಾರ್ವಜನಿಕ ಕೊಳವೆ ಮೂಲಕ ನೀರು ರಾತ್ರಿ ಹಗಲೆನ್ನದೆ ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತಿತ್ತು. ಇದರಿಂದ ನೀರು ಹಿಡಿದುಕೊಳ್ಳಲು ಅಲ್ಲಿನ ನಿವಾಸಿಗಳಿಗೆ ಕಷ್ಟವಾಗುತ್ತಿತ್ತು.ನೀರು ಪೋಲಾಗಿ ಹೋಗುತ್ತಿತ್ತು.

ಇದಕ್ಕೆ ಏನಾದರೊಂದು ಪರಿಹಾರ ಕಂಡುಹಿಡಿಯಬೇಕು ಎಂದು ಯೋಚಿಸುತ್ತಿದ್ದ ಬಾಲಮುರುಗನ್ ಕೊಳಾಯಿಗೆ ಶಿಳ್ಳೆ ಇಟ್ಟರು, ಇದರಿಂದ ನಿವಾಸಿಗಳಿಗೆ ನೀರು ಬರುವಾಗ ಗೊತ್ತಾಗುತ್ತದೆ. ನೀರು ನಿಷ್ಟ್ರಯೋಜಕವಾಗುತ್ತಿತ್ತು. ಕೆಲವೊಮ್ಮೆ ಮಧ್ಯರಾತ್ರಿ ಟ್ಯಾಪ್ ನಲ್ಲಿ ನೀರು ಬರುತ್ತಿತ್ತು, ಮಧ್ಯರಾತ್ರಿ 2 ಗಂಟೆಗೆ ಕೆಲವೊಮ್ಮೆ 4 ಗಂಟೆಗೆ ಈ ಸಮಯದಲ್ಲಿ ನೀರು ಬಂದರೆ ಹಿಡಿದುಕೊಳ್ಳುವುದು ಹೇಗೆ,  ಹಲವು ಬಾರಿ ನೀರು ಮನೆಯೊಳಗೆ ನುಗ್ಗುತ್ತಿತ್ತು. ಈ ಯೋಜನೆಯಡಿ ನೀರು 2-3 ಗಂಟೆಗಳಿಗೊಮ್ಮೆ ಬಿಡುಗಡೆಯಾಗುತ್ತದೆ, ಈ ಸಮಸ್ಯೆಗೆ ಓನಾದರೊಂದು ಪರಿಹಾರ ಹುಡುಕಬೇಕು ಎಂದು ಯೋಚಿಸುತ್ತಿದ್ದೆ ಎನ್ನುತ್ತಾರೆ ಬಾಲಮುರುಗನ್. 

ಆರಂಭದಲ್ಲಿ ಬಾಲಮುರುಗನ್ ಕೊಳಾಯಿಗೆ ಬಲೂನ್ ನ್ನು ಕಟ್ಟುತ್ತಿದ್ದರು. ನೀರು  ಕೊಳಾಯಿಯಲ್ಲಿ ಬಂದಾಗ ಬಲೂನ್ ಒಡೆಯುತ್ತಿತ್ತು. ಹಾಗೆಂದು ಅದು ಶಾಶ್ವತ ಪರಿಹಾರವಾಗಿರಲಿಲ್ಲ, ಆಗ ಬಾಲಮುರುಗನ್ ಅವರು ಯೋಚಿಸಿದ್ದೇ ಶಿಳ್ಳೆ ಇಡುವುದು.

ಬಾಲಮುರುಗನ್ ಮಾಡಿದ್ದೇನು?: ಕೊಳಾಯಿಯ ಕೊನೆಯ ಮುಚ್ಚಳಕ್ಕೆ ಶಿಳ್ಳೆ ಸಿಕ್ಕಿಸಿದರು. ಹೀಗೆ ಇಟ್ಟಾಗ ನೀರು ಬಂದಾಗ ಶಿಳ್ಳೆ 10 ರಿಂದ 15 ನಿಮಿಷಗಳವರೆಗೆ ಶಬ್ದ ಮಾಡುತ್ತಿರುತ್ತದೆ. ನೀರು ಬಿಡುಗಡೆಯಾದಾಗ ಒತ್ತಡದಿಂದ ಗಾಳಿ ಹೊರಬರಲು ಶಬ್ದ ಮಾಡುತ್ತದೆ. ಆಗ ಜನರು ಹೋಗಿ ನೀರು ಹಿಡಿದುಕೊಳ್ಳಬಹುದು. ತುಂಬಾ ಸರಳ, ಕಡಿಮೆ ವೆಚ್ಚದ ಪರಿಹಾರವಿದು.

ಬಾಲಮುರುಗನ್ ಅವರು ಕೊಳಾಯಿಯ ಮುಚ್ಚಳದಲ್ಲಿ ತೂತು ಮಾಡಿ ಅಲ್ಲಿ ಶಿಳ್ಳೆ ಇಟ್ಟರು. ಹೊರಗಿನಿಂದ ಯಾವುದೇ ಗಾಳಿಯು ಒಳಗೆ ಹೋಗದಂತೆ ಅವರು ರಂಧ್ರದ ಸುತ್ತಲೂ ಸಾಮಾನ್ಯ ಸೀಲೆಂಟ್ ನ್ನು ಬಳಸಿದರು. ಹೀಗಾಗಿ ನೀರು ಬಿಟ್ಟಾಗ ಮಾತ್ರ ಶಿಳ್ಳೆ ಶಬ್ದ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com