'ವೇದ ಕೃಷಿ' ವಿಧಾನದಿಂದ ಬಂಪರ್ ಇಳುವರಿ ಪಡೆದ ತೆಲಂಗಾಣ ರೈತರು!

ವಿಜ್ಞಾನಿಗಳಿಗೂ ಪೂರ್ಣವಾಗಿ ಗೊತ್ತಿಲ್ಲದ ಕೃಷಿ ತಂತ್ರಜ್ಞಾನವೊಂದನ್ನು ಕೇವಲ 5ನೇ ತರಗತಿಯವರೆಗೂ ಓದಿರುವ ಕೃಷಿಕ ಮಹಿಳೆಯೊಬ್ಬರು ಪರಿಪೂರ್ಣವಾಗಿ ಅರಿತಿದ್ದಾರೆ.

Published: 22nd December 2020 04:31 PM  |   Last Updated: 22nd December 2020 06:33 PM   |  A+A-


R_Lakshmi_Reddy_along_with_her_husband_Tirupati_Reddy_works_on_her_farmland1

ಪತಿಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಿ ರೆಡ್ಡಿ

Posted By : Nagaraja AB
Source : The New Indian Express

ಸಿದ್ದಿಪೇಟ್: ವಿಜ್ಞಾನಿಗಳಿಗೂ ಪೂರ್ಣವಾಗಿ ಗೊತ್ತಿಲ್ಲದ ಕೃಷಿ ತಂತ್ರಜ್ಞಾನವೊಂದನ್ನು ಕೇವಲ 5ನೇ ತರಗತಿಯವರೆಗೂ ಓದಿರುವ ಕೃಷಿಕ ಮಹಿಳೆಯೊಬ್ಬರು ಪರಿಪೂರ್ಣವಾಗಿ ಅರಿತಿದ್ದಾರೆ. ವೇದ ಕೃಷಿ ಎಂದೇ ಹೆಸರಾಗಿರುವ ಈ ವಿಧಾನವನ್ನು ಬಳಸಿಕೊಂಡು ಆರ್ ಲಕ್ಷ್ಮಿ ರೆಡ್ಡಿ ಸಮಯದ ಜೊತೆಗೆ ಹಣ ಉಳಿಸುವ ಮೂಲಕ ಹೊಲದಲ್ಲಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಈ ಕೃಷಿ ವಿಧಾನದಲ್ಲಿ ಪೂರ್ಣಗೊಂಡಿರುವುದು ಆ ಮಹಿಳೆಗೆ  ಗೊತ್ತೇ ಇಲ್ಲ. ಕೃಷ್ಣಾ ಜಿಲ್ಲೆಯ ರೈತರ ವೇದ ಕೃಷಿ ಅಭ್ಯಾಸದ ಬಗ್ಗೆ ತಿಳಿದಿರುವ ಮುಖ್ಯಮಂತ್ರಿ ಆರ್ . ಚಂದ್ರಶೇಖರ್ , ಫೋನ್ ಮೂಲಕ ಅವರನ್ನು ಅಭಿನಂದಿಸಿದ್ದಾರೆ. ಈ ವಿಧಾನದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ತಮ್ಮ ಫಾರ್ಮ್ ಹೌಸ್ ಗೆ ರೈತ ಉಪ್ಪಾಳ ಪ್ರಸಾದ್ ರಾವ್ ಅವರನ್ನು ಮುಖ್ಯಮಂತ್ರಿ ಆಹ್ವಾನಿಸಿದ್ದಾರೆ.

ನೆರೆಯ ಕರೀಂನಗರ ಜಿಲ್ಲೆಯ ಮನಕಂಡೂರು ಮಂಡಲದ ಕೊಂಡಪರಕಲ ಗ್ರಾಮದ ಲಕ್ಷ್ಮಿ ಎಂಬ ಮಹಿಳೆ ತಮ್ಮ ಪತಿಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುವಾಗ ಹೊಸ ವಿಧಾನವನ್ನು ತಂದಿದ್ದಾರೆ.  ತಮ್ಮ ಹೊಲದಲ್ಲಿ ಭತ್ತ  ಬೆಳೆದ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಬೇಕಾಯಿತು. ನರ್ಸರಿಗಳನ್ನು ಬೆಳೆಸಲು ಕಾರ್ಮಿಕರನ್ನು ನೇಮಿಸಬೇಕಾಗಿತ್ತು, ನಂತರ ಅವುಗಳನ್ನು ಕಸಿ ಮಾಡಿ, ಅವುಗಳ ಕಳೆ ತೆಗೆಯಬೇಕಾಗಿತ್ತು. ಕೂಲಿಯಾಳುಗಳು ಮನೇಗ್ರಾದಲ್ಲಿ ಕೆಲಸ ಕಂಡುಕೊಂಡು ಕೃಷಿ ಕೆಲಸಗಳನ್ನು ನಿಲ್ಲಿಸಿದಾಗ ಅವರ ಸಮಸ್ಯೆ ಎದುರಾಯಿತು. ನಂತರ ಈ ದಂಪತಿ ರಾಸಾಯನಿಕ ಗೊಬ್ಬರಕ್ಕಾಗಿ ಹೆಚ್ಚಿಗೆ ಖರ್ಚು ಮಾಡಬೇಕಾಯಿತು.

ಇದು ಕಷ್ಟವೆನಿಸಿ ಲಕ್ಷ್ಮಿ ಪರ್ಯಾಯವಾಗಿ ಮತ್ತೊಂದು ವಿಧಾನವನ್ನು ಕಂಡುಕೊಂಡಿದ್ದಾರೆ. ಭತ್ತದ ಹೊಲದಲ್ಲಿ ಬೀಜಗಳನ್ನು ಹಾಕಲು ಶುರು ಮಾಡಿದ್ದಾರೆ. ಆಕೆಗೆ ಆಶ್ಚರ್ಯವಾಗಿದ್ದು, ಸಸಿಗಳನ್ನು ಬೆಳೆಸಲು ಬೇಕಾಗಿದ್ದ ಬೀಜಗಳಿಗಿಂತ ಚೆಲ್ಲಲ್ಲು ಬೇಕಾಗಿದ್ದ ಬೀಜಗಳ ಪ್ರಮಾಣ ಕಡಿಮೆ ಇದ್ದರೆ ಸಾಕೆನಿಸಿದೆ. ಸಸಿಗಳನ್ನು ಬೆಳೆಯಲು ಪ್ರತಿ ಎಕರೆಗೆ 30 ಕೆಜಿ ಬೀಜ ಬಳಸಲಾಗುತಿತ್ತು. ಆದರೆ, ಬರೀ ಬೀಜ ಚೆಲ್ಲಿದ್ದರೆ 15 ಕೆಜಿ ಸಾಕು ಎಂಬುದು ಆಕೆಗೆ ಮನವರಿಕೆಯಾಗಿದೆ. 

ಇದನ್ನು ನೋಡಿ ಲಕ್ಷ್ಮಿ ಪತಿ ತಿರುಪತಿ ರೆಡ್ಡಿಗೂ ಕುತೂಹಲವಾಗಿದ್ದು, ಈ ಹೊಸ ವಿಧಾನದಿಂದ ಖುಷಿಯಾಗಿದ್ದೇವೆ. ಇದರಿಂದ ವೆಚ್ಚ ಕಡಿಮೆಯಾಗುವುದಲ್ಲದೇ, ಉತ್ತಮ ಇಳುವರಿಯು ಸಿಗುತ್ತಿದೆ. ಹೆಚ್ಚುವರಿಯಾಗಿ ಐದು ಬ್ಯಾಗ್ ಭತ್ತವನ್ನು ಪಡೆದುಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಲಕ್ಷ್ಮಿಯ ಯಶೋಗಾಥೆಯನ್ನು ತಿಳಿದ ಹಣಕಾಸು ಸಚಿವ ಟಿ ಹರೀಶ್ ರಾವ್, ಲಕ್ಷ್ಮಿ ಹಾಗೂ ಆಕೆಯ ಹೊಸ ಕೃಷಿ ವಿಧಾನವನ್ನು ತಮ್ಮ ಕ್ಷೇತ್ರ ಸಿದ್ದಿಪೇಟ್ ನಲ್ಲಿ ಪರಿಚಯಿಸಿದ್ದಾರೆ. ಶ್ರಮಜೀವಿ ಲಕ್ಷಿ ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆಕೆಯ ಟ್ರ್ಯಾಕ್ಟರ್ ನಲ್ಲಿ ಹೊಲ ಉಳುಮೆ ಜೊತೆಗೆ ಬೈಕ್ ನಲ್ಲಿಯೇ ಹೊಲಕ್ಕೆ ಬರುತ್ತಾರೆ. ಲಕ್ಷ್ಮಿ ಅವರ ಒಬ್ಬ ಮಗ ಕೃಷಿಯಲ್ಲಿ ಬಿಎಸ್ ಎಸಿ ಪದವಿ ಮಾಡುತ್ತಿದ್ದರೆ ಮತ್ತೊಬ್ಬ ಮಗ ಎಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

Stay up to date on all the latest ವಿಶೇಷ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp