ನವೀನ ಕೃಷಿಯಂತ್ರದ ಆವಿಷ್ಕಾರಕ್ಕೆ ಮೆಚ್ಚುಗೆ, ಒಡಿಶಾ ಬಾಲಕನನ್ನು ಚಹಾಕೂಟಕ್ಕೆ ಆಹ್ವಾನಿಸಿದ ರಾಷ್ಟ್ರಪತಿ

 ಕೃಷಿಯಲ್ಲಿ ನವೀನ ಸಂಶೋಧನೆ ಮಾಡಿರುವ ಒಡಿಶಾದ 12 ವರ್ಷದ ಭಾಲಕನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಹಾಕೂಟಕ್ಕೆ ಆಹ್ವಾನ ಬಂದಿದೆ. ಒಡಿಶಾದ ಬಸ್ತಾ ಬ್ಲಾಕ್‌ನ ಮಧುಪುರದ 1ಈ ಬಾಲಕ ಕೃಷಿಯನ್ನು ಸರಳವಾಗಿಸುವ ಸಂಶೋಧನೆ ಮಾಡಿದಾನೆ.

Published: 02nd February 2020 11:22 AM  |   Last Updated: 02nd February 2020 11:22 AM   |  A+A-


ನವೀನ ಕೃಷಿಯಂತ್ರದ ಆವಿಷ್ಕಾರಕ್ಕೆ ಮೆಚ್ಚುಗೆ, ಒಡಿಶಾ ಬಾಲಕನನ್ನು ಚಹಾಕೂಟಕ್ಕೆ ಆಹ್ವಾನಿಸಿದ ರಾಷ್ಟ್ರಪತಿ

Posted By : Raghavendra Adiga
Source : The New Indian Express

ಬಾಲಸೂರ್(ಒಡಿಶಾ): ಕೃಷಿಯಲ್ಲಿ ನವೀನ ಸಂಶೋಧನೆ ಮಾಡಿರುವ ಒಡಿಶಾದ 12 ವರ್ಷದ ಭಾಲಕನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಹಾಕೂಟಕ್ಕೆ ಆಹ್ವಾನ ಬಂದಿದೆ. ಒಡಿಶಾದ ಬಸ್ತಾ ಬ್ಲಾಕ್‌ನ ಮಧುಪುರದ 1ಈ ಬಾಲಕ ಕೃಷಿಯನ್ನು ಸರಳವಾಗಿಸುವ ಸಂಶೋಧನೆ ಮಾಡಿದಾನೆ.

ಮಧುಪರದ ಉಪೇಂದ್ರ ನಾಥ್ ನೋಡಲ್ ಮೇಲ್ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಬಿಪ್ಲಬ್ ಕುಮಾರ್ ಘೋಷ್, ಈ ಮಹತ್ವದ ಸಂಶೋಧನೆ ನಡೆಸಿರುವ ಭಾಲಕ. ಈತ ತನ್ನ ತಂದೆ  ಸುಸಂತ ಕುಮಾರ್ ಘೋಷ್ ಅವರು ಕೃಷಿ ಮಾಡಲು ಪಡುತ್ತಿರುವ ಬವಣೆಯನ್ನು ಕಂಡು ನಂತರ ಕೈಯಿಂದ ನಡೆಸುವ ಕೃಷಿ ಚಟುವಟಿಕೆಯನ್ನು ಸರಳವಾಗಿಸಿ ಸಮಯ ಉಳಿಸಲು ಯಂತ್ರವನ್ನು ಸಂಶೋಧಿಸಿದ್ದಾನೆ. ಇದಕ್ಕಾಗಿ ಆತ ತನ್ನ ಶಾಲಾ ಸಹಪಾಠಿಗಳು, ಶಿಕ್ಷಕರ ನೆರವನ್ನು ಪಡೆದಿದ್ದು "ಸೀಡ್ಸ್ ಆಂಡ್ ಫರ್ಟಿಲೈಸರ್ಸ್ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಇದಕ್ಕಾಗಿ 10,000 ರು. ಖರ್ಚು ತಗುಲಿದೆ.

"ಇದೊಂದು ಬಹು ಉಪಯೋಗಿ ಯಂತ್ರವಾಗಿದ್ದು ಕಕಾಲದಲ್ಲಿ ಆರು ವಿಭಿನ್ನ ಕಾರ್ಯಗಳನ್ನು ನಿರ್ವಹಿಸಬಲ್ಲದು. , ಇದರಲ್ಲಿ ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಭೂಮಿಯನ್ನು ಸಿದ್ಧಪಡಿಸುವುದು, ಉಳುಮೆ ಮಾಡುವುದು, ನೀರು ಮತ್ತು ಕೀಟನಾಶಕವನ್ನು ಸಿಂಪಡಿಸುವುದು, ಬೀಜಗಳನ್ನು ಬಿತ್ತನೆ ಮಾಡುವುದು ಮತ್ತು ಗೊಬ್ಬರವನ್ನು ಹಾಕುವುದು ಸೇರಿದೆ" ಬಿಪ್ಲಬ್ ಹೇಳಿದ್ದಾನೆ.

ಬಿಪ್ಲಬ್  ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನಗಳಲ್ಲಿ ತನ್ನ ಈ ಯಂತ್ರವನ್ನು ಪ್ರದರ್ಶಿಸಿ ಪದಕಗಳನ್ನು ಗೆದ್ದಿದ್ದಾನೆ. ಅಲ್ಲದೆ ಈತನಿಗೆ ಇತ್ತೀಚೆಗಷ್ಟೇ INSPIRE ಅವಾರ್ಡ್-ಮನಕ್ (ಮಿಲಿಯನ್ ಮೈಂಡ್ಸ್ ಆಗ್ಮೆಂಟಿಂಗ್ ನ್ಯಾಷನಲ್ ಆಸ್ಪಿರೇಷನ್ ಆಂಡ್ ನಾಲೇಜ್) ಪ್ರಶಸ್ತಿ ಸಹ ಲಭಿಸಿದೆ. INSPIRE ಅವಾರ್ಡ್ ಗೆ ಆಯ್ಕೆಯಾದ ಏಳು ಯೋಜನೆಗಳಲ್ಲಿ ಯುವಕ ವಿನ್ಯಾಸಗೊಳಿಸಿದ ಯಂತ್ರವೂ ಸೇರಿದೆ ಎಂದು ಬಾಲಕನ ಶಾಲೆಯ ಮುಖ್ಯೋಪಾಧ್ಯಾಯ ಚಿನ್ಮಯ್ ಕುಮಾರ್ ನಂದಾ ಹೇಳಿದ್ದಾರೆ.

ಬಾಲಕನ ಸಂಶೋಧನೆಯನ್ನು ಗಮನಿಸಿ ರಾಷ್ಟ್ರಪತಿ ಭವನ ಬಾಲಕನನ್ನು ನಡೆಯುವ ಚಹಾಕೂಟಕ್ಕೆ ಆಹ್ವಾನಿಸಿದೆ.ಈ ಕಾರ್ಯಕ್ರಮದ ದಿನಾಂಕ ಇನ್ನೂ ದೃಷಪಟ್ಟಿಲ್ಲವಾದರೂ  ಮಾರ್ಚ್-ಏಪ್ರಿಲ್‌ನಲ್ಲಿ  ಇದು ನಡೆಯಬಹುದಾಗಿದೆ ಎಂದು ಶಿಕ್ಷಕರು ಹೇಳೀದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಪ್ರಮುಖ ಕಾರ್ಯಕ್ರಮಗಳಲ್ಲಿ ಸೈನ್ಸ್ ಪರ್ಸ್ಯೂಟ್ ಫಾರ್ ಇನ್‌ಸ್ಪೈರ್ಡ್ ರಿಸರ್ಚ್ (ಇನ್‌ಸ್ಪೈರ್)  ಒಂದಾಗಿದ್ದು ಇದರಲ್ಲಿ 0-15 ವರ್ಷದೊಳಗಿನ ವಿದ್ಯಾರ್ಥಿಗಳನ್ನುಅವರು ಆರರಿಂದ ಹತ್ತನೇ ತರಗತಿಯೊಳಗೆ ವ್ಯಾಸಂಗ ಮಾಡುವವರಾಗಿದ್ದರೆ ಅಂತಹವರಿಗೆ ಪ್ರೇರಣ ನೀಡುವ ಗುರಿ ಹೊಂದಿದೆ.

Stay up to date on all the latest ವಿಶೇಷ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp