ರೈತ
ರೈತ

ಯಾವ ಸೈಂಟಿಸ್ಟ್ ಗೂ ಕಮ್ಮಿಯಿಲ್ಲ ನಮ್ಮ ಮಂಡ್ಯ ರೈತ...!

ಆಧುನಿಕ ಕೃಷಿಗಾಗಿ ಲಕ್ಷ ಲಕ್ಷ ಕರ್ಚು ಮಾಡಿ ಸೈಂಟಿಸ್ಟ್ ಗಳ ಮೂಲಕ ಸಂಶೋಧನೆ ನಡೆಸೋ ಈ ದಿನಗಳಲ್ಲಿ ಕರ್ಚಿಲ್ಲದೆ ಜೀವನೋಪಾಯ ಉಪಕರಣಗಳನ್ನು ತಾವೇ ಕಂಡುಕೊಳ್ಳೋ ನಮ್ಮ ರೈತರು ಯಾವ ಸೈಂಟಿಸ್ಟ್ಗಳಿಗೂ ಕಮ್ಮಿಯಿಲ್ಲ.!

ಮಂಡ್ಯ: ಆಧುನಿಕ ಕೃಷಿಗಾಗಿ ಲಕ್ಷ ಲಕ್ಷ ಕರ್ಚು ಮಾಡಿ ಸೈಂಟಿಸ್ಟ್ ಗಳ ಮೂಲಕ ಸಂಶೋಧನೆ ನಡೆಸೋ ಈ ದಿನಗಳಲ್ಲಿ ಕರ್ಚಿಲ್ಲದೆ ಜೀವನೋಪಾಯ ಉಪಕರಣಗಳನ್ನು ತಾವೇ ಕಂಡುಕೊಳ್ಳೋ ನಮ್ಮ ರೈತರು ಯಾವ ಸೈಂಟಿಸ್ಟ್ಗಳಿಗೂ ಕಮ್ಮಿಯಿಲ್ಲ.!

ಹೌದು, ನಮ್ಮ ರೈತರು ಸ್ವತಃ ಸಂಶೋಧನೆ ಮಾಡಿ ಜೀವನ ಮಾರ್ಗಗಳನ್ನು ಕಂಡುಕೊಳ್ಳೋದರಲ್ಲಿ ಯಾರಿಗೂ ಕಡಿಮೆಯಿಲ್ಲ, ಮುರಿದು ಮೂಲೆ ಸೇರಿದ್ದ ಲಡಕಾಸಿ ಸೈಕಲ್ ನ್ನು ಗುಜರಿಗೆ ಹಾಕೋರೆ ಹೆಚ್ಚು,ಆದ್ರೆ ಮಂಡ್ಯ ಮೂಲದ ರೈತರು ಇದರಿಂದಲೂ ತಮಗೆ ಬೇಕಾದ ಉಪಕರಣ ಮಾಡಿಕೊಂಡು ಜಮೀನು ಕಳೆತೆಗೆಯುವ ಉಳುಮೆ ಮಾಡಿಕೊಳ್ಳಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
 
ಉಳುಮೆಗೆ ರೈತ ಮಿತ್ರ ದನಗಳು ಇತ್ತೀಚೆಗೆ ಕಡಿಮೆಯಾಗಿವೆ. ಹೀಗಾಗಿ ಈ ರೈತರು ಹೊಸ ಐಡಿಯಾ ಮಾಡಿಕೊಂಡಿದ್ದಾರೆ. ಒಬ್ಬರೇ  ಜಮೀನಿನಲ್ಲಿ ತರಕಾರಿ, ರಾಗಿ ಇತ್ಯಾದಿ ಬೆಳೆಗಳ ನಡುವೆ ಕಳೆತೆಗೆಯುವ ಕೆಲಸ ಮಾಡಲು ಮುರುಕಲು ಸೈಕಲ್ ನ್ನು ಬಳಸಿಕೊಳ್ಳುತ್ತಿದ್ದಾರೆ. 

ಆಧುನಿಕತೆಯ ಬೆನ್ನೇರಿದ ಇತ್ತೀಚಿನ ವರ್ಷಗಳಲ್ಲಿ ಉಳುಮೆಗೆ ದನಗಳೇ ಸಿಗುತ್ತಿಲ್ಲ,ಪರಿಣಾಮವಾಗಿ ಟ್ರಾಕ್ಟರ್ ಟಿಲ್ಲರ್ ನಂತಹ ಯಂತ್ರಗಳ ಮೂಲಕ ಉಳುಮೆ  ಇತ್ಯಾದಿ ಕೃಷಿ ಕೆಲಸಗಳನ್ನು ಮಾಡಲಾಗುತ್ತಇದೆ, ಇದಕ್ಕೆ ದುಬಾರಿ ಹಣ ಕರ್ಚು ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ,ಆದಾಯಕ್ಕಿಂತ ನಷ್ಠವೇ  ಹೆಚ್ಚಾಗಿ ರೈತರ ಕೈ ಸುಡುತ್ತಿದೆ, ಅಲ್ಲದೆ ಬೆಳೆಗಳ ಮಧ್ಯೆ ಬೆಳೆದ ಕಳೆ ಕೀಳಲು ಯಂತ್ರಗಳನ್ನು ಬಳಸಲು ಸಾಧ್ಯವಿಲ್ಲ. ಹೀಗಾಗಿ ಮೇಲುಕೋಟೆ ವ್ಯಾಪ್ತಿಯ ರೈತರು ಹೊಸ ಐಡಿಯಾ ಮಾಡಿಕೊಂಡಿದ್ದಾರೆ.

ನಾವು ನೀವೆಲ್ಲಾ ಮರದ ಕುಂಟೆಗಳನ್ನು ನೋಡಿದ್ದೇವೆ, ಬಳಸಿದ್ದೇವೆ, ಆದರೆ  ಮನೆಯಲ್ಲಿ ಉಪಯೋಗಕ್ಕೆ ಬಾರದೇ ಮೂಲೆ ಸೇರಿದ್ದ ಲಡಕಾಸಿ ಸೈಕಲ್ ಗಳನ್ನು ಕುಂಟೆ ಮಾಡಿಕೊಂಡು ಮೆಲುಕೋಟೆ ವ್ಯಾಪ್ತಿಯ ರೈತರು ಉಪಯೋಗ ಪಡೆಯುತ್ತಿದ್ದಾರೆ. ಸೈಕಲ್ ನ ಮುಂದಿನ ಭಾಗವನ್ನು ಕಟ್ ಮಾಡಿ ವೆಲ್ಡಿಂಗ್ ಮಾಡಿಸಿಕೊಂಡು  ಅದನ್ನ  ಎರಡು ಹಲ್ಲಿನಕುಂಟೆಯನ್ನಾಗಿ ಪರಿವರ್ತಿಸಿಕೊಂಡು ತರಕಾರಿ ಬೆಳೆ,ರಾಗಿ ಇತ್ಯಾದಿ ಬೆಳೆಯಲ್ಲಿ ಕಳೆ ಕೀಳಲು,ಬುಡಕ್ಕೆ ಮಣ್ಣು ಒತ್ತರಿಸಲು ಬಳಸುತ್ತಿದ್ದಾರೆ.

ಮೇಲುಕೋಟೆ ವ್ಯಾಪ್ತಿಯೊಂದರಲ್ಲೇ  ಈ  ರೀತಿಯ ಕುಂಟೆಗಳು ಸುಮಾರು 500ಕ್ಕೂ ಹೆಚ್ಚು ಇವೆ ಎಂಬ ಮಾಹಿತಿ ಇದೆ. ರೈತರು  ತಮ್ಮ ಜಮೀನಿನಲ್ಲಿಬೆಳೆಯಲ್ಲಿ ಕಳೆ ಕೀಳಲು ಈ ಕುಂಟೆಗಳನ್ನು ಬಳಸುತ್ತಿದ್ದಾರೆ. ಹೆಚ್ಚು ಆಳು,ದನಗಳೇ ಬೇಕಿಲ್ಲಾ,ಒಬ್ಬರೇ ಒಬ್ಬರು ಈ ಕುಂಟೆಯನ್ನು ಹಿಡಿದುಕೊಂಡು ಉಳುಮೆ ಮಾಡಬಹುದಾಗಿದೆ,  ಈ ನೂತನ ಮಾದರಿ ಸೈಕಲ್ ಕುಂಟೆಯಿಂದ ಹಣದ ಜೊತೆಗೆ ಮಾನವ ಕೂಲಿಯೂ ಉಳಿಯುತ್ತಿದೆ. ಜೊತೆಗೆ ಸಮಯವೂ ಉಳಿಯುತ್ತಿದೆ. ಇನ್ನು ದನಗಳು ಕಡಿಮೆ ಆಗಿರುವುದರಿಂದ ಈ ಗುಂಟೆಯೇ ರೈತರ ಸಹಪಾಠಿಯಾಗಿದೆ.

ಲಡಕಾಸಿ ಸೈಕಲ್ ನ್ನು ಗುಜರಿಗೆ ಹಾಕ್ತಾ ಇದ್ದೋ ಆದರೆ ನಾವೆ ಈಗ ಅದನ್ನ ಕುಂಟೆರೀತಿ ಮಾಡಿ ಕೊಂಡು ಕಳೆ ತೆಗೆಯೋದಕ್ಕೆ ಮತ್ತು ಗಿಡದ ಬುಡಕ್ಕೆ ಮಣ್ಣುಒತ್ತರಿಸೋದಕ್ಕೆ ಬಳಸಿಕೊಳ್ತಾ ಇದ್ದೀವಿ, ಹಿಂದಿನವರ ಮರದ ಕುಂಟೆ ಮಾಡುತ್ತಿದ್ದಂತೆಯೇ ಸೈಕಲ್ ನಲ್ಲಿ ಕುಂಟೆ ಮಾಡಿಕೊಂಡಿದ್ದೇವೆ, ಈಗ ಇದು ನಮಗೆ ತುಂಬ ಸಹಕಾಯಕ್ಕೆ ಬರುತ್ತಿದೆ, ಇವತ್ತು ಆಳುಗಳೇ ಸಿಕ್ತಾ ಇಲ್ಲಾ, ಜೊತೆಗೆ ಉಳುವ ದನಗಳೂ ಸಹ ಕಡಿಮೆಯಾಗೋಗವೆ ಹೀಗಾಗಿ ನಾವೆ ಕಂಡುಹಿಡಿದುಕೊಂಡಿರೋ ಈ ಸೈಕಲ್ ಕುಂಟೆ ರೈತರ ಉಪಯೋಗಕ್ಕೆ ಬರುತ್ತಿದೆ. ಇದರಿಂದ ಹಣದ ಉಳಿತಾಯ ಹಾಗೂ ಸಮಯದ ಉಳಿತಾಯವೂ ಆಗುತ್ತಿದೆ. ಕಾರ್ಮಿಕರ ಸಮಸ್ಯೆಯೂ ನೀಗುತ್ತಿದೆ ಎನ್ನುತ್ತಾರೆ ರೈತ ಅಶೋಕ್, ಇತ್ತೀಚೆಗೆ ಈ ಸೈಕಲ್ ಕುಂಟೆ ನಮ್ಮಲ್ಲಿ ಜಾಸ್ತಿಯಾಗಿವೆ,ಸುಲಭವಾಗಿ ದನಗಳಿಲ್ಲದೆ,ಕೂಲಿಯಾಳುಗಳ ಅವಶ್ಯಕತೆಯಿಲ್ಲದೆ ಕೆಲಸ ಮಾಡುತ್ತಿದ್ದೆವೆ,ಇದು ಕೆಲಸ ಮಾಡೋದಕ್ಕೂ ತುಂಬಾ ಸುಲಭ ಮತ್ತು ಸರಳ ಎನ್ನತ್ತಾರೆ ರೈತ ದೇವರಾಜ್.

ವರದಿ: ನಾಗಯ್ಯ ಲಾಳನಕೆರೆ

Related Stories

No stories found.

Advertisement

X
Kannada Prabha
www.kannadaprabha.com