ಕಲಬುರಗಿ: ಕೊಲೆ ಪ್ರಕರಣದಲ್ಲಿ ಜೈಲಲ್ಲಿದ್ದರೂ ವೈದ್ಯನಾಗುವ ಕನಸು ಈಡೇರಿಸಿಕೊಂಡ ಛಲವಾದಿ

ನಸಿನೊಡನೆ ಸಾಧಿಸುವ ಛಲವಿದ್ದರೆ ಏನಾದರೂ ಸಾಧಿಸಲು ಯಾವ ಡ್ಡಿಯೂ ಇರಲಾರದು, ಈ ಮಾತಿಗೆ ಬರೋಬ್ಬರಿ ಹದಿನಾಲ್ಕು ವರ್ಷ ಜೈಲುಹಕ್ಕಿಯಾಗಿದ್ದ ಸುಭಾಷ್ ಪಾಟೀಲ್ಇತ್ತೀಚಿನ ಉದಾಹರಣೆಯಾಗಿದ್ದಾರೆ. ಸುಭಾಷ್ ಹದಿನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರೂ ಸಹ ತಾವು ವೈದ್ಯರಾಗಬೇಕೆನ್ನುವ ಕನಸನ್ನು ಕೈಗೂಡಿಸಿಕೊಳ್ಳುವುದರಿಂದ ಹಿಂದೆ ಸರಿದಿಲ್ಲ. ಅಂತಿಮವಾಗಿ ಅವರು ವೈದ್ಯಕೀಯ ಪ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಕನಸಿನೊಡನೆ ಸಾಧಿಸುವ ಛಲವಿದ್ದರೆ ಏನಾದರೂ ಸಾಧಿಸಲು ಯಾವ ಡ್ಡಿಯೂ ಇರಲಾರದು, ಈ ಮಾತಿಗೆ ಬರೋಬ್ಬರಿ ಹದಿನಾಲ್ಕು ವರ್ಷ ಜೈಲುಹಕ್ಕಿಯಾಗಿದ್ದ ಸುಭಾಷ್ ಪಾಟೀಲ್ಇತ್ತೀಚಿನ ಉದಾಹರಣೆಯಾಗಿದ್ದಾರೆ. ಸುಭಾಷ್ ಹದಿನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರೂ ಸಹ ತಾವು ವೈದ್ಯರಾಗಬೇಕೆನ್ನುವ ಕನಸನ್ನು ಕೈಗೂಡಿಸಿಕೊಳ್ಳುವುದರಿಂದ ಹಿಂದೆ ಸರಿದಿಲ್ಲ. ಅಂತಿಮವಾಗಿ ಅವರು ವೈದ್ಯಕೀಯ ಪದವಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

1997 ರಲ್ಲಿ ಎಂಬಿಬಿಎಸ್ ಮಾಡುವಾಗ ಕರ್ನಾಟಕದ ಕಲಬುರಗಿಯ ಅಫಜಲಪುರದ  40 ವರ್ಷದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಸುಭಾಷ್ ಅವರನ್ನು ಬಂಧಿಸಲಾಗಿತ್ತು. 

ಎಎನ್‌ಐ ಸುದ್ದಿಸಂಸ್ಥೆಗೆ ಮಾತನಾಡಿದ ಸುಭಾಷ್ "ನಾನು 1997 ರಲ್ಲಿ ಎಂಬಿಬಿಎಸ್‌ಗೆ ಸೇರಿಕೊಂಡೆ. ಆದರೆ, ನಾನು 2002 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲುಪಾಲಾದೆ, ನಾನು ಜೈಲಿನ ಒಪಿಡಿಯಲ್ಲಿ ಕೆಲಸ ಮಾಡಿದ್ದೆ.  ಉತ್ತಮ ನಡವಳಿಕೆಗಾಗಿ 2016 ರಲ್ಲಿ ಬಿಡುಗಡೆಯಾಗಿ ಬಳಿಕ 2019 ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದೆ" ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಪಾಟೀಲ್ ಎಂಬಿಬಿಎಸ್ ಕೋರ್ಸ್ ಪದವಿ ಪಡೆಯಲು ಒಂದು ವರ್ಷದ ಕಡ್ಡಾಯ ಇಂಟರ್ನ್‌ಶಿಪ್ ಪೂರೈಸಿದರು.

ಪಾಟೀಲ್ ಎಂಬಿಬಿಎಸ್ ಕೋರ್ಸ್‌ನ ಮೂರನೇ ವರ್ಷದಲ್ಲಿದ್ದಾಗ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು 2002 ರಲ್ಲಿ ಅವರನ್ನು ಬಂಧಿಸಿದ್ದರು. ನ್ಯಾಯಾಲಯವು 2006 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು. ಆ ಬಳಿಕ ಅವರನ್ನು ಕಂಬಿಗಳ ಹಿಂದಿಡಲಾಗಿತ್ತು. ಆದರೆ ವೈದ್ಯನಾಗಬೇಕೆಂಬ ತನ್ನ ಬಾಲ್ಯದ ಕನಸನ್ನು ಅವರು ಬಿಟ್ಟುಕೊಡಲಿಲ್ಲ. ಪಾಟೀಲ್ ಅವರ ಉತ್ತಮ ನಡವಳಿಕೆಗಾಗಿ 2016 ರ ಸ್ವಾತಂತ್ರ ದಿನದಂದು ಅವರ ಬಿಡುಗಡೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com