ಸಾಧನೆಗೆ ವಯಸ್ಸು ಅಡ್ಡಿಯಲ್ಲ- ಇದು 93ನೇ ವಯಸ್ಸಿನಲ್ಲಿ ಪದವೀಧರನಾದವನ ಕಥೆ..!

 ಓದುವುದಕ್ಕೆ ವಯಸ್ಸಿನ ಅಂತರವಿಲ್ಲ ಅದಕ್ಕೆ ಕೇವಲ ಛಲ, ಬಲ ಗುರಿ ಇರಬೇಕು ಎಂಬ ಮಾತನ್ನು ತಮಿಳುನಾಡು ಮೂಲದ ಶಿವಸುಬ್ರಮಣ್ಯನ್, ಸತ್ಯ ಮಾಡಿ ಛಲದಿಂದಲೇ ತೋರಿಸಿದ್ದಾರೆ.

Published: 19th February 2020 01:00 PM  |   Last Updated: 19th February 2020 02:11 PM   |  A+A-


ಶಿವಸುಬ್ರಮಣ್ಯನ್,

Posted By : Raghavendra Adiga
Source : UNI

ನವದೆಹಲಿ: ಓದುವುದಕ್ಕೆ ವಯಸ್ಸಿನ ಅಂತರವಿಲ್ಲ ಅದಕ್ಕೆ ಕೇವಲ ಛಲ, ಬಲ ಗುರಿ ಇರಬೇಕು ಎಂಬ ಮಾತನ್ನು ತಮಿಳುನಾಡು ಮೂಲದ ಶಿವಸುಬ್ರಮಣ್ಯನ್, ಸತ್ಯ ಮಾಡಿ ಛಲದಿಂದಲೇ ತೋರಿಸಿದ್ದಾರೆ.

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ಈ ಬಾರಿಯ ಘಟಿಕೋತ್ಸವದಲ್ಲಿ ತಮಿಳುನಾಡು ಮೂಲದ ಶಿವಸುಬ್ರಮಣ್ಯನ್, ತಮ್ಮ 93ನೇ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎಲ್ಲರ ಗಮನ ಸೆಳೆದು, ಅಪ್ರತಿಮ ಸಾಧನೆ ಮಾಡಿ ಯುವಕರು ನಾಚುವಂತೆ ಮಾಡಿ ತೋರಿಸಿದ್ದಾರೆ.

"ಕುಟುಂಬದ ಜವಾಬ್ದಾರಿಗಳು ನನ್ನ ಅಧ್ಯಯನಕ್ಕೆ ಅಡ್ಡಿಯಾಗುತ್ತಿತ್ತು., ಆದರೆ 87 ನೇ ವಯಸ್ಸಿನಲ್ಲಿ, ಅಂತಿಮವಾಗಿ, ಆ ಅವಕಾಶವು ನನ್ನ ಬಾಗಿಲನ್ನು ತಟ್ಟಿತು"  93 ವರ್ಷದ ಪದವೀಧರ ಶಿವಸುಬ್ರಮಣ್ಯನ್ ಹೇಳಿದ್ದಾರೆ. 

"1940 ರ ದಶಕದಲ್ಲಿ ನನ್ನ ಶಾಲೆಯನ್ನು ಮುಗಿಸಿದ ನಂತರ, ನಾನು ಕಾಲೇಜಿಗೆ ಹೋಗಬೇಕೆಂದು ಬಯಸಿದ್ದೆ ಆದರೆ ಅದಕ್ಕಾಗಿ ತ್ರಿಚಿ ಅಥವಾ ಚೆನ್ನೈಗೆ ಹೋಗಬೇಕಿತ್ತು. ಅಷ್ಟರಲ್ಲಿ, ನನ್ನ ಹೆತ್ತವರುಅನಾರೋಗ್ಯಕ್ಕೆ ಒಳಗಾದರು ಮತ್ತು ನನ್ನ ಸಂಬಂಧಿಕರು ನನಗೆ ಬೇರೆಡೆ ಹೋಗದಂತೆ ತಡೆದರು.ಏಕೆಂದರೆ ನಾನು ಅವರನ್ನು ನೋಡಿಕೊಳ್ಳಬೇಕಾಗಿತ್ತು. ಹಾಗಾಗಿ, ನಾನು ಕೆಲಸ ಮಾಡಲು ತೊಡಗಿದೆ

ನಂತರ, ಕುಟುಂಬವು ದೆಹಲಿಗೆ ಸ್ಥಳಾಂತರಗೊಂಡಿತು, ಮತ್ತು ಅವರು 1940 ರ ದಶಕದಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಗುಮಾಸ್ತರಾಗಿ ಕೆಲಸ ಪಡೆದರು. ವರ್ಷಗಳಲ್ಲಿ, ಅವರು ವಿವಿಧ ವಿಭಾಗೀಯ ಪರೀಕ್ಷೆಗಳಿಗೆ ಹಾಜರಾದ ನಂತರ, ಅಂತಿಮವಾಗಿ 1986 ರಲ್ಲಿ ತಮ್ಮ 58 ನೇ ವಯಸ್ಸಿನಲ್ಲಿ ಸಚಿವಾಲಯನಿರ್ದೇಶಕರಾಗಿ ನಿವೃತ್ತರಾದರು, ಆದರೆ ಅವರ ಒಂದು ಕನಸು ಈಡೇರಲಿಲ್ಲ, ಅದುವೇ ಪದವೀಧರರಾಗುವ ಕನಸು.

"ವಾಸ್ತವವಾಗಿ, ವಿಶ್ವಸಂಸ್ಥೆಯಲ್ಲಿನ ಕಾರ್ಯಕ್ರಮದ ಭಾಗವಾಗಲು ನನಗೆ ಅವಕಾಶ ನೀಡಲಾಯಿತು. ಆದರೆ ನಾನು ಪದವೀಧರನಲ್ಲದ ಕಾರಣ ನನಗೆ ಹೋಗಲು ಸಾಧ್ಯವಾಗಲಿಲ್ಲ. ಸಚಿವಾಲಯದಲ್ಲಿ ನನ್ನ ಅಧಿಕಾರಾವಧಿಯಲ್ಲಿ, ದೆಹಲಿ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ದೂರಶಿಕ್ಷಣದ ಮೂಲಕ ಪದವಿ ವ್ಯಾಸಂಗದ ಬಗೆಗೆ ಸಹ ನಾನು ವಿಚಾರಿಸಿದೆ ಆದರೆ ನಂತರ ನನ್ನನ್ನು ವರ್ಗಾವಣೆ ಮಾಡಲಾಯಿತು ಮತ್ತು ಅವುಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.

 ತನ್ನ ನಿವೃತ್ತಿಯ ನಂತರ ಅಧ್ಯಯನವನ್ನು ಮುಂದುವರಿಸಲು ಬಯಸಿದ ಶಿವಸುಬ್ರಮಣ್ಯನ್, ಅವರಿಗೆ  ಕುಟುಂಬದ ಜವಾಬ್ದಾರಿಗಳು ಮತ್ತು ಅವನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿತ್ತು. ಅವರಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಮಗನಿದ್ದಾರೆ, ಇವರೆಲ್ಲರೂ ಪ್ರತಿಷ್ಠಿತ ಹುದ್ದೆಗಳಿಂದ ನಿವೃತ್ತರಾಗಿದ್ದಾರೆ."ನನ್ನ ಮೊಮ್ಮಕ್ಕಳು ತಮ್ಮ ಅಧ್ಯಯನವನ್ನು ಮುಗಿಸಿದ್ದಾರೆ ಮತ್ತು ಅವರಲ್ಲಿ ಕೆಲವರು ವಿವಾಹವಾಗಿದ್ದರೆ  ನನ್ನ ಮೊಮ್ಮಕ್ಕಳೊಬ್ಬರು ಯುಎಸ್ ನಲ್ಲಿ ಮೆಡಿಸಿನ್ ವ್ಯಾಸಂಗ ನಡೆಸಿದ್ದಾರೆ.ನನ್ನ ಮಕ್ಕಳು ಶಾಲೆಯಲ್ಲಿದ್ದಾಗ ನಾನು ಅವರಿಗೆ ಇಂಗ್ಲಿಷ್ ಮತ್ತು ಗಣಿತವನ್ನು ಕಲಿಸಿದೆ, ಆದರೆ ಆಗ ನನಗೆ ಪದವಿ ಪಡೆಯಲು ಸಾಧ್ಯವಾಗಲಿಲ್ಲ ನಾನು 87 ವರ್ಷದವನಿದ್ದಾಗ ನನ್ನ ಹೆಂಡತಿಹಾಸಿಗೆ ಹಿಡಿದಳು.ನು ದಿನವಿಡೀ ಅವಳ ಹಾಸಿಗೆಯ ಪಕ್ಕದಲ್ಲಿದ್ದೆ ಮತ್ತು ನನ್ನ ಹೆಣ್ಣುಮಕ್ಕಳೂ ಸಹ ಬರುತ್ತಿದ್ದರುಒಂದು ದಿನ, ಆಕೆಯ ವೈದ್ಯ ಕೋರ್ಸ್ ಒಂದಕ್ಕೆ ಅರ್ಜಿ ಹಾಕುವ ಸಲುವಾಗಿ ಫಾರ್ಮ್ ಸಂಗ್ರಹಿಸಲು  ಇಗ್ನೌಗೆ ಹೋಗಬೇಕಾಗಿರುವುದರಿಂದ ಅವನು ಆ ದಿನ ಸ್ವಲ್ಪ ಮುಂಚೆಯೇ ಹೊರಟು ಹೋಗುವುದಾಗಿ ಹೇಳಿದನು. ನಾನು ಸಹ ಅರ್ಜಿ ಸಲ್ಲಿಸಬಹುದೇ ಎಂದು ತಿಒಳಿದು ಬರಲು ನಾನು ಅವರಲ್ಲಿ ಕೇಳಿದ್ದೆ.

ಇಗ್ನೌದಲ್ಲಿ ವಯಸ್ಸಿಗೆ  ಯಾವುದೇ ನಿರ್ಬಂಧವಿಲ್ಲ ಎಂದು ಅವರು ಕಂಡುಕೊಂಡರು ಮತ್ತು ನಂತರ ನಾನು ಸಾರ್ವಜನಿಕ ಆಡಳಿತದಲ್ಲಿ ಪದವಿಗಾಗಿ ಕೋರ್ಸ್‌ಗೆ ಸೇರಿಕೊಂಡೆ, 'ನಾನು ಅದನ್ನು ಪೂರ್ಣಗೊಳಿಸುವಷ್ಟು ಕಾಲ ಜೀವಂತವಾಗಿರುತ್ತೇನೆ ಎಂದು ನನಗೆ ತಿಳಿದಿರಲಿಲ್ಲ! ಆದರೆ ನಾನು ನನ್ನ ಪದವಿ ಮುಗಿದ ನಂತರಸ್ನಾತಕೋತ್ತರ ಪದವಿಗಾಗಿ ಅರ್ಜಿ ಹಾಕಿದ್ದೆ. "ಅವರು ಹೇಳಿದರು.

ಕಳೆದ ಆರು ವರ್ಷಗಳಲ್ಲಿ, ಅವರ ದಿನಚರಿ ಬೆಳಿಗ್ಗೆ 5 ಗಂಟೆಗೆ ಎದ್ದು ಪುಸ್ತಕ ಓದುವದರ ಸುತ್ತ ಸುತ್ತುತ್ತದೆ."ನಾನು ಬೆಳಿಗ್ಗೆ ಬೇಗನೆ ಅಧ್ಯಯನ ಮಾಡುತ್ತೇನೆ, ಇದರಿಂದಾಗಿ ನಾನು ದಿನವಿಡೀ ಇತರ ಚಟುವಟಿಕೆಗಳಿಗೆ ಸಮಯವನ್ನು ಇಡುತ್ತೇನೆ. ನಾನು ಕ್ರೀಡಾ ಉತ್ಸಾಹಿ ಮತ್ತು ಕ್ರೀಡೆಗಳನ್ನು ನೋಡುವುದನ್ನು ಪ್ರೀತಿಸುತ್ತೇನೆ" ಅವರು ವಿವರಿಇಸಿದ್ದಾರೆ.

ಇನ್ನು ಈ ವಯೋವೃದ್ದರ ಕೈಬರಹ ವಯಸ್ಸಿಗನುಗುಣ ಅಸ್ಪಷ್ಟವಾಗಿದ್ದ ಕಾರಣ ಇದಕ್ಕಾಗಿ ಅವರು ತಮ್ಮ ಮಗಳ ನೆರವನ್ನು ಪಡೆಇದ್ದಾರೆ.  ಪರೀಕ್ಷೆಯ ಸಮಯದಲ್ಲಿ ಮಗಳು ಅವರ ಪರ ಲೇಖಕಿಯೂ ಆಗಿದ್ದಳು ಕಳೆದ ವರ್ಷ ಅವನು ತನ್ನ ಹೆಂಡತಿಯನ್ನು ಕಳೆದುಕೊಂಡರು. "ನಾನು ನನ್ನ ಪದವಿಯನ್ನು ಪೂರ್ಣಗೊಳಿಸಿದ್ದೆ ಆದರೆ ಒಂದು ವರ್ಷದ ನಂತರವೇ ನಾನು ಅದನ್ನು ಸ್ವೀಕರಿಸಿದೆ. ಆ ಅವಧಿಯಲ್ಲಿ, ನನ್ನ ಹೆಂಡತಿ ಅವಳ ಕೊನೆಯ ದಿನಗಳನ್ನು ಎಣಿಸುತ್ತಿದ್ದಳು.ನಾನು ಅವಳಿಗೆ ತನ್ನ ಪದ್ವಿ ವಿಚಾರ ಹೇಳಿದೆನಲ್ಲದೆ 'ಅಂತಿಮವಾಗಿ, ನಿಮ್ಮ ಪತಿ ಪದವೀಧರ' ಎಂದು ಹೇಳಿದೆ ಆ ವಿಚಾರ ತಿಳಿದ  ಎರಡು ದಿನಗಳ ಬಳಿಕ ಆಕೆ ನಿಧನರಾದರು, "ಅವರು ಹೇಳಿದರು.

ಭವಿಷ್ಯದ ಯೋಜನೆ ಕುರಿತು ಹೇಳಿ ಎಂದಾಗ "ನಾನು ಎಂಫಿಲ್ ಅನ್ನು ಮುಂದುವರಿಸಲು ಬಯಸಿದ್ದೆ ಆದರೆ ನನ್ನ ಹೆಣ್ಣುಮಕ್ಕಳೊಬ್ಬರು, 'ಎಂಫಿಲ್ನಲ್ಲಿ ಕೆಲವು ಮಾತ್ರವೇ ಸೀಟುಗಳಿವೆ ಮತ್ತು ನೀವು ಅದಕ್ಕೆ ಸೇರಿಕೊಂಡರೆ, ನೀವು ಅರ್ಹ ಅಭ್ಯರ್ಥಿಯ ಸ್ಥಾನವನ್ನು ಕಸಿದುಕೊಳ್ಳುತ್ತೀರಿ ಎಂದಳು. ನಾನು ಇನ್ನೊಂದು ಸ್ನಾತಕೋತ್ತರ ಕೋರ್ಸ್ ಅನ್ನು ಮುಂದುವರಿಸಬಹುದೇ ಎಂದು ಯೋಜಿಸುತ್ತಿದ್ದೇನೆ. ತನ್ಮಧ್ಯೆ, ಕೆಲವು ವೆಬ್‌ಸೈಟ್‌ಗಳು ನೀಡುವ ಅಲ್ಪಾವಧಿಯ ಕೋರ್ಸ್‌ಗಳಿವೆ ಎಂದು ನಾನು ಕಲಿತಿದ್ದೇನೆ, ಆದ್ದರಿಂದ ನಾನು ಬಹುಶಃ ಅವುಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತೇನೆ" ಎಂದು ಅವರು ಹೇಳಿದರು.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp