ಕೊನೆಗೂ ಬಂದೇ ಬಿಡ್ತು ಹೊಸ ವರ್ಷ: 2020ರ ವಿಶೇಷವೇನು? ಇಲ್ಲಿದೆ ಕೆಲ ಮಾಹಿತಿ...

2-3 ದಶಕಗಳಿಂದ ನಿರೀಕ್ಷಿಸುತ್ತಿದ್ದ ಹಾಗೂ ಮಂತ್ರದಂತೆ ಪಠಿಸುತ್ತಿದ್ದ 2020 ವರುಷದ ಆಗಮನವಾಗಿದೆ. ಇದು ಕೇವಲ ವರ್ಷವಲ್ಲ, ಒಂದು ನೂತನ ದಶಕದ ಆರಂಭವಾಗಿದೆ.

Published: 01st January 2020 09:45 AM  |   Last Updated: 08th January 2020 04:07 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: 2-3 ದಶಕಗಳಿಂದ ನಿರೀಕ್ಷಿಸುತ್ತಿದ್ದ ಹಾಗೂ ಮಂತ್ರದಂತೆ ಪಠಿಸುತ್ತಿದ್ದ 2020 ವರುಷದ ಆಗಮನವಾಗಿದೆ. ಇದು ಕೇವಲ ವರ್ಷವಲ್ಲ, ಒಂದು ನೂತನ ದಶಕದ ಆರಂಭವಾಗಿದೆ. 

ಮಾಜಿ ರಾಷ್ಟ್ರಪತಿ, ಮೇರು ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಆದಿಯಾಗಿ ಅನೇಕ ದೂರಗಾಮಿ ದಿಗ್ದರ್ಶಕರು, ವಿವಿಧ ದೇಶಗಳು, ಸರ್ಕಾರಗಳು, ಖಾಸಗಿ ಸಂಸ್ಥೆಗಳು, ಹೀಗೆ ವಿಶ್ವದ ಎಲ್ಲರೂ ಮಹತ್ತರವಾದದ್ದು ಎಂದೇ ಭಾವಿಸಿ, ಬಣ್ಣಿಸಿದ್ದ ದಶಕವಿದು. 

ಮಹತ್ವಾಕಾಂಕ್ಷಿ ಯೋಜನೆಗಳು ಗುರಿ ತಲಪುಬೇಕಿದ್ದ, ಮೈಲಿಗಲ್ಲುಗಳನ್ನು ನೆಡಬೇಕಿದ್ದ ದಶಮಾನ ಇದಾಗಿದೆ. 2020 ಎಂಬ ನೂತನ ಕಾಲಘಟಕ್ಕೆ ಪ್ರವೇಶವಾಗಿದ್ದು, ಈ ನೂತನ 2020 ವರ್ಷ ಕೆಲ ವಿಶೇಷತೆಗಳನ್ನು ಹೊಂದಿದೆ. 

ಪ್ರತಿ 4 ವರ್ಷಕ್ಕೊಮ್ಮೆ ಬರುವ ಅಧಿಕ ವರ್ಷ 2020ರಲ್ಲಿ ಮತ್ತೆ ಘಟಿಸಲಿದೆ. ಅಂದರೆ, 2020ರ ಫೆಬ್ರವರಿ ತಿಂಗಳಿನಲ್ಲಿ 28 ದಿನಗಳ ಬದಲಾಗಿ 29 ದಿನ ಇರಲಿದೆ. ಪರಿಣಾಮ ವರ್ಷದ ದಿನಗಳ ಸಂಖ್ಯೆ 365ರ ಬದಲಾಗಿ 366 ದಿನಗಳಾಗಲಿದೆ. 

365 ದಿನಗಳ ಇರುವ ವರ್ಷವನ್ನು ಸಾಮಾನ್ಯ ವರ್ಷವೆಜೂ. 366 ದಿನಗಳ ಬರುವ ವರ್ಷವನ್ನು ಅಧಿಕ ವರ್ಷವೆಂದೂ ಕರೆಯಲಾಗುತ್ತದೆ. ಇದಲ್ಲದೆ ಅಧಿಕ ವರ್ಷದ ಮತ್ತೊಂದು ವಿಶೇಷವೇನೆಂದರೆ, ಈ ವರ್ಷದಲ್ಲಿ ಜನವರಿ, ಏಪ್ರಿಲ್ ಹಾಗೂ ಜುಲೈ ತಿಂಗಳ ಮೊದಲ ದಿನ ಬುಧವಾರದಿಂದಲೇ ಆರಂಭವಾಗುತ್ತದೆ. 

Stay up to date on all the latest ವಿಶೇಷ news with The Kannadaprabha App. Download now
facebook twitter whatsapp