ತೆಂಗಿನ ಎಲೆಗಳಿಂದ ಸ್ಟ್ರಾ ತಯಾರಿಕೆ: ಪ್ರೊಫೆಸರ್ ಅನ್ವೇಷಣೆಗೆ ವಿದೇಶಗಳಿಂದ ಭಾರಿ ಬೇಡಿಕೆ! 

ಆಂಗ್ಲ ಭಾಷಾ ಪ್ರೊಫೆಸರ್ ಒಬ್ಬರು ತಯಾರಿಸಿರುವ ತೆಂಗಿನ ಎಲೆಗಳ ಸ್ಟ್ರಾ ಈಗ ವಿದೇಶಗಳ ಗಮನ ಸೆಳೆಯುತ್ತಿದೆ. 
ತೆಂಗಿನ ಎಲೆಗಳಿಂದ ಸ್ಟ್ರಾ ತಯಾರಿಕೆ: ಪ್ರೊಫೆಸರ್ ಅನ್ವೇಷಣೆಗೆ ವಿದೇಶಗಳಿಂದ ಭಾರಿ ಬೇಡಿಕೆ!
ತೆಂಗಿನ ಎಲೆಗಳಿಂದ ಸ್ಟ್ರಾ ತಯಾರಿಕೆ: ಪ್ರೊಫೆಸರ್ ಅನ್ವೇಷಣೆಗೆ ವಿದೇಶಗಳಿಂದ ಭಾರಿ ಬೇಡಿಕೆ!

ಬೆಂಗಳೂರು: ಆಂಗ್ಲ ಭಾಷಾ ಪ್ರೊಫೆಸರ್ ಒಬ್ಬರು ತಯಾರಿಸಿರುವ ತೆಂಗಿನ ಎಲೆ ಸ್ಟ್ರಾ ಈಗ ವಿದೇಶಗಳ ಗಮನ ಸೆಳೆಯುತ್ತಿದೆ. 

ಕ್ರೈಸ್ಟ್ ವಿವಿಯ ಇಂಗ್ಲಿಷ್ ಪ್ರೊಫೆಸರ್ ಆಗಿರುವ ಪ್ರೊ.ಸಜಿ ವರ್ಗೀಸ್, ಕಾಲೇಜಿನ ಕ್ಯಾಂಪಸ್ ನಲ್ಲಿ ಉದುರಿದ್ದ ತೆಂಗಿನ ಎಲೆಗಳನ್ನು ಗಮನಿಸಿ ಉಪಯುಕ್ತವಾಗಿ ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು, ಆಗ ಹೊಳೆದಿದ್ದೇ ಪ್ಲಾಸ್ಟಿಕ್ ಸ್ಟ್ರಾಗಳಿಗೆ ಪರ್ಯಾಯವಾಗಿ ಬಳಕೆ ಮಾಡಬಲ್ಲ ಪರಿಸರ ಸ್ನೇಹಿ ತೆಂಗಿನ ಎಲೆ ಸ್ಟ್ರಾಗಳ ತಯಾರಿಕೆ. 

ತಾವು ತಯಾರಿಸಿದ್ದ ತೆಂಗಿನ ಎಲೆ ಸ್ಟ್ರಾಗಳನ್ನು ವರ್ಗೀಸ್ ಅವರು 10 ದೇಶಗಳಿಗೆ ಸ್ಯಾಂಪಲ್ ಕಳಿಸಿಕೊಟ್ಟಿದ್ದರು. ಈಗ 10 ಮಿಲಿಯನ್ ಗೂ ಹೆಚ್ಚು ಸ್ಟ್ರಾಗಳನ್ನು ಜನವರಿ ಅಂತ್ಯದ ವೇಳೆಗೆ ಪೂರೈಕೆ ಮಾಡಬೇಕೆಂಬ ಬೇಡಿಕೆ ಬಂದಿದೆ. 

ಒಂದು ತೆಂಗಿನ ಗರಿಯಲ್ಲಿರುವ ಎಲೆಗಳಿಂದ ಸುಮಾರು 600 ಸ್ಟ್ರಾಗಳನ್ನು ಮಾಡಬಹುದು, ಅದನ್ನು 6 ತಿಂಗಳ ಕಾಲ ಬಳಕೆ ಮಾಡಬಹುದು. 3-13 ಎಂಎಂ ಡಯಾಮೀಟರ್ ಹೊಂದಿರುವ ಸ್ಟ್ರಾಗಳ ಬೆಲೆಯನ್ನು 3-10 ರೂಪಾಯಿವರೆಗೆ ನಿಗದಿಪಡಿಸಲಾಗುತ್ತದೆ ಎಂದು ವರ್ಗೀಸ್ ಹೇಳಿದ್ದಾರೆ. 

ಕ್ರೈಸ್ಟ್ ಕಾಲೇಜು ಈ ತೆಂಗಿನ ಎಲೆಗಳ ಸ್ಟ್ರಾ ತಯಾರಿಕೆಯ ಯೋಜನೆಯನ್ನು ರೂಪುಗೊಳಿಸಿದ್ದು, ಸ್ಟ್ರಾ ತಯಾರಿಕೆಗಾಗಿ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಮಲೇಷ್ಯಾ, ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾ, ಫಿಲಿಪೇನ್ಸ್, ಸ್ಪೇನ್, ಜರ್ಮನಿಗಳಿಗೆ ಕಳಿಸಿಕೊಡಲಾಗಿದ್ದು, ಒಟ್ಟಾರೆ 18 ಮಿಲಿಯನ್ ಸ್ಟ್ರಾಗಳಿಗೆ ಬೇಡಿಕೆ ಬಂದಿದೆ.  

ಮದುರೈ, ಕಾಸರಗೋಡು ಹಾಗೂ ಟ್ಯುಟಿಕೋರಿನ್ ಗಳ ಗ್ರಾಮಗಳಲ್ಲಿ ತೆಂಗಿನ ಎಲೆ ಸ್ಟ್ರಾ ತಯಾರಿಸುವ ಮೂರು ಯುನಿಟ್ ಗಳನ್ನು ವರ್ಗೀಸ್ ಸ್ಥಾಪಿಸಿದ್ದು ಮಹಿಳೆಯರಿಗೆ ಉದ್ಯೋಗ ಕೊಡಿಸಿದ್ದಾರೆ. ಮುಂದಿನ 3 ವರ್ಷಗಳಲ್ಲಿ 500 ಮಹಿಳೆಯರಿಗೆ ಉದ್ಯೋಗ ನೀಡುವುದು ಇವರ ಗುರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com