ಬೆಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳು, ಪರಿಚಾರಕರಿಗೆ ವಸತಿ ಗೃಹವಾದ ಹೋಟೆಲ್ 

ಗಾಂಧಿನಗರದಲ್ಲಿರುವ ಪ್ರತಿಷ್ಠಿತ ಲಕ್ಷ್ಮೀ ಹೋಟೆಲ್  ನಲ್ಲಿ ಸುಮಾರು 300 ಕೋಟಿ ರೂ. ಮೌಲ್ಯದ 42 ಕೊಠಡಿಯುಳ್ಳ ಜಾಗವನ್ನು  ಕ್ಯಾನ್ಸರ್ ಪೀಡಿತ ಮಕ್ಕಳು ಹಾಗೂ ಅವರ ಪರಿಚಾರಕರಿಗಾಗಿ ದಾನ ಮಾಡಲಾಗಿದೆ. 
ಲಕ್ಷ್ಮೀ ಹೋಟೆಲ್
ಲಕ್ಷ್ಮೀ ಹೋಟೆಲ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೃದಯ ಭಾಗ  ಗಾಂಧಿನಗರದಲ್ಲಿರುವ ಪ್ರತಿಷ್ಠಿತ ಲಕ್ಷ್ಮೀ ಹೋಟೆಲ್  ಪುನರ್ ನವೀಕರಣ ಕಾರ್ಯ ನಡೆಯುತ್ತಿದ್ದು, ಹೊಸ ಲೈಟ್ ಗಳನ್ನು ಅಳವಡಿಸಲಾಗುತ್ತಿದೆ. ದುರಸ್ಥಿ ಕಾರ್ಯ ನಡೆಯುತ್ತಿದ್ದು, ಕಿಚನ್  ಮೇಲ್ಧರ್ಜೇಗೇರಿಸಲಾಗಿದೆ

ಆದಾಗ್ಯೂ, ಈ ಹೋಟೆಲ್ ಬಾಗಿಲು ತೆರೆದರೆ ಇದು ಪೂರ್ತಿಯಾಗಿ ಹೋಟೆಲ್ ರೀತಿ ಕಾಣುವುದಿಲ್ಲ. ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಪರಿಚಾರಕರಿಗೆ ಬೋರ್ಡಿಂಗ್ ಸೌಲಭ್ಯ ನೀಡಲಾಗಿದೆ. 

ದಿವಂಗತ ಶ್ರೀನಿವಾಸಲು ನಾಯ್ಡು ಪತ್ನಿ  79 ವರ್ಷದ ಮೀರಾ ನಾಯ್ಡು 1977 ರಲ್ಲಿ ಸ್ಥಾಪಿಸಿರುವ ಈ ಹೋಟೆಲ್ ನಲ್ಲಿ ಸುಮಾರು 300 ಕೋಟಿ ರೂ. ಮೌಲ್ಯದ 42 ಕೊಠಡಿಯುಳ್ಳ ಆಸ್ತಿಯನ್ನು ಕಳೆದ ವರ್ಷ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿದ್ದಾರೆ

ಇದು ಆಸ್ಪತ್ರೆ ಅಲ್ಲ, ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಪರಿಚರಕರಿಗೆ ಊಚ ಹಾಗೂ ವಸತಿ ವ್ಯವಸ್ಥೆ ನೀಡಲಾಗುವುದು ಎಂದು ಶಂಕರ ಕ್ಯಾನ್ಸರ್ ಆಸ್ಪತ್ರೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ಬಿ. ಎಸ್. ಶ್ರೀನಾಥ್ ಹೇಳಿದ್ದಾರೆ.

ಮಗುವಿಗೆ ಒಂದು ವರ್ಷದ ಚಿಕಿತ್ಸೆಗಾಗಿ  ಒಂದು ಕುಟುಂಬಕ್ಕೆ ರೂ.  6 ಲಕ್ಷ ಖರ್ಚಾಗುತ್ತದೆ, ಇದರ ಅರ್ಧದಷ್ಟು ಬೆಂಗಳೂರಿನಲ್ಲಿ ಉಳಿಯುವ ವೆಚ್ಚವಾಗಿರುತ್ತದೆ. ಅನೇಕರು ವೆಚ್ಚದ ಕಾರಣದಿಂದಾಗಿ ಚಿಕಿತ್ಸೆಯನ್ನು ಪೂರ್ಣಗೊಳಿಸುವುದಿಲ್ಲ .ಈ ಸೌಲಭ್ಯವು ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು 50% ರಷ್ಟು ಕಡಿಮೆ ಮಾಡುತ್ತದೆ" ಎಂದು ಅವರು ಹೇಳಿದರು.

ಬಡ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಈ ಆಸ್ಪತ್ರೆಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ರಾಜ್ಯದಲ್ಲಿ ಅಂದಾಜು ಪ್ರತಿ ವರ್ಷ 500ರಿಂದ 600 ಮಕ್ಕಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಸಮೀಕ್ಷೆಯಿಂದ ತಿಳಿದುಬಂದಿದೆ. 

ಶಂಕರ ಆಸ್ಪತ್ರೆಯ ಪುನರ್ ನವೀಕರಣ ನಡೆಯುತ್ತಿದ್ದು, ಸಾಮೂಹಿಕ  ಕಿಚನ್ ನಿರ್ಮಾಣ ಕಾರ್ಯ ನಡೆಯುತ್ತಿದೆ. 42 ಕೊಠಡಿಗಳನ್ನು ಕ್ಯಾನ್ಸರ್ ರೋಗಿಗಳ ಕುಟುಂಬದವರಿಗೆ ಉಚಿತವಾಗಿ ನೀಡಲಾಗಿದೆ. ಸುರಕ್ಷತೆಯ ಉದ್ದೇಶದೊಂದಿಗೆ ಲಕ್ಷ್ಮಿ ಹೋಟೆಲ್ ನಲ್ಲಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ದುರಸ್ಥಿ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದು ಡಾ. ಶ್ರೀನಾಥ್ ತಿಳಿಸಿದರು.  

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಟುಡಿಯೋಗೆ ಹತ್ತಿರದಲ್ಲಿ ಲಕ್ಷ್ಮೀ ಹೋಟೆಲ್ ಇದ್ದು, ಒಂದು ಕಾಲದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅಂತಹ ಸ್ಟಾರ್ ನಟರು ಈ ಹೋಟೆಲ್ ಗೆ ಪ್ರತಿನಿತ್ಯ ಅತಿಥಿಗಳಾಗುತ್ತಿದ್ದರು. 

ನನ್ನ ಪತಿ ಸ್ಥಾಪಿಸಿದ ಈ ಹೋಟೆಲ್ ನ್ನು ಹೊಸ ಖರೀದಿದಾರರಿಂದ ಹಾಳು ಮಾಡಲು ಇಷ್ಟವಿರಲಿಲ್ಲ. ಕ್ಯಾನ್ಸರ್ ಪೀಡಿತ ಮಕ್ಕಳ ಅನೇಕ ಕುಟುಂಬಗಳು ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿರುವುದನ್ನು ತಿಳಿದು ಅವರಿಗೆ ಶಾಶ್ವತ ರೀತಿಯಲ್ಲಿ ಸಹಾಯ ಮಾಡುವ ನಿಟ್ಟಿನಲ್ಲಿ ಈ ಹೋಟೆಲ್ ನಲ್ಲಿ 42 ಕೊಠಡಿಗಳನ್ನು ದಾನ ಮಾಡಿರುವುದಾಗಿ ಮೀರಾ ನಾಯ್ಡು ತಿಳಿಸಿದರು.

ದುರಸ್ಥಿಗೊಂಡ ಹೊಸ ಕಟ್ಟಡದಲ್ಲಿ ವರ್ಷಕ್ಕೆ ಕನಿಷ್ಠ 300 ರೋಗಿಗಳನ್ನು ನೋಡಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ಡಾ.ಶ್ರೀನಾಥ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com