ಅಗ್ನಿಸಾಕ್ಷಿಯಾಗಿ ಅಲ್ಲ.... ಅಗ್ನಿ ಪರ್ವತ ಸಾಕ್ಷಿಯಾಗಿ ವಿವಾಹ..! 

ಎಲ್ಲರೂ ತಮ್ಮ ವಿವಾಹವನ್ನು ಅಗ್ನಿಸಾಕ್ಷಿಯಾಗಿ ಮಾಡಿಕೊಳ್ಳುತ್ತಾರೆ. ಆದರೆ, ಈ ಜೋಡಿ ಮಾತ್ರ ಜ್ವಾಲಾಮುಖಿ ಹೊರ ಸೂಸುವ “ಆಗ್ನಿಪರ್ವತ ಸಾಕ್ಷಿ” ಯಾಗಿ ವಿವಾಹ ಮಾಡಿಕೊಂಡಿದೆ. 
ಅಗ್ನಿಸಾಕ್ಷಿಯಾಗಿ ಅಲ್ಲ.... ಅಗ್ನಿ ಪರ್ವತ ಸಾಕ್ಷಿಯಾಗಿ ವಿವಾಹ..!
ಅಗ್ನಿಸಾಕ್ಷಿಯಾಗಿ ಅಲ್ಲ.... ಅಗ್ನಿ ಪರ್ವತ ಸಾಕ್ಷಿಯಾಗಿ ವಿವಾಹ..!

ಮನಿಲಾ: ಎಲ್ಲರೂ ತಮ್ಮ ವಿವಾಹವನ್ನು ಅಗ್ನಿಸಾಕ್ಷಿಯಾಗಿ ಮಾಡಿಕೊಳ್ಳುತ್ತಾರೆ. ಆದರೆ, ಈ ಜೋಡಿ ಮಾತ್ರ ಜ್ವಾಲಾಮುಖಿ ಹೊರ ಸೂಸುವ “ಆಗ್ನಿಪರ್ವತ ಸಾಕ್ಷಿ” ಯಾಗಿ ವಿವಾಹ ಮಾಡಿಕೊಂಡಿದೆ. 

ಅಚ್ಚರಿಯಾದರೂ..! ಸತ್ಯ, ಈ ವಿಲಕ್ಷಣ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ. ಯುವ ಜೋಡಿಯೊಂದು ಜ್ವಾಲಾಮುಖಿಯ ಸಾಕ್ಷಿಯಾಗಿ ವಿವಾಹ ಮಾಡಿಕೊಂಡಿದೆ. ನವ ವಧು-ವರ ಜೋಡಿಯೊಂದು ತಮ್ಮ ಮದುವೆಯನ್ನು ಅವಿಸ್ಮರಣೀವನ್ನಾಗಿಸಲು ಬಯಸಿ ಅದಕ್ಕಾಗಿ ಏನಾದರೂ ಮಾಡಬೇಕೆಂದು ವಿನೂತನ ಆಲೋಚನೆಗಿಳಿಯಿತು. 

ನಂತರ ಜೋಡಿಗೆ ಫಿಲಿಪೈನ್ಸ್ ತಾಲ್ ಜ್ವಾಲಾಮುಖಿ ನೆನಪಾಗಿ, ನಮ್ಮ ಮದುವೆ ಅಲ್ಲಿಯೇ ಮಾಡಿಕೊಂಡರೆ ಅವಿಸ್ಮರಣೀಯವಾಗಲಿದೆ ಎಂದು ನಿರ್ಧರಿಸಿತು. ಜೋಡಿ ಪರ್ವತ ಬಳಿ ಮದುವೆಗೆ ವ್ಯವಸ್ಥೆ ಮಾಡಿಕೊಂಡಿತು. ಜ್ವಾಲಾಮುಖಿ ಸ್ಫೋಟ “ಶುಭ ಮುಹೊರ್ತ”ವೆಂದು ನಿಗದಿಪಡಿಸಿಕೊಂಡಿತು. ವಿವಾಹಕ್ಕೆ ಸ್ವಲ್ಪ ಸಮಯದ ಮುಂಚೆ, ತಾಲ್ ಅಗ್ನಿಪರ್ವತ ತನ್ನೊಡಲಿನಿಂದ ಇದ್ದಕ್ಕಿದ್ದಂತೆ ಹೊಗೆ ಮತ್ತು ಬೂದಿಯನ್ನು ಹೊರಚಿಮ್ಮಿತು . ಏನೋ ಅಪಾಯಕಾರಿ ಘಟನೆ ನಡೆಯಲಿದೆ ಎಂದು ಮದುವೆಗೆ ಬಂದಿದ್ದ ಸಂಬಂಧಿಕರೆಲ್ಲರೂ ಭಯ ಭೀತಿ ವ್ಯಕ್ತಪಡಿಸಿದರೂ, ಜೋಡಿ ಮಾತ್ರ ವಿವಾಹ ರದ್ದುಗೊಳಿಸಲಿಲ್ಲ, ಇಲ್ಲವೇ ಮುಂದೂಡಲಿಲ್ಲ.ಕೊನೆಗೂ ಮದುವೆಯನ್ನು ಮಾಡಿಕೊಂಡಿದ್ದಾರೆ. 

ನಾವು ಧೈರ್ಯದಿಂದ ಮದುವೆಯಾಗಿದ್ದೇವೆ. ವಿವಾಹ ಕಾರ್ಯಕ್ರಮ, ಜ್ವಾಲಾಮುಖಿಯಿಂದ ಸುಮಾರು 10 ಕಿ.ಮೀ ದೂರದಲ್ಲಿ ನಡೆಯಿತು ಎಂಬುದು ಅಚ್ಚರಿ ಮೂಡಿಸಿದೆ. ಈ ನಿರ್ಧಾರದಿಂದ ’ ಜೀವನದಲ್ಲಿ ಅತ್ಯಂತ ಮಹತ್ವದ ಕ್ಷಣಗಳನ್ನು ಹೊಂದಲು ಸಾಧ್ಯವಾಯಿತು. ಇದು ನಮ್ಮ ಜೀವನದುದ್ದಕ್ಕೂ ಸಿಹಿ ಅನುಭವ ಒಂದು ನೆನಪು ಎಂದು ನವ ಜೋಡಿ ಸಂತೋಷದಿಂದ ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com