ಗಣರಾಜ್ಯೋತ್ಸವ: ಮೊದಲ ಭಾರಿಗೆ ಮಹಿಳಾ ತಂಡದಿಂದ ಬೈಕ್ ಸಾಹಸ

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಂಪೂರ್ಣ ಮಹಿಳಾ ಯೋಧರ ತಂಡ ಇದೇ 26 ಗಣರಾಜ್ಯ ದಿನದ ಪರೇಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ  ಬೈಕ್ ಸಾಹಸ ಪ್ರದರ್ಶಿಸಲಿದೆ.

Published: 21st January 2020 01:39 PM  |   Last Updated: 21st January 2020 03:29 PM   |  A+A-


Women CRPF bikers to make Republic Day parade debut with daredevil stunts

ಗಣರಾಜ್ಯ: ಮೊದಲ ಭಾರಿಗೆ ಮಹಿಳಾ  ತಂಡದಿಂದ ಬೈಕ್ ಸಾಹಸ

Posted By : Srinivas Rao BV
Source : Online Desk

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಂಪೂರ್ಣ ಮಹಿಳಾ ಯೋಧರ ತಂಡ ಇದೇ 26 ಗಣರಾಜ್ಯ ದಿನದ ಪರೇಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬೈಕ್ ಸಾಹಸ ಪ್ರದರ್ಶಿಸಲಿದೆ.

ತಂಡದಲ್ಲಿ  ಒಟ್ಟು 65 ಮಂದಿ ಸದಸ್ಯರಿದ್ದು, 350 ಸಿಸಿಯ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ 90 ನಿಮಿಷಗಳ ಕಾಲ ಪ್ರದರ್ಶನ ನೀಡಲಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಪಡೆಯಲ್ಲಿ ನಿಯೋಜಿತರಾಗಿರುವ ಇನ್ಸ್ಪೆಕ್ಟರ್ ಸೀಮಾ ಅವರು ತಂಡ ಮುನ್ನಡೆಸಲಿದ್ದಾರೆ. 

2014ರಲ್ಲಿ ಸಂಪೂರ್ಣ ಮಹಿಳೆಯರನ್ನು ಒಳಗೊಂಡ ತಂಡ ರಚಿಸಲು ಚಿಂತನೆ ನಡೆಸಿ, ಅದನ್ನು ಸಜ್ಜುಗೊಳಿಸಲಾಗಿದೆ ಎಂದು ಸಿಆರ್ಪಿಎಫ್ ವಕ್ತಾರ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮೋಸೆಸ್ ದಿನಕರನ್ ತಿಳಿಸಿದ್ದಾರೆ.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp