ಒಬ್ಬನೇ ಒಬ್ಬ ವಿದ್ಯಾರ್ಥಿಗೆ ಓರ್ವ ಶಿಕ್ಷಕಿ, ಓರ್ವ ಅಡುಗೆಯವರು: ತಿಂಗಳಿಗೆ ಸರ್ಕಾರದಿಂದ 59 ಸಾವಿರ ವೆಚ್ಚ, ಎಲ್ಲಿ ಅಂತೀರಾ?

ಅಭಿವೃದ್ದಿಯಲ್ಲಿ ಹಿಂದುಳಿದಿರುವ ಬಿಹಾರದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಏಕೈಕ ವಿದ್ಯಾರ್ಥಿಗೆ ಓರ್ವ ಶಿಕ್ಷಕಿ  ಹಾಗೂ ಅಡುಗೆಯವರಿದ್ದಾರೆ. ಬಿಹಾರ ಹೊರತುಪಡಿಸಿದರೆ ಈ ರೀತಿಯ ಒಂದರ ಅನುಪಾತದಲ್ಲಿನ ಶಾಲೆ ದೇಶದಲ್ಲಿ ಏಲ್ಲಿಯೂ ಕಾಣಸಿಗುವುದಿಲ್ಲ.
ಶಿಕ್ಷಕಿ ಪ್ರಿಯಾಂಕಾ ಕುಮಾರಿ, ವಿದ್ಯಾರ್ಥಿ ಜಾನ್ವಿ
ಶಿಕ್ಷಕಿ ಪ್ರಿಯಾಂಕಾ ಕುಮಾರಿ, ವಿದ್ಯಾರ್ಥಿ ಜಾನ್ವಿ

ಪಾಟ್ನಾ: ಅಭಿವೃದ್ದಿಯಲ್ಲಿ ಹಿಂದುಳಿದಿರುವ ಬಿಹಾರದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಏಕೈಕ ವಿದ್ಯಾರ್ಥಿಗೆ ಓರ್ವ ಶಿಕ್ಷಕಿ  ಹಾಗೂ ಅಡುಗೆಯವರಿದ್ದಾರೆ. ಬಿಹಾರ ಹೊರತುಪಡಿಸಿದರೆ ಈ ರೀತಿಯ ಒಂದರ ಅನುಪಾತದಲ್ಲಿನ ಶಾಲೆ ದೇಶದಲ್ಲಿ ಏಲ್ಲಿಯೂ ಕಾಣಸಿಗುವುದಿಲ್ಲ.

ಪಾಟ್ನಾದಿಂದ 170 ಕಿಲೋ ಮೀಟರ್ ದೂರದಲ್ಲಿರುವ ಗಯಾ ಜಿಲ್ಲೆಯ ಕಿಗಾನ್ ಗರ್ಸಾಯ್ ಬ್ಲಾಕ್  ನ ಮಾನಸಬಿಘ ಗ್ರಾಮದಲ್ಲಿ ಈ ಶಾಲೆ ಇದೆ.   ಏಳು ವರ್ಷದ ಜಾನ್ವಿ ಕುಮಾರ್ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಕೈಕ ವಿದ್ಯಾರ್ಥಿಯಾಗಿದ್ದಾಳೆ. ಈಕೆ ಬಡ ಪಾಸ್ವನ್ ಕುಟುಂಬಕ್ಕೆ ಸೇರಿದ್ದು, ಎಂತಹ ಮಳೆ , ಚಳಿ ಇದ್ದರೂ ಕೂಡಾ  ಒಂದು ದಿನವೂ ತರಗತಿಗೆ ಗೈರಾಗದೆ ಹಾಜರಾಗುತ್ತಾಳೆ.

ಆಕೆಯ ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರದ ಶಿಕ್ಷಣ ಇಲಾಖೆ  ತಿಂಗಳಿಗೆ ಬರೋಬ್ಬರಿ  59 ಸಾವಿರ ರೂ. ವೆಚ್ಚ ಮಾಡುತ್ತಿದೆ.  ಶಾಲೆಯ ಕಟ್ಟಡವೂ ಚೆ್ನಾಗಿದ್ದು, ಒಳಗಡೆ ಉತ್ತಮ ಸೌಕರ್ಯಗಳಿವೆ. ಆದರೆ, ವಿದ್ಯಾರ್ಥಿಗಳೇ ಇಲ್ಲ.

ಏಕ ಅಂತಸ್ತಿನ ಕಟ್ಟಡದಲ್ಲಿ ನಾಲ್ಕು  ಕ್ಲಾಸ್ ರೂಮ್ ಗಳಿವೆ. ಏಕೈಕ ವಿದ್ಯಾರ್ಥಿ ಹಾಗೂ ಶಿಕ್ಷಕಿಗೆ ಮಧ್ಯಾಹ್ನದ ಬಿಸಿಯೂಟ ಮಾಡಿಕೊಡಲು ಗಾಯತ್ರಿ ದೇವಿ ತಿಂಗಳಿಗೆ 1500 ರೂ. ನೀಡಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಬಿಹಾರ ಶಿಕ್ಷಣ ವ್ಯವಸ್ಥೆ ಬಗ್ಗೆ ಯಾರೂ ಕೂಡಾ ಇಲ್ಲಿ ದೂರು ನೀಡುವುದಿಲ್ಲ. ಸರ್ಕಾರಿ ಶಾಲೆಗಳ ಬಗ್ಗೆ ಇಲ್ಲಿನ ಜನರಿಗೆ ವಿಶ್ವಾಸವಿಲ್ಲ, ಗ್ರಾಮೀಣ ಪ್ರದೇಶದವರು ಕೂಡಾ ತಮ್ಮ ಮಕ್ಕಳನ್ನು ಗುಣಮಟ್ಟದ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗೆ ಸೇರಿಸುತ್ತಾರೆ.

ಮಾನಸಬಿಘದಲ್ಲಿ ಸುಮಾರು 15 ಪಾಸ್ವನ್ ಕುಟುಂಬದವರು ಹಾಗೂ 40ಕ್ಕೂ ಹೆಚ್ಚು ಉನ್ನತ ಜಾತಿಗೆ ಸೇರಿದ ಕುಟುಂಬಗಳಿವೆ. ಅನೇಕ ಖಾಸಗಿ ಶಾಲೆಗಳು ತಲೆ ಎತ್ತಿದ್ದೂ ಶೇ. 98 ಕ್ಕೂ ಹೆಚ್ಚು ಮಕ್ಕಳನ್ನು ಉತ್ತಮ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳಿಗೆ ಪೋಷಕರು ಸೇರಿಸುತ್ತಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶಿಕ್ಷಕಿ ಪ್ರಿಯಾಂಕಾ ಕುಮಾರಿ, ಕೆಲ ದಿನಗಳ ಹಿಂದೆ ಒಪ್ಪ ಪುರುಷ ಶಿಕ್ಷಕ ಕೂಡಾ ಇದೇ ಶಾಲೆಯಲ್ಲಿ ಇದ್ದರು. ಆದರೆ, ಅವರನ್ನು ಮೋಸದಿಂದ ನೇಮಕವಾಗಿದ್ದಕ್ಕೆ ಅವರನ್ನು ಅಮಾನತು ಮಾಡಿದ ನಂತರ ಏಕೈಕ ವಿದ್ಯಾರ್ಥಿಗೆ ನಾನೊಬ್ಬಳೆ ಇರುವುದಾಗಿ ಹೇಳಿದರು. 

ಒಬ್ಬರು ಶಾಲೆಗೆ ನೋಂದಣಿಯಾಗಿದ್ದರೂ ಒಂದು ವಿದ್ಯಾರ್ಥಿ ಮಾತ್ರ ಪ್ರತಿನಿತ್ಯ ತರಗತಿಗೆ ಬರುತ್ತಾರೆ. ಇನ್ನಿತರ ಎಂಟು ಮಕ್ಕಳು ಕೂಡಾ ಖಾಸಗಿ ಶಾಲೆಯಲ್ಲಿ ಸಮಯ ಕಳೆಯುತ್ತಾರೆ. ಇಲ್ಲಿ ಬಂದು ಪರೀಕ್ಷೆ ಮಾತ್ರ ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ರಜೆ ಹಾಗೂ ಇತ್ತಿತರ ಸಂದರ್ಭಗಳಲ್ಲಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರನ್ನು ಒತ್ತಾಯಿಸುತ್ತಾನೆ. ಆದರೆ, ಯಾರೂ ಕೂಡಾ ನಮ್ಮ ಮಾತಿಗೆ ಕಿವಿಗೂಡಲ್ಲ, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದನ್ನು ಪ್ರಿಯಾಂಕಾ ಒಪ್ಪಿಕೊಳ್ಳುತ್ತಾರೆ.

ನಾನೇ ವೈಯಕ್ತಿಕವಾಗಿ ಹಳ್ಳಿಗಳಿಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರನ್ನು ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಗಯಾ ಮುಸ್ತಾಫ ಹುಸೇನ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com