ಗಂಗಾವತಿ ತಾ. ಆಸ್ಪತ್ರೆಯ ಯಶೋಗಾಥೆ: ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಬೆನ್ನುಹುರಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಗಂಗಾವತಿಯ ತಾಲೂಕು ಆಸ್ಪತ್ರೆಯಲ್ಲಿ ಬಳ್ಲಾರಿ ಜಿಲ್ಲೆ ನೆಲ್ಲೋಡಿ ಗ್ರಾಮಸ್ಥನೊಬ್ಬರಿಗೆ ಬೆನ್ನುಹುರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಶೇಷವೆಂದರೆ ಈ ಶಸ್ತ್ರಚಿಕಿತ್ಸೆಯು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿತ್ತು. ಇಂತಹಾ ಮಹತ್ವದ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ರಾಜ್ಯದ ಪ್ರಥಮ ಆಸ್ಪತ್ರೆ ತಮ್ಮದಾಗಿದೆ ಎ
ಗಂಗಾವತಿ ತಾ. ಆಸ್ಪತ್ರೆಯ ಯಶೋಗಾಥೆ: ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಬೆನ್ನುಹುರಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಕೊಪ್ಪಳ: ಗಂಗಾವತಿಯ ತಾಲೂಕು ಆಸ್ಪತ್ರೆಯಲ್ಲಿ ಬಳ್ಲಾರಿ ಜಿಲ್ಲೆ ನೆಲ್ಲೋಡಿ ಗ್ರಾಮಸ್ಥನೊಬ್ಬರಿಗೆ ಬೆನ್ನುಹುರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಶೇಷವೆಂದರೆ ಈ ಶಸ್ತ್ರಚಿಕಿತ್ಸೆಯು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿತ್ತು. ಇಂತಹಾ ಮಹತ್ವದ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ರಾಜ್ಯದ ಪ್ರಥಮ ಆಸ್ಪತ್ರೆ ತಮ್ಮದಾಗಿದೆ ಎಂದು ದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವದಿ ಹೇಳಿದ್ದಾರೆ.

ವೈದ್ಯರಾದ ಸಲಾವುದ್ದೀನ್ ಖಾಲಿದ್, ಎಂ ಡಿ ರೇಣುಕರಾಧ್ಯ, ಸುಜಾತಾ ಮತ್ತು ಶಿವರಾಜ್ ಪಾಟೀಲ್ ಈ ಪ್ರಕ್ರಿಯೆಯನ್ನು ನಿರ್ವಹಿಸಿದ್ದು ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಶಸ್ತ್ರಚಿಕಿತ್ಸೆಗಾಗಿ ರೋಗಿಯು ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕಾಗಿತ್ತು.

ಶಸ್ತ್ರಚಿಕಿತ್ಸೆ ಪಡೆದಿರುವ ನೆಲ್ಲೋಡಿ ಗ್ರಾಮದ 24 ವರ್ಷದ ಹೊಸಕೆರಪ್ಪನವರು ಇದೀಗ ಉತ್ತಮವಾಗಿ ಚೇತರಿಸಿಕೊಂಡಿದ್ದು ಕೆಲ ದಿನಗಳ ವಿಶೇಷ ಗಮನದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು.

ಇನ್ನೂ ಒಂದು ಸಂಗತಿ ಎಂದರೆ ಇದೇ ಆಸ್ಪತ್ರೆಯ ವೈದ್ಯರು ಈ ತಿಂಗಳ ಎರಡನೇ ವಾರದಲ್ಲಿ ಇನ್ನೋರ್ವ ರೋಗಿಗೆ ಮೊಣಕಾಲು ಹಾಗೂ ಸೊಂಟದ ಬದಲಿ ಕೀಲು ಜೋಡಣೆ ಚಿಕಿತ್ಸೆಯನ್ನು ಸಹ ಯಶಸ್ವಿಯಾಗಿ ಪೂರೈಸಿದ್ದಾರೆ. ಇನ್ನು ಕೊಪ್ಪಳದ ಜಿಲ್ಲಾ  ಗಂಗಾವತಿಯ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ  ಅನಿತಾ ಜಿ 100 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಗರ್ಭಾಶಯ ಶಸ್ತ್ರಚಿಕಿತ್ಸ ಮಾಡಿಸಿಕೊಂಡಿದ್ದರು.

ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಗಂಗಾವತಿ ಅತಿ ಹೆಚ್ಚು ಸುರಕ್ಷಿತವಾಗಿದ್ದು ಸುರಕ್ಷಿತ ಜನನ ಹೆರಿಗೆಗಳ ಅಂಕಿ ಅಂಶವನ್ನೂ ದಾಖಲಿಸಿದೆ. ಗಣ್ಯರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೆ ಗುಣಾತ್ಮಕ ಸೇವೆ ಒದಗಿಸಲು ಆಸ್ಪತ್ರೆಯು ಉದ್ದೇಶಿಸಿದೆ ಎಂದು ಡಾ. ಸವದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com