'ಗ್ರ್ಯಾಂಡ್ ಮಾ ಅರ್ಥ್' ಪ್ರಶಸ್ತಿ ಗೆದ್ದ ಬೆಂಗಳೂರು ಅಜ್ಜಿ!

ಲವು ದಿನಗಳ ಕಠಿಣ ಪರಿಶ್ರಮ ಮತ್ತು ಅಭ್ಯಾಸದ ನಂತರ, ಆರತಿ ಬಿ ಚಟ್ಲಾನಿಯವರ ಪ್ರಯತ್ನಗಳು ಫಲ ನೀಡಿವೆ. ಜನವರಿ 19-23ರ ನಡುವೆ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಗ್ರ್ಯಾಂಡ್ ಮಾ ಯೂನಿವರ್ಸ್ ಸ್ಪರ್ಧೆಯಲ್ಲಿ 62 ವರ್ಷದ ಈಕೆ ಗ್ರ್ಯಾಂಡ್ ಮಾ ಅರ್ಥಿ ಕಿರೀಟವನ್ನು ತಮ್ಮದಾಗಿಸಿಕೊಂಡರು.ಸ್ಪರ್ಧೆಯ ಸಂಪೂರ್ಣ ಅನುಭವ ಅಚ್ಚರಿಯೂ ಸ್ಮರಣೀಯವೂ ಆಗಿತ್ತು ಎಂದಿರುವ ಚಟ್ಲಾನಿ, "ಅಲ್ಲಿ

Published: 29th January 2020 01:07 PM  |   Last Updated: 29th January 2020 01:07 PM   |  A+A-


ಆರತಿ ಬಿ ಚಟ್ಲಾನಿ

Posted By : Raghavendra Adiga
Source : The New Indian Express

ಬೆಂಗಳೂರು: ಹಲವು ದಿನಗಳ ಕಠಿಣ ಪರಿಶ್ರಮ ಮತ್ತು ಅಭ್ಯಾಸದ ನಂತರ, ಆರತಿ ಬಿ ಚಟ್ಲಾನಿಯವರ ಪ್ರಯತ್ನಗಳು ಫಲ ನೀಡಿವೆ. ಜನವರಿ 19-23ರ ನಡುವೆ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಗ್ರ್ಯಾಂಡ್ ಮಾ ಯೂನಿವರ್ಸ್ ಸ್ಪರ್ಧೆಯಲ್ಲಿ 62 ವರ್ಷದ ಈಕೆ ಗ್ರ್ಯಾಂಡ್ ಮಾ ಅರ್ಥಿ ಕಿರೀಟವನ್ನು ತಮ್ಮದಾಗಿಸಿಕೊಂಡರು.ಸ್ಪರ್ಧೆಯ ಸಂಪೂರ್ಣ ಅನುಭವ ಅಚ್ಚರಿಯೂ ಸ್ಮರಣೀಯವೂ ಆಗಿತ್ತು ಎಂದಿರುವ ಚಟ್ಲಾನಿ, "ಅಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಯೂ  ಇದನ್ನು ಅನುಭವಿಸಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಬೆಂಗಳೂರು ಸೆಕ್ಸಜೆನೇರಿಯನ್ ಇವರಾಗಿದ್ದು ಮೂರು ಸುತ್ತುಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ  "ಮೊದಲ ಸುತ್ತಿನಲ್ಲಿ, ನಾನು ಲೆಹೆಂಗಾ ಮತ್ತು ವಧುವಿನ ಆಭರಣಗಳನ್ನು ಧರಿಸಿದ್ದೆ"  ಬಳಿಕ ಪ್ರತಿಭಾ ಪ್ರದರ್ಶನ ಸುತ್ತಿನಲ್ಲಿ ನೃತ್ಯದ ಮೂಲಕ  ನೃತ್ಯ ಸಂಯೋಜನೆಯು ಹೊಸ ಆವೃತ್ತಿಯೊಂದಿಗೆ ಬಂದೆನು ಈ ಸ್ಪರ್ಧೆಗಾಗಿ  ನನ್ನ ಮೊಮ್ಮಕ್ಕಳೊಂದಿಗೆ ನನ್ನ ಅನೇಕ ಚಿತ್ರಗಳನ್ನು  ತೆಗೆದುಕೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ.

ಸ್ಪರ್ಧೆಯ ಸಮಯದ ಎದೆ ಢವಗುಡುತ್ತಿತ್ತು ಎನ್ನುವ ಚಟ್ಲಾನಿ ಸ್ಪರ್ಧೆಯ ಪ್ರತಿನಿಧಿಯಾಗಿ ಚಟ್ಲಾನಿಯನ್ನು ಆಯ್ಕೆ ಮಾಡಿದ ವುಮನ್ ಆಫ್ ದಿ ಯೂನಿವರ್ಸ್‌ನ ರಾಷ್ಟ್ರೀಯ ನಿರ್ದೇಶಕಿ ವೀಣಾ ಜೈನ್ ಗೆ ಧನ್ಯವಾದ ಸೂಚಿಸಿದ್ದಾರೆ. ಇನ್ನು ಜೈನ್ ಮಾತನಾಡಿ  “ನಾನು ಅವಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೆ ಮತ್ತು ಅವಳು ಅದಕ್ಕೆ ಅನುಗುಣವಾಗಿ ಬದುಕಿದಳು.ಅವಳು ಅನೇಕ ಜಾಗತಿಕ ಸ್ನೇಹಿತೆಯರೊಡನೆ ಆಗಮಿಸುವುದನ್ನು ಕಾಣಲು  ಸಂತೋಷವಾಗಿದೆ. ” ಎಂದಿದ್ದಾರೆ. ಚಟ್ಲಾನಿಯ ಕುಟುಂಬವೂ ಸಹ ಅವರ ತಯಾರಿಯ ಉದ್ದಕ್ಕೂ ಬೆಂಬಲಿದ್ದವು  "ಸ್ಪರ್ಧೆ ನಡೆದಾಗ ಭಾರತದಲ್ಲಿ ಬೆಳಿಗ್ಗೆ 4 ಗಂಟೆ ಆಗಿತ್ತು ಆದರೆ ನಮ್ಮಲ್ಲಿ ಎಲ್ಲರೂ ಎಚ್ಚರವಿದ್ದರು.  ನನ್ನ ಸಹೋದರಿ ಅನಿತಾ ಅಮರ್ನನೆ ಉಪಸ್ಥಿತರಿದ್ದರು ಮತ್ತು ಲೈವ್ ವಿಡಿಯೋ ಕರೆಯ ಮೂಲಕ ಸಮಾರಂಭವನ್ನು ವೀಕ್ಷಿಸಲು ಅವರಿಗೆ ಸಹಾಯ ಮಾಡಿದರು, ” ಅವರು ವಿವರಿಸಿದ್ದಾರೆ.

Stay up to date on all the latest ವಿಶೇಷ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp